Narendra Modi: ಶೀಘ್ರದಲೇ ಭಾರತದಲ್ಲಿ ಬರಲಿದೆ ಹೊಸ ಕಾನೂನು!

ಮೋದಿ ಅವರು ದೇಶದಲ್ಲಿ ಏಕರೂಪದ ಕಾನೂನು ಜಾರಿಗೆ ತರುವ ಸೂಚನೆ ನೀಡಿದ್ದಾರೆ, ಈ ಕುರಿತು ಮಾಹಿತಿ ತಿಳಿಯಿರಿ.

PM Narendra Modi: ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ದೇಶದ ಜನರು ಆರ್ಥಿಕವಾಗಿ ಸಬಲರಾಗ ಬೇಕು ಎನ್ನುವ ಕಾರಣದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.

ಇನ್ನು 2024 ರಲ್ಲಿ ಕೂಡ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮುಂಬರುವ ಚುನಾವಣೆಗಾಗಿ ವಿವಿಧ ಪಕ್ಷಗಳು ಸಿದ್ಧತೆ ನಡೆಸುತ್ತಿದೆ. ಇದೀಗ ಮೋದಿ ಅವರು ದೇಶದಲ್ಲಿ ಏಕರೂಪದ ಕಾನೂನು ಜಾರಿಗೆ ತರುವ ಸೂಚನೆ ನೀಡಿದ್ದಾರೆ. ಈ ಕುರಿತು ಮಾಹಿತಿ ತಿಳಿಯೋಣ.

Modi instructed to implement uniform law
Image Credit: Economictimes

ಒಂದು ದೇಶ ಒಂದು ಕಾನೂನು
ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಜಾರಿ ಬಗ್ಗೆ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ. ‘ಮೇರಾ ಬೂಟ್ ಸಬ ಸೆ ಮಜಬೂತ್’ ಅಭಿಯಾನದ ಅಂಗವಾಗಿ ಮಧ್ಯಪ್ರದೇಶದ ಬೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಅವರು ಭಾಷಣ ಮಾಡಿದ್ದಾರೆ. ಹಾಗೆಯೆ ವಿಪಕ್ಷಗಳು ಚುನಾವಣೆ ಗೆಲ್ಲಲು ಉಚಿತ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ.

ಏಕರೂಪದ ಕಾನೂನು ಜಾರಿಗೆ ತರುವ ಸೂಚನೆ ನೀಡಿದ ಮೋದಿ
ಒಂದು ಮನೆಯಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಇನ್ನೊಂದು ಕಾನೂನು ಇರಲು ಸಾಧ್ಯವೇ? ಇದರಿಂದ ಮನೆಯು ಕಾರ್ಯ ನಿರ್ವಹಿಸಲಾಗುತ್ತದೆಯೇ? ಇಂತಹ ದ್ವಂದ್ವ ವ್ಯವಸ್ಥೆಯಿಂದ ದೇಶ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂದು ಮೋದಿ ಅವರು ಪ್ರಶ್ನಿಸಿದ್ದಾರೆ.

Modi instructed to implement uniform law
Image Credit: Thestatesman

ಸಂವಿದಾನದಲ್ಲೂ ಎಲ್ಲರಿಗು ಸಮಾನ ಹಕ್ಕು ಇದೆ. ಮದುವೆ, ವಿಚ್ಛೇದನ, ವಾರಸುದಾರರಿಗೆ , ನಿರ್ವಹಣೆ ಮತ್ತು ಎಲ್ಲ ನಾಗರಿಕರಿಗೆ ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪ ನಾಗರೀಕ ಸಂಹಿತೆ ವಿಷಯವನ್ನು ಪ್ರತಿಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆಳೆಯಲು ಮತ್ತು ಪ್ರಚೋದಿಸಲು ಬಳಸುತ್ತಿವೆ.

Join Nadunudi News WhatsApp Group

ಮುಸ್ಲಿಮರ ಹಿತಾಸಕ್ತಿ ಕಾಪಾಡಬೇಕು ಎನ್ನುವ ಭಾವನೆಯಿದ್ದರೆ ಮುಸ್ಲಿಂ ಕುಟುಂಬಗಳು ಶಿಕ್ಷಣ ಉದ್ಯೋಗದಲ್ಲಿ ಹಿಂದುಳಿಯುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group