ಇಲ್ಲಿದೆ ನೋಡಿ ಪರುಶುರಾಮರ ಆಯುಧ ಕೊಡಲಿ, ಈ ಸ್ಥಳ ನಿಜಕ್ಕೂ ಈಗ ಎಲ್ಲಿದೆ ಗೊತ್ತಾ ನೋಡಿ ಓಮ್ಮೆ ಹೋಗಿಬನ್ನಿ

ಪರಶುರಾಮರ ಜನ್ಮಸ್ಥಳ ರೇಣುಕಾತೀರ್ಥ. ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮದೇವರ ತಲೆಮಾರಿನವರಾಗಿದ್ದರು.
ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ಎತ್ತಿದ ಒಂದೊಂದು ಅವತಾರವೂ ಅತ್ಯಂತ ರೋಚಕ. ಶ್ರೀಮನ್ನಾರಾಯಣನ ಆರನೇ ಅವತಾರವೇ ಪರಶುರಾಮ.

ಅತ್ಯಂತ ಬಲಿಷ್ಠನೂ, ವಿನಯಶಾಲಿಯೂ ಆಗಿದ್ದ ಪರಶುರಾಮ ಭ್ರಷ್ಟ ಕ್ಷತ್ರಿಯರನ್ನೆಲ್ಲಾ ಸದೆಬಡಿವ ಉದ್ದೇಶದಿಂದ ತ್ರೇತಾಯುಗದಲ್ಲಿ ಜನಿಸಿದ ಅಂತ ಪುರಾಣಗಳು ಹೇಳುತ್ತವೆ. ಏಳು ಜನ ಚಿರಂಜೀವಿಗಳ ಪೈಕಿ ಪರಶುರಾಮರೂ ಸಹ ಒಬ್ಬರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹುಟ್ಟುವಾಗಲೇ ಬ್ರಾಹ್ಮಣರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.ಯುದ್ಧ, ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು.Mahabharat - Watch Episode 6 - Karna starts learning archery on Disney+  Hotstar

ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಹೊರಟ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು, ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು.

ಸದ್ಯ ಈಗ ಈ ಪರುಶುರಾಮ ಬಳಸಿದ ಆ ಕೊಡಲಿ ಎಲ್ಲಿದೆ ಎನ್ನುವುದರ ಬಗ್ಗೆ ಚರ್ಚೆಯಾಗಿದೆ. ಇಷ್ಟಕ್ಕೂ ಆ ಸ್ಥಳದ ಬಗ್ಗೆ ಮಾಹಿತಿ ಕೊಡ್ತೀವಿ ನೋಡಿ ಒಮ್ಮೆ .ಪರಶುರಾಮನು ಬಳಸುತ್ತಿದ್ದ ಆ ಪ್ರಬಲ ಅಸ್ತç ಪರಶು ಈಗ ಝಾರ್ಕಂಡ್‌ನ ಗುಮ್ಲಾ ಜಿಲ್ಲೆಯಿಂದ 60 ಕಿಲೋಮೀಟರ್ ದೂರದಲ್ಲಿ ಒಂದು ದಟ್ಟಾರಣ್ಯದಲ್ಲಿದೆ. ಪರಶುರಾಮನ ಪರಶುವಿದೆ.Ajab- Gajab: Parshuram's farsa has been kept for thousands of years, still  no rust | हजारों सालों से रखा है परशुराम का फरसा, अब भी नहीं लगी जंग -  दैनिक भास्कर हिंदी

ಹೌದು ಈ ಪ್ರಬಲ ಅಸ್ತವನ್ನು ಪರಮಶಿವನ ಸ್ಮರಣೆ ಮಾಡಿ ಪರುಶುರಾಮ ಗಳಿಸಿರುತ್ತಾರೆ. ಪರಶು ಎಂದರೆ ಕೊಡಲಿ ಎಂದರ್ಥ. ಈ ಕೊಡಲಿ ಬಳಸಿ ಅನೇಕ ಜನರ ಶಿರಚ್ಚೇದನವನ್ನು ಪರಶುರಾಮ ಮಾಡಿದ್ದಾರೆ.. ಸಾವಿರಾರು ವರ್ಷಗಳ ಹಿಂದೆಯಲ್ಲಿ ಬಳಸ್ತಾಯಿದ್ದಂತಹ ಕೊಡಲಿ ಈಗಲೂ ಸಹ ಸ್ವಲ್ಪವೂ ಕಳೆ ಕಳೆದುಕೊಳ್ಳದೇ ತು’ಕ್ಕು ಹಿಡಿಯದೇ ಹಾಗೇಯಿದೆ ಎಂದ್ರೆ ಇದರಲ್ಲಿ ಎಷ್ಟು ಮಹತ್ವ ಇರಬೇಡಾ ನೀವೆ ಊಹಿಸಿ. ಇನ್ನು ಈ ಕೊಡಲಿ ತಾಂಗಿನಾಥ್ ದೇವಸ್ಥಾನ ಧಾಮದಲ್ಲಿದೆ.

Join Nadunudi News WhatsApp Group

ಹೌದು ಒಮ್ಮೆ ಶ್ರೀರಾಮ ಶಿವನ ಧನಸ್ಸನ್ನು ಮುರಿದು ಹಾಕ್ತಾನೆ ಅನ್ನೋ ಸಿಟ್ಟಿಗೆ ಪರಶುರಾಮ ಅವನ ಮೇಲೆ ಕೊಡಲಿ ಪ್ರಯೋಗ ಮಾಡಲಿಕ್ಕೆ ಮುಂದಾಗ್ತಾನಂತೆ.. ಆಗ ಶ್ರೀರಾಮ ವಿಷ್ಣುವಿನ ಅವತಾರ ಎಂಬುವುದು ಅರ್ಥವಾಗುತ್ತೆ, ಬಳಿಕ ತನ್ನ ತಪ್ಪಿನ ಅರಿವಾದಾಗ ಈ ದಟ್ಟಾರಣ್ಯವಿರುವ ತಾಂಗಿನಾತ್ ದೇವಸ್ಥಾನ ಧಾಮದಲ್ಲಿ ಕುಳಿತುಬಿಡುತ್ತಾನೆ.. ಹೀಗೆ ಕುಳಿತವನು ತನ್ನ ಕೊಡಲಿಯನ್ನು ಅಲ್ಲೇ ಬಿಟ್ಟು ಶಿವ ಸ್ಮರಣೆಯಲ್ಲಿ ಮಗ್ನನಾಗ್ತಾನಂತೆ. ಈ ಹಿನ್ನಲೆ ಆ ಕೊಡಲಿ ಅಲ್ಲಿಯೇ ಪ್ರತಿಷ್ಟಾಪನೆಯಾಯಿತು ಎನ್ನುವ ಕತೆಯಿದೆ.lord shiva trident is still available in baba tanginath dham | यहां आज भी  मौजूद है भगवान शिव का त्रिशूल, शनिदेव से नाराज होकर किया था वार | Patrika  News

Join Nadunudi News WhatsApp Group