ಹಿಂದಿನ ಎರಡು ಚಿತ್ರ ಸೋತರು ಸಂಭಾವನೆ ಏರಿಸಿಕೊಂಡ ಪ್ರಭಾಸ್, ಈಗ ಎಷ್ಟು ಕೊಡಬೇಕು ಗೊತ್ತಾ, ಇಡೀ ಭಾರತದಲ್ಲೇ ಶ್ರೀಮಂತ ನಟ

ಬಾಹುಬಲಿ ಸಿನಿಮಾ ದಕ್ಷಿಣ ಭಾರತದ ಹೆಮ್ಮೆಯ ಸಿನಿಮಾ ಅಂತಾನೆ ಹೇಳಬಹುದು. ಈ ಸಿನಿಮಾ ಮಾಡಿದ ದಾಖಲೆ ಪಾತ್ರಧಾರಿಗಳ ಅಭಿನಯ ನಿರ್ದೇಶಕರ ಯೋಚನೆ ಅಬ್ಬಾ ಇದರಲ್ಲದರಿಂದ ಇಡೀ ವಿಶ್ವವೇ ಈ ಸಿನಿಮಾ ನೋಡಿ ಶ್ಲಾಘನೆ ವ್ಯಕ್ತಪಡಿಸಿತ್ತು. ಬಾಹುಬಲಿ ಮೊದಲ ಭಾಗ ಬರೋಬ್ಬರಿ 650 ಕೋಟಿ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯನ್ನು ಧೂಳೆಬ್ಬಿಸಿದ್ದರೆ ಎರಡನೇ ಭಾಗವೂ 1,796.56 ಕೋಟಿ ಹಣವನ್ನು ಪ್ರಪಂಚಾದ್ಯಂತ ಗಳಿಸಿದೆ.

ಅಬ್ಬಾ ಈ ಸಿನಿಮಾ ಮಾಡಿರುವ ದಾಖಲೆಗಳನ್ನು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಯುಗ ಯುಗ ಕಳೆದರು ಎಸ್ಎಸ್ ರಾಜಮೌಳಿ ಯವರು ಮಾಡಿರುವ ಈ ಸಿನಿಮಾ ಭಾರತದ ಸಿನಿಮಾದಲ್ಲಿ ದಂತಕಥೆಯಂತೆ ಬೆರತು ಹೋಗಿರುತ್ತದೆ. ಇದಾದ ಬಳಿಕ ಪ್ರಭಾಸ್ ದೊಡ್ಡ ನ್ಯಾಷನಲ್ ಸ್ಟಾರ್ ಆಗಿ ಬೆಳೆದರು ಆದರೆ ಏಕೋ ಏನೋ ಗೊತ್ತಿಲ್ಲ ಅದಾದ ಬಳಿಕ ಪ್ರಭಾಸ್ ನಟಿಸಿದ ಎರಡು ಚಿತ್ರಗಳು ನೆಲಕಚ್ಚಿವೆ.

Prabhas To Get Married After Jaan's Release - Filmibeat
ಹೌದು ಪ್ರಭಾಸ್ ನಟನೆಯ ಸಾಹೊ ಚಿತ್ರ ನಿರಾಸೆ ಮೂಡಿಸಿತ್ತು ಹಾಗೆಯೆ ಇತ್ತೀಚಿನ ರಾಧೆ ಶ್ಯಾಮ್ ಕೂಡ ಚಿತ್ರಮಂದಿರದಿಂದ ಸದ್ದಿಲ್ಲದೇ ಎತ್ತಂಗಡಿ ಆಗಿತ್ತು. ಈ ಎರಡು ಚಿತ್ರಗಳಿಗೂ ಕೋಟಿ ಕೋಟಿ ಸಂಭಾವನೆ ಪಡೆದಿದ್ದರು ಪ್ರಭಾಸ್ ಆದರೆ ಎರಡು ಚಿತ್ರಗಳು ಅಂದುಕೊಂಡಷ್ಟು ಕಲೆಕ್ಷನ್ ಮಾಡಿಲ್ಲ. ಆದರೆ ಇದರ ನಡುವೆ ಈಗ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವ ಪ್ರಭಾಸ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಗೆ ಸಂಭಾವನೆ ಏರಿಕೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದಿಪುರುಷ್ ಎಂಬ ಐತಿಹಾಸಿಕ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಮಿಂಚಲಿರುವ ಪ್ರಭಾಸ್ ಈ ಸಿನಿಮಾಗಾಗಿ ಶೇ.20 ರಷ್ಟು ಸಂಭಾವನೆ ಏರಿಕೆ ಮಾಡಿದ್ದಾರಂತೆ. ಪ್ರಭಾಸ್ ಸಂಭಾವನೆ ಕೇಳಿ ನಿರ್ಮಾಪಕರು ಕಂಗಾಲಾಗಿದ್ದಾರೆ ಎಂದು ಲೇಟೆಸ್ಟ್ ಆಗಿ ಹರಿದಾಡುತ್ತಿರುವ ಸುದ್ದಿ.
ಆದಿಪುರುಷ್ ಸಿನಿಮಾಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರಂತೆ ಪ್ರಭಾಸ್. ಈ ಹೊಸ ಬೇಡಿಕೆಯಿಂದಾಗಿ ಸಿನಿಮಾ ಅರ್ಧಕ್ಕೇ ನಿಲ್ಲಿಸಲೂ ಆಗದೇ ಚಿತ್ರತಂಡ ಈಗ ದುಬಾರಿ ಸಂಭಾವನೆ ನೀಡದೇ ಬೇರೆ ವಿಧಿಯಿಲ್ಲ ಎಂಬ ಸ್ಥಿತಿಯಲ್ಲಿದೆಯಂತೆ.Saaho' — Prabhas' big bang theory goes bust - Daily Times

Join Nadunudi News WhatsApp Group

Join Nadunudi News WhatsApp Group