ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರಿಗೆ ಮತ್ತು ಪಡೆಯದೇ ಇರುವವರಿಗೆ ಬಂಪರ್ ಗುಡ್ ನ್ಯೂಸ್, ಯೋಜನೆಯಲ್ಲಿ ದೊಡ್ಡ ಬದಲಾವಣೆ.

ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಜನರ ಅನುಕೂಲದ ದೃಷ್ಟಿಯಿಂದ ದಿನದಿಂದ ದಿನಕ್ಕೆ ಹೊಸ ಯೋಜನೆಯನ್ನ ಜಾರಿಗೆ ತರಲಾಗುತ್ತಿದ್ದು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಬಹಳ ಸಂತೋಷವಾದ ವಿಷಯವಾಗಿದೆ. ಇನ್ನು ನಿಮಗೆಲಾ ತಿಳಿದಿರುವ ಹಾಗೆ ದೇಶದಲ್ಲಿ 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಯರಿಗೆ ಮತ್ತು ವಿಧವೆಯರಿಗೆ ಮಾಸಿಕವಾಗಿ ಪಿಂಚಣಿ ಹಣವನ್ನ ನೀಡಲಾಗುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಕೆಲವು ತಿಂಗಳುಗಳ ಹಿಂದೆ ಈ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿ ಮಾಸಿಕ ಪಿಂಚಣಿಯನ್ನ ಹೆಚ್ಚಳ ಕೂಡ ಮಾಡಲಾಗಿತ್ತು ಎಂದು ಹೇಳಬಹುದು.

ಇನ್ನು ಈಗ ದೇಶದಲ್ಲಿ ಮಾಸಿಕವಾಗಿ ಯಾವುದೇ ಪಿಂಚಣಿಯನ್ನ ಪಡೆಯುತ್ತಿರುವ ಎಲ್ಲಾ ಜನರಿಗೆ ಮತ್ತು ಪಿಂಚಣಿ ಪಡೆಯದೆ ಇರುವ ಜನರಿಗೂ ಸಿಹಿ ಸುದ್ದಿಯನ್ನ ಕೇಂದ್ರ ಸರ್ಕಾರ ನೀಡಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಸಿಹಿಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ವೃದ್ದಾಪ್ಯ ವೇತನ, ವಿಧವಾ ವೇತನ, ವಿಲಕಚೇತನರ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ಮೈತ್ರಿ ಯೋಜನೆಗಳ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆಯುತ್ತಿರುವವರಿಗೆ ಹಾಗು ಇನ್ನೂ ಕೂಡ ಪಿಂಚಣಿ ಹಣವನ್ನ ಪಡೆಯದೇ ಇದ್ದಾವರಿಗೆ ರಾಜ್ಯ ಸರ್ಕಾರ ಬಂಪರ್ ಸಿಹಿ ಸುದ್ದಿಯನ್ನ ನೀಡಿದೆ.

Pension changes

ಹೌದು ಸ್ನೇಹಿತರೆ ಆದಾಯ ಮಿತಿಯನ್ನ 12 ಸಾವಿರ ರೂಪಾಯಿಯಿಂದ 32 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 2012 ರಲ್ಲಿ ಬಡತನ ರೇಖೆಯಿಂದ ಕೆಳಗಿರುವ ಬಡವರಿಗೆ ಗ್ರಾಮೀಣ ಭಾಗದಲ್ಲಿ 12 ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ 17 ಸಾವಿರ ರೂಪಾಯಿ ಆದಾಯ ಮಿತಿಯನ್ನ ನಿಗಧಿ ಮಾಡಲಾಗಿತ್ತು. ಸ್ನೇಹಿತರೆ ಈಗ ಆದಾಯ ಮಿತಿಯನ್ನ ಹೆಚ್ಚಳ ಮಾಡಲಾಗಿದೆ, ಆಹಾರ ಇಲಾಖೆ ಬಿಪಿಎಲ್ ಪಡಿತರ ಚೀಟಿಯನ್ನ ವಿತರಣೆ ಮಾಡಲು ಆದಾಯ ಮಿತಿಯನ್ನ ಏರಿಕೆ ಮಾಡಿತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಇದನ್ನ ಅನ್ವಯಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವನ್ನ ಕೈಗೊಳ್ಳಲಾಗಿದೆ.

ಇಲ್ಲಿಯ ತನಕ ಅತೀ ಬಡವರಿಗೆ ಮಾತ್ರ ಪ್ರತಿ ತಿಂಗಳು ಪಿಂಚಣಿ ಹಣವನ್ನ ನೀಡಲಾಗುತ್ತಿತ್ತು, ಆದರೆ ಇನ್ನುಮುಂದೆ ಹೆಚ್ಚಿನ ಆದಾಯ ಇರುವವರಿಗೂ ಕೂಡ ಪ್ರತಿ ತಿಂಗಳು ಪಿಂಚಣಿ ಹಣವನ್ನ ನೀಡಲು ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದೆ. ಇಲ್ಲಿಯ ತನಕ ಯಾವುದೇ ಪಿಂಚಣಿಗೆ ಅರ್ಜಿ ಸಲ್ಲಿಸಿ ಹಣ ಇನ್ನೂ ಬಂದಿಲ್ಲವಾದರೆ ಈಗ ಮತ್ತೆ ಹೊಸ ಅರ್ಜಿ ಸಲ್ಲಿಸಿದರೆ ಪಿಂಚಣಿ ಹಣವನ್ನ ನೀಡಲಾಗುತ್ತದೆ. ಈಗ ಆದಾಯ ಮಿತಿಯನ್ನ ಹೆಚ್ಚಳ ಮಾಡಲಾಗಿತ್ತು ರಾಜ್ಯ ಸರ್ಕಾರ ಪಿಂಚಣಿ ಹಣವನ್ನ ಪಡೆಯುವವರಿಗೆ ಬಂಪರ್ ಸಿಹಿಸುದ್ದಿಯನ್ನ ನೀಡಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪಿಂಚಣಿ ಹಣ ಪಡೆಯುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Pension changes

Join Nadunudi News WhatsApp Group