ಚಿತ್ರರಂಗದಲ್ಲಿ ಮಿಂಚಿದ್ದ ಮಾಲಾಶ್ರೀ ತಮ್ಮ ಪ್ರಮೋದ್ ಚಕ್ರವರ್ತಿ ಏನಾದರು ಗೊತ್ತಾ, ಅಯ್ಯೋ

ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಕನ್ನಡ ನಟಿ, ಇವರು ಜನಿಸಿದ್ದು ಅಗಸ್ಟ್ 10, 1973 ರಲ್ಲಿ. ಇವರು ಮೊದಲಿಗೆ ಬಾಲ ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈವರೆಗೆ ಸುಮಾರು 34 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿ ಹೆಸರು ಮಾಡಿದ್ದಾರೆ.ಇವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ “ನಂಜುಂಡಿ ಕಲ್ಯಾಣ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು. ಗಜಪತಿ ಗರ್ವಭಂಗ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ ಶಕ್ತಿ, ವೀರ ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವುಗಳಲ್ಲಿ ಹಲವು ಸಿನಿಮಾಗಳು ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಹೀಗೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಇವರು ನಾಯಕನ ಪಾತ್ರಗಳಲ್ಲಿ ಚಿತ್ರಗಳಲ್ಲಿ ನಟಿಸುವುದು ಇವರ ವಿಶೇಷವಾಗಿದೆ. ಇದರಿಂದ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ.ಚಂದನವನದಲ್ಲಿ ಕನಸಿನ ರಾಣಿಯಾಗಿ ಒಂದು ಕಾಲದಲ್ಲಿ ಮೆರೆದವರು ಮಾಲಾಶ್ರೀ. ಮಾಲಾಶ್ರೀ ಎಂದರೆ ಮೊದಲು ನೆನಪಾಗುವುದು ಸಾಹಸ ಚಿತ್ರಗಳು.Akka (Kannada) kannada | Sun NXT

ಪ್ರೇಮಕಥೆ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಸಾಹಸಮಯ ಚಿತ್ರಗಳಲ್ಲಿ ಇವರಿಗೆ ಬೇಡಿಕೆ ಇತ್ತು. ಅಂದು ಸಾಹಸಮಯ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಮಾಲಾಶ್ರೀ. ಆ ಕಾಲದಲ್ಲಿ ಕನಸಿನ ರಾಣಿಯಾಗಿ ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದವರು. ಆ ವೇಳೆಗೆ ಮಾಲಾಶ್ರೀ ನಟಿಸುತ್ತಿದ್ದ ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಅಫೀಸಿನಲ್ಲಿ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದವು. ಸ್ಟಾರ್ ನಟರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ಮಾಲಾಶ್ರೀಗೂ ಅಂದು ಪ್ರೇಮಕತೆ, ಭಾವನಾತ್ಮಕ ಕಥೆಗಳು ಹಾಗೂ ಸಾಹಸಮಯ ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ.

ಅಂದಹಾಗೆ,1989 ರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಂಜುಂಡಿ ಕಲ್ಯಾಣ ಚಿತ್ರದ ಅಭಿನಯಿಸುವ ಮೂಲಕ ಚಂದನವನಕ್ಕೆ ಲಗ್ಗೆ ಇಟ್ಟರು. ಇವರ ನಟನೆಯ ಮೊದಲ ಸಿನಿಮಾವಾದರೂ ಅಂದುಕೊಳ್ಳುವುದ್ದಕ್ಕಿಂತ ಅದ್ಭುತವಾಗಿ ನಟಿಸಿದರು. ಆದಾದ ಬಳಿಕ ಮಾಲಾಶ್ರೀ ಅವರ ಅದೃಷ್ಟದ ಬಾಗಿಲು ತೆರೆಯಿತು. ಇನ್ನು ಅವಕಾಶಗಳು ಕನಸಿನ ರಾಣಿಯನ್ನು ಹುಡುಕೊಂಡು ಬಂದವು. ಅನೇಕ ಸ್ಟಾರನಟರ ಜೊತೆ ತೆರೆ ಹಂಚಿಕೊಂಡು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಆದಾಗಲೇಮಾಲಾಶ್ರೀ ಅವರಿಗೆ ಒಂದಷ್ಟು ಅಭಿಮಾನಿ ಬಳಗವೇ ಸೃಷ್ಟಿಯಾಯಿತು.Akka - ಅಕ್ಕ | Kannada Full HD Movie | Malashri | Arun Pandyan | Pramod |  Keerthiraj | Family Movie - YouTube

Join Nadunudi News WhatsApp Group

ಅದೊಂದು ಕಾಲದಲ್ಲಿ ಮಾಲಾಶ್ರೀಯವರ ಸೂಪರ್ ಡೂಪರ್ ಹಿಟ್ ಸಿನಿಮಾ ಅಕ್ಕ ದಲ್ಲಿ ಮಾಲಾಶ್ರೀ ಅವರೊಂದಿಗೆ ತಮ್ಮನ ಪಾತ್ರದಲ್ಲಿ ಅಭಿನಯಿಸಿದಂತಹ ಪ್ರಮೋದ್ ಚಕ್ರವರ್ತಿ ನಟಿ ಮಾಲಾಶ್ರೀ ಅವರಿಗೆ ಟಕ್ಕರ್ ಕೊಡುವಂತಹ ಅಭಿನಯವನ್ನು ಮಾಡಿದ್ದರು ಅಲ್ಲಿಂದ ನಟ ಪ್ರಮೋದ್ ಮುಂದೆ ಏನಾದರು ಎನ್ನುವ ಕುತೂಹಲ ಎಲ್ಲರಿಗು ಇದೆ. ಒಂದು ಕಡೆ ಮಾಲಾಶ್ರೀ ಆದರೆ ಇನ್ನೊಂದು ಕಡೆ ಇಷ್ಟು ದಿನ ಇವನು ಎಲ್ಲಿದ್ನಪ್ಪ ಎಂಥ ಅದ್ಭುತ ಅಭಿನಯ ಮಾಡ್ತಾನೆ ಎಂದು ನಿರ್ದೇಶಕ-ನಿರ್ಮಾಪಕರು ಲೆಕ್ಕ ಹಾಕುತ್ತಿದ್ದಂತಹ ಕಾಲವದು.

ಚಿಕ್ಕಂದಿನಿಂದಲೂ ಅಭಿನಯದ ಮೇಲೆ ಅತ್ಯದ್ಭುತ ಆಸಕ್ತಿಯನ್ನು ಹೊಂದಿದಂತಹ ಪ್ರಮೋದ್ ಚಕ್ರವರ್ತಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾರೆ ಆರಂಭದ ದಿನಗಳಲ್ಲಿ ಅವರಿಗೆ ಬಾಳನೌಕೆ ಎಂಬ ಸಿನಿಮಾಗೆ ನಾಯಕನಾಗುವಂತಹ ಅವಕಾಶ ದೊರೆಯುತ್ತದೆ. ಅನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಂತಹ ಪ್ರಮೋದ್ ಚಕ್ರವರ್ತಿ ಅವರು ಸಿನಿಮಾದಲ್ಲಿನ ಅಭಿನಯವನ್ನು ಕಡಿಮೆ ಮಾಡಿಬಿಡುತ್ತಾರೆ.

ಹೌದು 2000ನೇ ಇಸ್ವಿಯಲ್ಲಿ ಯಾವಾಗ ದರ್ಶನ್, ಸುದೀಪ್, ಗಣೇಶರಂತಹ ಸ್ಟಾರ್ ನಟರ ಅಬ್ಬರ ಜೋರಾಯಿತೋ ಆಗ 2005ರಲ್ಲಿ ಸಂಪೂರ್ಣವಾಗಿ ಪ್ರಮೋದ್ರವರು ಸಂಪೂರ್ಣ ಕನ್ನಡ ಚಿತ್ರರಂಗದಿಂದ ನಾಪತ್ತೆಯಾಗಿಬಿಡುತ್ತಾರೆ. ಆಮೇಲೆ ಸಣ್ಣಪುಟ್ಟ ಚಿತ್ರಗಳನ್ನು ನಿರ್ಮಿಸುವ ಕೆಲಸ ಮಾಡಿದರು ಸಹ ಪ್ರಮೋದ್ ಮತ್ತೆ ಕಂಬ್ಯಾಕ್ ಮಾಡಲು ಆಗಲೇ ಇಲ್ಲ.

Malashree breaks her silence over the loss of her husband to COVID-19 |  Kannada Movie News - Times of India

Join Nadunudi News WhatsApp Group