PIB Fact Check: ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 52000 ರೂಪಾಯಿ, ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ PIB.

ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 52,000 ಸುದ್ದಿಗೆ ಸ್ಪಷ್ಟನೆ ನೀಡಿದ PIB

Pradhan Mantri Nari Shakti Yojana: ಕೇಂದ್ರ ಸರ್ಕಾರದಿಂದ (Central Government) ಸಾಕಷ್ಟು ಯೋಜನೆಗಳು ಬಿಡುಗಡೆಗೊಳ್ಳುತ್ತಿವೆ. ಇನ್ನು ಹೊಸ ಹೊಸ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ.

ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡಿತ್ತು. ಸರ್ಕಾರ ಮಹಿಳೆಯರಿಗಾಗಿ 52,000 ರೂ. ನಗದು ನೀಡಲಿದ್ದಾರೆ ಎನ್ನುವ ಹೊಸ ಯೋಜನೆಯ ಬಗ್ಗೆ ಮಾಹಿತಿ ವೈರಲ್ ಆಗಿದ್ದವು. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಪಿಐಬಿ ಸ್ಪಷ್ಟನೆ ನೀಡಿದೆ.

52000 will be given to the women of the country by the central government, PIB clarified the news
Image Credit: thestatesman

ಮಹಿಳೆಯರಿಗಾಗಿ ಹೊಸ ಯೋಜನೆ
ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ. ಅದರಲ್ಲೂ ಹೆಚ್ಚಾಗಿ ಕೇಂದ್ರ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡಲು ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ.

ಮಹಿಳೆಯರು ಸ್ವಾವಲಂಭಿ ಆಗಿ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಯೂಟ್ಯೂಬ್ ಚಾನೆಲ್ ನಲ್ಲಿ ಇದೀಗ ಕೇಂದ್ರದ ಮೋದಿ ಸರ್ಕಾರ ಮಹಿಳೆಯರಿಗಾಗಿ 52,000 ರೂಪಾಯಿ ನಗದು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ವೈರಲ್ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳೋಣ.

Join Nadunudi News WhatsApp Group

ಪ್ರದಾನ ಮಂತ್ರಿ ನಾರಿ ಶಕ್ತಿ ಯೋಜನೆಯ ಬಗ್ಗೆ ಸ್ಪಷ್ಟನೆ
ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ನಾರಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ರೂ. 52,000 ನಗದು ಮೊತ್ತವನ್ನು ನೀಡುತ್ತದೆ ಎಂದು ಸುನೋ ದುನಿಯಾ ಹೆಸರಿನ ಯೂಟ್ಯೂಬ್ ಚಾನೆಲ್ (Suno Duniya YouTube Channel) ನಲ್ಲಿ ಸುದ್ದಿ ಹರಡಿತ್ತು.

ಇದೀಗ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ಮಾಹಿತಿ ಸಂಪೂರ್ಣ ನಕಲಿ ಎಂದು PIB ಮಾಹಿತಿ ನೀಡಿದೆ. ಇಂತಹ ನಕಲಿ ಸುದ್ದಿಗಳ ಬಗ್ಗೆ ಎಚ್ಚರವಿರಲಿ ಎಂದಿದ್ದಾರೆ.

PIB said that the news that the women of the country will get 52000 from the central government
Image Credit: dhaaramagazine

Join Nadunudi News WhatsApp Group