Modi Meditation: ತಪಸ್ಸಿಗಾಗಿ ಮೋದಿ ಮಾಡಿದ್ದೇನು ಗೊತ್ತಾ…? ವಿವೇಕಾನಂದರ ಹಾದಿಯಲ್ಲಿ ನರೇಂದ್ರ ಮೋದಿ

ವಿವೇಕಾನಂದರ ಹಾದಿಯಲ್ಲಿ ನರೇಂದ್ರ ಮೋದಿ

PM Modi Meditation New Update: ಪ್ರಸ್ತುತ ದೇಶದಲ್ಲಿ ಜೂನ್ 1 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಕೊನೆಯ ಹಂತದ ಚುನಾವಣೆಯು ಬಾಕಿ ಇದ್ದ ಕಾರಣ ಚುನಾವಣಾ ಪ್ರಚಾರಗಳು ಜೋರಾಗಿಯೇ ನಡೆಯುತ್ತಿದೆ. ಇನ್ನು ಮುಂದಿನ 5 ವರ್ಷಗಳ ಕಾಲ ಅಧಿಕಾರವನ್ನು ಪಡೆಯಲು ಪ್ರಧಾನಿ ಮೋದಿ ಅವರು ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಚುನಾವಣೆಯ ಮುಕ್ತಾಯ ಎರಡು ದಿನಗಳ ಹಿಂದೆ ಪ್ರಚಾರವನ್ನು ನಿಲ್ಲಿಸಬೇಕಾಗುತ್ತದೆ. ಸದ್ಯ ಮೋದಿ ಅವರು ಕೊನೆಯ ಹಂತದ ಚುನಾವಣೆಯ ಸಮಯದಲ್ಲಿ ಹೊಸ ಯೋಜನೆ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೋದಿ ಈ ಸಮಯದಲ್ಲಿ ಧ್ಯಾನ ಮಾಡಲಿದ್ದಾರೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ. ಅಷ್ಟಕ್ಕೂ ಮೋದಿ ಅವರು ಎಲ್ಲಿ ಧ್ಯಾನ ಮಾಡಲಿದ್ದಾರೆ..? ಎಷ್ಟು ದಿನಗಳು ದ್ಯಾನದಲ್ಲಿರಲಿದ್ದಾರೆ…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

PM Modi Meditation New Update
Image Credit: Oneindia

ತಪಸ್ಸಿಗಾಗಿ ಮೋದಿ ಮಾಡಿದ್ದೇನು ಗೊತ್ತಾ…?
ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ವಿಶ್ರಾಂತಿಗಾಗಿ ಆಧ್ಯಾತ್ಮಿಕತೆಯತ್ತ ಮುಖ ಮಾಡಲಿದ್ದಾರೆ. ಮೇ 30 ರಿಂದ ಜೂನ್ 1 ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮೋದಿ ಇರಲಿದ್ದು, ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಹಗಲು ರಾತ್ರಿ ಧ್ಯಾನದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. ಗುರುವಾರ ಸಂಜೆ ಕನ್ಯಾಕುಮಾರಿಯಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲಾ ಪ್ರತಿಮೆ ಬಳಿಯಿರುವ ಸುಂದರ ವಿಆರ್‌ಎಂ ಗೆ ಪ್ರಧಾನಿ ಆಗಮಿಸುವ ನಿರೀಕ್ಷೆಯಿದೆ. ಜೂನ್ 1 ರಂದು ದೆಹಲಿಗೆ ಹೋಗಬಹುದು. ಅವರ ಭೇಟಿ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಇಲ್ಲ.

ವಿವೇಕಾನಂದರ ಹಾದಿಯಲ್ಲಿ ನರೇಂದ್ರ ಮೋದಿ
ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂದಿರದಲ್ಲಿ ಮೋದಿ ಅವರು ಧ್ಯಾನದಲ್ಲಿ ನಿರತರಾಗಿದ್ದಾರೆ. ಧ್ಯಾನದ ವೇಳೆ ಮೋದಿ 45 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂಬುದು ತಿಳಿದು ಬಂದಿದೆ. ಹೌದು, ಧ್ಯಾನದ ವೇಳೆ ನರೇಂದ್ರ ಮೋದಿ 45 ಗಂಟೆಗಳ ಕಾಲ ಊಟ ಮಾಡುವುದಿಲ್ಲ. ಅವರು ಹಣ್ಣುಗಳನ್ನು ಸಹ ತಿನ್ನುವುದಿಲ್ಲ. ಎರಡೂ ದಿನ ಅವರು ಪಾನೀಯಗಳನ್ನು ಮಾತ್ರ ಸೇವಿಸುತ್ತಾರೆ. ಜ್ಯೂಸ್ ಮತ್ತು ಹಾಲಿನಲ್ಲಿ ಎರಡು ದಿನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ ರಾಜಧಾನಿ ತಿರುವನಂತಪುರದಿಂದ ಕನ್ಯಾಕುಮಾರಿಗೆ ನರೇಂದ್ರ ಮೋದಿ ಆಗಮಿಸಿದರು. ಧ್ಯಾನ ಆರಂಭಿಸುವ ಮುನ್ನ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಧ್ಯಾನ ಆರಂಭಿಸಿದರು. ಎರಡು ದಿನಗಳ ಕಾಲ ಮೋದಿ ಧ್ಯಾನ ಮಾಡುತ್ತಿರುವುದರಿಂದ ಸ್ಮಾರಕದ ಸುತ್ತ 2,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Join Nadunudi News WhatsApp Group

PM Modi Meditate In Kanyakumari
Image Credit: Truescoopnews

Join Nadunudi News WhatsApp Group