Kantara: ಕಾಂತಾರ ಸಿನೆಮಾದಲ್ಲಿ ನಟಿಸಿದ ಪ್ರಮೋದ್ ಶೆಟ್ಟಿಗೆ ಗೆಳೆಯ ರಿಷಬ್ ಕೊಟ್ಟ ಸಂಭಾವನೆ ವೈರಲ್

Kantara: ಸದ್ಯ ಕಾಂತಾರ ಸಿನಿಮಾ ಈಗಾಗಲೇ ಬಾಕ್ಸಾಫೀಸ್‌(Box Office) ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿದ್ದು ಈಗಾಗಲೇ ಈ ಸಿನಿಮಾ 200 ಕೋಟಿ ಕ್ಲಬ್ ಸೇರಿದ್ದು ಶೀಘ್ರದಲ್ಲಿಯೇ 300 ಕೋಟಿ ಕ್ಲಬ್‌ಗೂ ಎಂಟ್ರಿ ಕೊಡಲಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರ. ಒಂದು ವೇಳೆ ಈ ದಾಖಲೆನೂ ಮಾಡಿದರೆ ಹೊಸ ದಾಖಲೆ ಬರೆಯೋದು ಗ್ಯಾರಂಟಿ.

ಇನ್ನು ಈ ನಡುವೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರುಗಳ ಸಂಭಾವನೆ ಬಗ್ಗೆ ಚರ್ಚೆ ಕೂಡ ಆರಂಭವಾಗಿದ್ದು ಅದರಲ್ಲಿಯೂ ಕೂಡ ರಿಷಬ್ ರವರ ಆಪ್ತರಾದ ಪ್ರಮೋದ್ ಶೆಟ್ಟಿ(Pramod Shetty)ಯವರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಹೌದುನಟ ಪ್ರಮೋದ್ ಶೆಟ್ಟಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ನಟರಲ್ಲಿ ಒಬ್ಬರಾಗಿದ್ದು ಅನೇಕ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಪ್ರಮೋದ್ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಟ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ ಅವರು ಇದ್ದೆ ಇರುತ್ತಾರೆ.

Pramod Shetty, who acted in the Kantara movie, was paid by his friend Rishabh
Image Source: Times Of India

ಕಿರಿಕ್ ಪಾರ್ಟಿ ಅವನೇ ಶ್ರೀಮನ್ ನಾರಾಯಣ ಹೀರೋ ಹರಿಕಥೆ ಅಲ್ಲ ಗಿರಿಕಥೆ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಬಹಳ ಜನಪ್ರಿಯರಾಗಿದ್ದ ನಟ ಪ್ರಮೋದ್ ಶೆಟ್ಟಿ ಅವರು ಸದ್ಯ ಕನ್ನಡ ಚಿತ್ರರಂಗದ ಬಹಳ ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದುಕಾಂತಾರ ಸಿನಿಮಾದಲ್ಲಿ ರಾಜಕೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಕೆಲಸಮಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ ಎನ್ನಬಹುದು.

ಇನ್ನು ಈ ಸಿನಿಮಾಕ್ಕೆ ಪ್ರಮೋದ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳುವುದಾದರೆ ಪ್ರಮೋದ್ ಶೆಟ್ಟಿ ಯವರು ಈ ಸಿನಿಮಾದ ಅಭಿನಯಕ್ಕಾಗಿ ಕೇವಲ ಐವತ್ತು ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಸದ್ಯ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಸಿನಿಮಾ ನೂರು ದಿನಗಳನ್ನು ಪೂರೈಸಿದ ನಂತರ ಮತ್ತೊಮ್ಮೆ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತದೆ ಎನ್ನಲಾಗಿದೆ.

Join Nadunudi News WhatsApp Group

ಇನ್ನು ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಕರ್ನಾಟಕದಲ್ಲಿ ರಿಲೀಸ್ ಆಗಿ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದ್ದು 50 ದಿನಗಳತ್ತ ಮುನ್ನುಗ್ಗುತ್ತಿರುವ ಕಾಂತಾರ ಗುಂಗು ಮಾತ್ರ ಕಮ್ಮಿಯಾಗಿಲ್ಲ. ಇನ್ನು ಕಾಂತಾರ ಹಿಂದಿ ಹಾಗೂ ತೆಲುಗಿನಲ್ಲಿ ಕ್ರೇಜ್ ಹೆಚ್ಚಾಗಿದ್ದು ಇನ್ನು ವೀಕೆಂಡ್‌ನಲ್ಲಿ ಮಲಯಾಳಂ ವರ್ಷನ್‌ ಕೂಡ ಸದ್ದು ಮಾಡುತ್ತಿದೆ.

Pramod Shetty, who acted in the Kantara movie, was paid by his friend Rishabh
Image Source: Times Of India

 

ಅತ್ತ ಓವರ್‌ಸೀಸ್‌ನಲ್ಲೂ ಕಾಂತಾರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದುಕಾಂತಾರ ಸಿನಿಮಾ ವಿಶ್ವದಾದ್ಯಂತ ಕಲೆಕ್ಷನ್ ಅದ್ಭುತವಾಗಿದೆ ಅಂತಲೇ ರಿಪೋರ್ಟ್ ಬರುತ್ತಿದೆ. ಹೌದು ಇಲ್ಲಿವರೆಗೂ ಕಾಂತಾರ ಸುಮಾರು 289.21 ಕೋಟಿ ರೂ. (ವಿಶ್ವದಾದ್ಯಂತ) ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್‌ ವೆಬ್‌ಸೈಟ್ ವರದಿ ಮಾಡಿದ್ದು 31 ದಿನಗಳಲ್ಲಿ ಭಾರತದಲ್ಲಿ ಕಾಂತಾರ ಗಳಿಸಿದ್ದು 268.21 ಕೋಟಿ ರೂ. (ಎಲ್ಲಾ ಭಾಷೆಗಳಿಂದ) ಹಾಗೂ ಓವರ್‌ ಸೀನ್ ಕಲೆಕ್ಷನ್ 21 ಕೋಟಿ ರೂಪಾಯಿ ಎಂದು ವರದಿ ಮಾಡಿದ್ದು ಈ ವಾರದೊಳಗೆ ಕಾಂತಾರ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.

ಇನ್ನು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ 300 ಕೋಟಿ ಕ್ಲಬ್ ಸೇರಿದರೆ, ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದು 2022ರಲ್ಲಿ 300 ಕೋಟಿ ಕ್ಲಬ್ ಸೇರಿದ 7ನೇ ಸಿನಿಮಾ ಆಗಲಿದೆ. ಹೌದು 2022ರಲ್ಲಿ ಬಿಡುಗಡೆಯಾದ ಕೆಜಿಎಫ್ 2 1230 ಕೋಟಿ ರೂ. ಗಳಿಸಿದೆ.

RRR 1144 ಕೋಟಿ ರೂ ಪೊನ್ನಿಯಿನ್ ಸೆಲ್ವನ್ 464.70 ಕೋಟಿ ರೂ. ಬ್ರಹ್ಮಾಸ್ತ್ರ 427.88 ಕೋಟಿ ರೂ. ಕಮಲ್ ಹಾಸನ್ ಸಿನಿಮಾ ವಿಕ್ರಂ 426 ಕೋಟಿ ರೂ. ಹಾಗೂ ದಿ ಕಾಶ್ಮೀರ್ ಫೈಲ್ಸ್ 326.95 ಕೋಟಿ ರೂ. ಗಳಿಸಿದೆ. ಹೀಗಾಗಿ ಈ ಸಿನಿಮಾ ಸಾಲಿಗೆ ಕಾಂತಾರ ಶೀಘ್ರದಲ್ಲಿಯೇ ಸೇರಲಿದೆ ಎನ್ನಲಾಗಿದೆ.

Pramod Shetty, who acted in the Kantara movie, was paid by his friend Rishabh
Image Source: India Today

ಇನ್ನು ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಕಳೆದ 5 ದಿನಗಳ ಹಿಂದೆ ರಿಲೀಸ್ ಆಗಿದ್ದು ಆದರೆ ಮೊದಲ ನಾಲ್ಕು ದಿನಗಳ ಗಳಿಕೆ ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೆ 5 ಹಾಗೂ 6ನೇ ದಿನದ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದ್ದು 5ನೇ ದಿನ 7.30 ಕೋಟಿ ರೂ. ಹಾಗೂ 6ನೇ ದಿನ 7.25 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕವಾಗಿ 56 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನುಕಾಂತಾರ ಹಿಂದಿ ವರ್ಷನ್ 42.95 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group