Narendra Modi: ಅಂಬಿ ಮನೆಗೆ ಪತ್ರ ಕಳುಹಿಸಿದ ನರೇಂದ್ರ ಮೋದಿ, ನವ ಜೋಡಿಗೆ ಶುಭ ಹಾರೈಸಿದ ಮೋದಿ.

ಅಭಿಷೇಕ್ ಮತ್ತು ಅವಿವಾಗೇ ಶುಭ ಕೋರಿ ಪತ್ರ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ.

PM Narendra Modi: ಅಭಿಷೇಕ್ (Abhishek Ambareesh) ಹಾಗೂ ಅವಿವಾ (Aviva) ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗುತ್ತಿದೆ. ಚಂದನವನದ ಸ್ಟಾರ್ ನಟ ನಟಿಯರು ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕ್ಷಿಯಾಗಿದ್ದಾರೆ.ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ.

ಸಾಕಷ್ಟು ಕಲಾವಿದರು, ಗಣ್ಯರು. ಕುಟುಂಬದವರ ಜೊತೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಜೂನ್ 5 ರಂದು ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಷೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

Narendra Modi sent a letter to Ambi's house
Image Credit: asianetnews

ಅಂಬಿ ಮನೆಗೆ ಪತ್ರ ಕಳುಹಿಸಿದ ನರೇಂದ್ರ ಮೋದಿ
ಅಭಿಷೇಕ್ ಅಂಬರೀಷ್ ಅದ್ದೂರಿಯಾದ ಮದುವೆ, ಆರತಕ್ಷತೆ ಸಂಭ್ರಮ ಇದಾದ ನಂತರ ಸಂಗೀತ ಕಾರ್ಯಕ್ರಮವು ಸಹ ಅದ್ದೂರಿಯಾಗಿ ನಡೆದಿದೆ. ಈ ಎಲ್ಲ ಶುಭ ಸಮಾರಂಭಗಳಿಗೆ ನಟಿ ಸುಮಲತಾ ಸಾಕಷ್ಟು ಗಣ್ಯರಿಗೆ, ರಾಜಕಾರಣಿಗಳಿಗೆ ಪತ್ರಿಕೆ ನೀಡಿದ್ದಾರೆ, ಅದೇ ರೀತಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಹ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದರು.

ಆದರೆ ಪ್ರಧಾನಿ ಮೋದಿ ಅವರು ಕೆಲವು ಕಾರಣಗಳಿಂದ ಬ್ಯುಸಿಯಾಗಿದ್ದರಿಂದ ಅವರಿಗೆ ಮದುವೆಗೆ ಬರಲು ಆಗಲಿಲ್ಲವಂತೆ. ಇದೀಗ ನರೇಂದ್ರ ಮೋದಿ ಅಂಬಿ ಮನೆಗೆ ಅಭಿಷೇಕ್ ಮತ್ತು ಅವಿವಾಗೇ ಶುಭ ಕೋರಿ ಪತ್ರ ಕಳುಹಿಸಿದ್ದಾರೆ.

Narendra Modi sent a letter to Ambi's house
Image Credit: news18

ಅಭಿಷೇಕ್ ಅವಿವಾಗೇ ಶುಭ ಕೋರಿದ ನರೇಂದ್ರ ಮೋದಿ
ಜೂನ್ 5 ರಂದು ಅಭಿಷೇಕ್ ಅವಿವಾ ಮದುವೆ ಅದ್ದೂರಿಯಾಗಿ ನಡೆದಿದೆ. ಮದುವೆಗೂ ಕೆಲ ದಿನಗಳ ಹಿಂದೆಯೇ ಸುಮಲತಾ ಹಾಗು ಅಭಿಷೇಕ್ ಜೊತೆಯಾಗಿ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಮದುವೆಗೆ ಪ್ರಧಾನಿ ಮೋದಿ ಬರದಿದ್ದರೂ ಸಹ ಮದುವೆಗೆ ಪತ್ರದ ಮೂಲಕ ಅಭಿಷೇಕ್ ಅವಿವಾ ಜೋಡಿಗೆ ಶುಭಕೋರಿದ್ದಾರೆ.

Join Nadunudi News WhatsApp Group

ಸುಮಲತಾ ಅವರಿಗೆ ಪ್ರಧಾನಿ ಪತ್ರ ಬರೆದಿದ್ದಾರೆ. ಮದುವೆಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದಗಳು, ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ನವ ಜೋಡಿಯ ಜೀವನ ಪ್ರೀತಿ, ಸಂತೋಷದಿಂದ ಕೂಡಿರಲಿ. ಅಭಿನಂದನೆಗಳು ಅಭಿಷೇಕ್, ಅವಿವಾ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಬರೆದಿದ್ದಾರೆ.

Join Nadunudi News WhatsApp Group