ಪೋಸ್ಟ್ ಆಫೀಸ್ ಖಾತೆ ಹೊಂದಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ, ನಿಯಮದಲ್ಲಿ ಆಗಲಿದೆ ದೊಡ್ಡ ಬದಲಾವಣೆ.

ಈಗಿನ ಕಾಲದಲ್ಲಿ ಜನರು ಹಲವು ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಖಾತೆಗಳನ್ನ ಹೊಂದಿರುತ್ತಾರೆ ಎಂದು ಹೇಳಬಹುದು. ಕೆಲವು ಉಳಿತಾಯ ಮಾಡುವ ಉದ್ದೇಶದಿಂದ ಖಾತೆಯನ್ನ ತೆರೆದರೆ ಇನ್ನು ಕೆಲವರು ವ್ಯವಹಾರದ ದೃಷ್ಟಿಯಿಂದ ಖಾತೆಯನ್ನ ತೆರೆಯುತ್ತಾರೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ನಮಗೆ ತಿಳಿಯದ ಹಾಗೆ ಯಾವುದೇ ಒಂದು ಶುಲ್ಕದ ನೆಪದಲ್ಲಿ ನಮ್ಮಿಂದ ಹಣವನ್ನ ವಸೂಲಿ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಕೆಲವು ಭಾರಿ ಗ್ರಾಹಕರಿಗೆ ಗೊತ್ತೇ ಆಗದಂತೆ ಬ್ಯಾಂಕುಗಳು ಶುಲ್ಕ, ದಂಡ, ಸರ್ವಿಸ್ ಚಾರ್ಜ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ.

ಇನ್ನು ಬ್ಯಾಂಕುಗಳ ಮತ್ತೆ ಇತರೆ ಹಣಕಾಸು ಸಂಸ್ಥೆಗಳ ಬಹುತೇಕ ನಿಯಮಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ಎಂದು ಹೇಳಬಹುದು. ನಿಗದಿಪಡಿಸಲಾದ ಉಚಿತ ವಹಿವಾಟುಗಳ ನಂತರದ ವಹಿವಾಟುಗಳಿಗೆ ಹೆಚ್ಚಿನ ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ. ಇನ್ನು ಹಿಂದೆ ಅಂಚೆ ಕಚೇರಿಯಲ್ಲಿ ಖಾತೆಯನ್ನ ಹೊಂದಿದವರಿಗೆ ಯಾವುದೇ ದಂಡ ಮತ್ತು ಶುಲ್ಕವನ್ನ ವಿಧಿಸುತ್ತಿರಲಿಲ್ಲ, ಆದರೆ ಈಗ ಅಂಚೆ ಕಚೇರಿಯ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು ಇದನ್ನ ಜನರು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು.

Post office news

ಹಾಗಾದರೆ ಬದಲಾದ ಆ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಏಪ್ರಿಲ್ 1 ರಿಂದ ಹಣ ಪಡೆಯುವುದು ಮತ್ತು ಠೇವಣಿ ಇಡುವುದಾದರೆ ಪ್ರತಿ ವಹಿವಾಟಿನ ಮೇಲೆ ಶುಲ್ಕ ಹಾಕಲಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) 3 ವಿಧಗಳ ಉಳಿತಾಯ ಖಾತೆಗಳನ್ನು ಹೊಂದಿದೆ, ಹೌದು ಸಾಮಾನ್ಯ, ಡಿಜಿಟಲ್ ಹಾಗೂ ಪ್ರಾಥಮಿಕ ಖಾತೆಗಳನ್ನ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹೊಂದಿದೆ ಎಂದು ಹೇಳಬಹುದು.

ಇನ್ನು ಈ ಮೂರೂ ವಿಧಗಳ ಉಳಿತಾಯ ಖಾತೆಗಳ ಬಡ್ಡಿದರ ಒಂದೇ ಆಗಿದ್ದು ವಾರ್ಷಿಕ ಶೇ.4 ನಿಗದಿ ಮಾಡಲಾಗಿದೆ. ಸಾಮಾನ್ಯ ಉಳಿತಾಯ ಖಾತೆಯನ್ನು ಬ್ಯಾಂಕ್‌ನ ಕೇಂದ್ರಗಳಲ್ಲಿ ಹಾಗೂ ಮನೆ ಬಾಗಿಲಲ್ಲೇ ತೆರೆಯಬಹುದಾಗಿದೆ. ಶೂನ್ಯ ಬ್ಯಾಲೆನ್ಸ್ ನೊಂದಿಗೆ ಕೂಡಾ ಇದನ್ನು ತೆರೆಯಬಹುದು ಮತ್ತು ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸಬೇಕಿಲ್ಲ. ಇನ್ನು ಡಿಜಿಟಲ್ ಉಳಿತಾಯ ಖಾತೆಯನ್ನು ಬ್ಯಾಂಕ್‌ನ ಮೊಬೈಲ್ ಆಪ್ ಮೂಲಕ ತೆರೆಯಬಹುದು. 18 ವರ್ಷ ಮೇಲ್ಪಟ್ಟವರು ಆಧಾರ್, ಪಾನ್ ಕಾರ್ಡ್ ಹೊಂದಿರುವ ಯಾರಾದರೂ ಈ ಖಾತೆ ತೆರೆಯಬಹುದು ಮತ್ತು ಖಾತೆ ತೆರೆದ 12 ತಿಂಗಳೊಳಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಬ್ಯಾಂಕ್‌ನ ಕೇಂದ್ರಗಳು ಅಥವಾ ಅಂಚೆಯವನ (ಗ್ರಾಮೀಣ ಧನ ಸೇವಕ) ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಬಳಿಕ ಈ ಖಾತೆ ಸಾಮಾನ್ಯ ಉಳಿತಾಯ ಖಾತೆಯಾಗಿ ಅಪ್‌ಗ್ರೇಡ್ ಆಗುತ್ತದೆ.

Join Nadunudi News WhatsApp Group

Post office news

ಇನ್ನು ದೇಶದಲ್ಲಿ ಏಪ್ರಿಲ್ 1 ರಿಂದ ಕ್ಯಾಶ್ ವಿತ್ ಡ್ರಾ ಮತ್ತು ಕ್ಯಾಶ್ ಡಿಪಾಸಿಟ್ ಮತ್ತು ಪ್ರತಿ ಟ್ರಾನ್ಸಾಕ್ಷನ್ ಗಳ ಮೇಲೆ ಶುಲ್ಕ ಅನ್ವಯವಾಗಲಿವೆ. ಈಗಾಗಲೇ ಈ ಕುರಿತಾಗಿ IPPB ಗ್ರಾಹಕರಿಗೆ ಸಂದೇಶ ರವಾನಿಸಲಾಗಿದೆ. ಐಪಿಪಿಬಿ ಭಾರತೀಯ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ನಲ್ಲಿ ಏಪ್ರಿಲ್ 1 ರಿಂದ ಹಣ ಜಮಾ ಮಾಡಿದರೆ ಮತ್ತು ಹಿಂಪಡೆದರೆ ಶುಲ್ಕ ಪಾವತಿಸಬೇಕಿದೆ. ಅದೇ ರೀತಿ ಬ್ಯಾಂಕುಗಳು ಕೂಡ ಏಪ್ರಿಲ್ 1 ರಿಂದ ಪ್ರತಿ ವಹಿವಾಟಿಗೂ ಶುಲ್ಕ ವಿಧಿಸಬಹುದಾಗಿದೆ ಎಂದು ಹೇಳಲಾಗಿದೆ.

Join Nadunudi News WhatsApp Group