ಎಷ್ಟೋ ಜನ ಕನ್ನಡಿಗರಿಗೆ ಇನ್ನು ಗೊತ್ತಿಲ್ಲ ಪ್ರಶಾಂತ್ ನೀಲ್ ನಿಜಕ್ಕೂ ಯಾರು, ನೋಡಿ ಇಲ್ಲಿದೆ ಹಿನ್ನೆಲೆ

ಸದ್ಯ ಇದೀಗ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಿರ್ದೇಶಕರು ಯಾರು ಯಾರು ಇರಬಹುದು ಎಂಬ ಪ್ರಶ್ನೆ ಸಿನಿ ಪ್ರೇಕ್ಷಕರಲ್ಲಿ ಕಾಡುತ್ತಿದ್ದು ಮೊದಲಿದಂಲೂ ಕೂಡ ಕೇಳಿ ಬರುತ್ತಿರುವ ಹೆಸರುಗಳು ಎಸ್.ಎಸ್. ರಾಜಮೌಳಿ, ಶಂಕರ್ , ಪೂರಿ ಜಗನನ್ನಾಥ್, ಕೊರಟಲ ಶಿವ. ಆದರೆ ಇದೀಗ ಈ ಪಟ್ಟಿಯಲ್ಲಿ
ನಮ್ಮ ಕನ್ನಡದ ಪ್ರಶಾಂತ್ ನೀಲ್ ರವರು ಸೇರಿಕೊಂಡಿದ್ದು, ಪ್ರತಿಯೊಬ್ಬರಿಗೂ ಕೂಡ ಹೆಮ್ಮೆಯ ವಿಚಾರವಾಗಿದೆ. ಹೌದು ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದಲ್ಲೇ ಖ್ಯಾತರಾಗಳಿಸಿದ್ದಾರೆ.

ಇನ್ನು ತಮಿಳು ನಿರ್ದೇಶಕ ಶಂಕರ್ ರವರು ಆಧುನಿಕ ತಂತ್ರಜ್ಞಾನವನ್ನು ಪಳಗಿಸುವ ಹಾಗೂ ಕಥೆಯಲ್ಲೂ ಅದನ್ನು ಅಳವಡಿಸಿ ಮಿಂಚಿದ್ದು, ಎಲ್ಲರಿಗೂ ಅವರ ಮೇಲೆ ಗೌರವವಿದೆ. ಇದೀಗ ಆ ಸಾಲಿಗೆ ಪ್ರಶಾಂತ್ ನೀಲ್ ಕೂಡ ಸೇರಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭುನಯದ, ಕನ್ನಡ ಪ್ರತಿಷ್ಠಿತ ಬ್ಯಾನರ್ ಹೊಂಬಾಳೆ ಫಿಲಂಸ್ ನಿರ್ಮಾಣದ ಕೆ.ಜಿ.ಎಫ್. ಸಿನಿಮಾ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದು, ದೊಡ್ಡ ದಾಖಲೆಯನ್ನೆ ಬರೆದಿದೆ.Bagheera': After KGF 2 success, Prashanth Neel teams with Srii Murali;  Muhurat shot held

ಹೌದು ಕೆ.ಜಿ.ಎಫ್ ಚಾಪ್ಟರ್ ೨ ಕೂಡ ಇದೀಗ ತೆರೆಕಾಣಲು ತಯಾರಾಗಿದ್ದು, ಈಗಾಗಲೇ ಚಿತ್ರದ ಟ್ರೈಲರ್ ಯೂಟ್ಯೂಬ್ ವೀಕ್ಷಣೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದು ಬುಟ್ಟಿದೆ. ಇದೀಗ ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಭಾರತೀಯ ಸಿನಿಮಾದ ಹಲವು ಟಾಪ್ ನಟರು ಫಿದಾ ಆಗಿದ್ದು, ಪ್ರಶಾಂತ್ ನೀಲ್ ಖ್ಯಾತಿ ಇದೀಗ ಭಾರತೀಯ ಸಿನಿಮಾ ವಲಯದಲ್ಲಿ ಹಬ್ಬಿದೆ.

ಕೆ .ಜಿ.ಎಫ್. ಚಾಪ್ಟರ್ 2 ಇನ್ನೇನು ತೆರೆಕಾಣಲು ತಯಾರಾಗಿದ್ದು, ಲಾಕ್ ಡೌನ್ ಮುಗಿದ ಬಳಿಕ ಚಿತ್ರದ ದಿನಾಂಕವನ್ನು ನಿಗಧಿ ಮಾಡಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಬಾಲಿವುಡ್ ನಟಿ ರವೀನಾ, ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್, ಬಹುಬಾಷ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಸ್ಟಾರ್​ಗಳು ಸಿನಿಮಾದಲ್ಲಿ ಭಾಗವಾಗಿದ್ದು, ಇದರ ಬೆನ್ನಲ್ಲೆ ಬಾಹುಬಲಿ ಖ್ಯಾತಿಯಾ ನಟ ಪ್ರಭಾಸ್ ಹೀರೋ ಆಗಿ ನಟಿಸುವ ಮತ್ತೊಂದು ಹೊಸ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.Bagheera Movie: Prabhas before 'Salar' ... KGF director preparing 'Bhagira'  » Jsnewstimes

ಹೌದು ಪ್ರಭಾಸ್ ಹಾಗೂ ಪ್ರಶಾಂತ್ ಕಾಂಭಿನೇಷನ್ ನ ಸಲಾರ್ ಸಿನಿಮಾ ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದು, ಇದರ ಜೊತೆಗೆ ತೆಲುಗಿನ ಜೂನಿಯರ್ ಎನ್​ಟಿಆರ್ ಜೊತೆಗೂ ಹೊಸ ಯೋಜನೆಗೆ ನೀಲ್ ಸಹಿ ಹಾಕಿದ್ದಾರೆ ಎಂದೇ ಹೇಳಲಾಗುತ್ತಿದೆ. ಇಷ್ಟೆಲ್ಲ ಖ್ಯಾತಿ ಪಡೆದಿರುವ ಪ್ರಶಾಂತ್ ನಿಲ್ ನಿಜಕ್ಕೂ ಯಾರು ಗೊತ್ತಾ ನಮಗೆಲ್ಲ ಗೊತ್ತಿರುವ ಹಾಗೇ ನಟ ಶ್ರೀಮುರಳಿ ಅವರ ಪತ್ನಿಯ ಸಹೋದರ ಪ್ರಶಾಂತ್ ನೀಲ್ ಅವರು.

Join Nadunudi News WhatsApp Group

ಆದರೆ ಇವರಿಗೆ ಶ್ರೀಮುರಳಿ ಅವರು ಮಾತ್ರವಲ್ಲದೆ, ಮತ್ತೊಂದು ರೀತಿಯಿಂದ ಸಿನಿಮಾ ಜೊತೆ ನಂಟಿದೆ. ಆಗಿನ ಕಾಲದಲ್ಲಿ ಕನ್ನಡ ಸಿನಿಮಾಗಳ ಚಿತ್ರೀಕರಣ ಮದ್ರಾಸ್ ನಲ್ಲಿ ನಡೆಯುತ್ತಿದ್ದಾಗ, ಚಿತ್ರೀಕರಣ ಮದ್ರಾಸ್ ನಲ್ಲಿ ನಡೆಯುತ್ತಿತ್ತು, ಆದರೆ ಸಿನಿಮಾದ ಸ್ಕ್ರಿಪ್ಟ್ ಗಳು, ಕಥೆಗಳು ತಯಾರಾಗುತ್ತಾ ಇದ್ದದ್ದು ಬೆಂಗಳೂರಿನಲ್ಲಿ.ಸಿನಿಮಾ ಸ್ಕ್ರಿಪ್ಟ್ ಗಳನ್ನು ತಯಾರಿಸಲು ಬರಹಗಾರರು ಉಳಿದುಕೊಳ್ಳಲು ಬೆಂಗಳೂರಿನ ಹೋಟೆಲ್ ಗಳಲ್ಲಿ ರೂಮ್ ಮಾಡಿಕೊಡಲಾಗುತ್ತಿತ್ತು ಅದರಲ್ಲೂ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್ ನಲ್ಲಿ ಬಹುತೇಕ ಕನ್ನಡ ಚಿತ್ರರಂಗದವರು ಉಳಿದುಕೊಳ್ಳುತ್ತಿದ್ದರು. ಹಲವು ಕನ್ನಡ ಸಿನಿಮಾ ಕಥೆಗಳು ತಯಾರಾಗುತ್ತಾ ಇದ್ದದ್ದು ಅಲ್ಲೇ.Sriimurali to star in film written and produced by Prashanth Neel- The New  Indian Express

ಆ ಹೋಟೆಲ್ ಹೈಲ್ಯಾಂಡ್ ಗು ಪ್ರಶಾಂತ್ ನೀಲ್ ಅವರಿಗೂ ಒಂದು ಸಂಬಂಧ ಇದೆ. ಹೈಲ್ಯಾಂಡ್ ಹೋಟೆಲ್ ನ ಮಾಲೀಕರ ಮೊಮ್ಮಗ ಪ್ರಶಾಂತ್ ನೀಲ್ ಅವರು. ಚಿಕ್ಕ ವಯಸ್ಸಿನಿಂದಲೂ ಹೋಟೆಲ್ ಗೆ ಬರುತ್ತಿದ್ದ ಚಿತ್ರರಂಗದ ವ್ಯಕ್ತಿಗಳನ್ನು ನೋಡುತ್ತಾ ಬೆಳೆದರು ಪ್ರಶಾಂತ್ ನೀಲ್. ಅಲ್ಲಿಂದಲೇ ಅವರು ಸಿನಿಮಾ ಮೇಲೆ ಆಸಕ್ತಿ ಬೆಳೆಯಲು ಶುರುವಾಯಿತು. ಅಂದು ಶುರುವಾದ ಪ್ರಶಾಂತ್ ನೀಲ್ ಅವರ ಪ್ಯಾಷನ್ ಇಂದು ಇಡೀ ಭಾರತ ಚಿತ್ರರಂಗವೇ ಹೆಮ್ಮೆ ಪಡುವ ಹಾಗೆ ಮಾಡಿದೆ. ಇವರ ಮುಂದಿನ ಸಿನಿಮಾಗಳು ಯಶಸ್ಸು ಪಡೆಯಲಿ ಎಂದು ಹಾರೈಸೋಣ.

Join Nadunudi News WhatsApp Group