ಗುಡಿಸಲಲ್ಲಿ ಇದ್ದು, ಸೈಕಲ್ ನಲ್ಲಿ ಪ್ರಚಾರ ಮಾಡಿ ಕೇಂದ್ರ ಮಂತ್ರಿಯಾದ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ, ಶಾಕ್ ಆಗುತ್ತದೆ.

ನಮ್ಮ ದೇಶದಲ್ಲಿ ಚುನಾವಣೆ ಅಂದರೆ ಯಾವ ರೀತಿಯಲ್ಲಿ ಇರುತ್ತದೆ ಅನ್ನುವುದರ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಚುನಾವಣೆಗೆ ಇಂತೂ ಗೆಲ್ಲುವುದು ಅಷ್ಟು ಸುಲಭದ ಮಾತು ಅಲ್ಲ ಎಂದು ಹೇಳಬಹುದು. ಹೌದು ನಮ್ಮ ದೇಶದಲ್ಲಿ ನಡೆಯುವ ಪಂಚಾಯತ್ ಚುನಾವಣೆನೇ ಭಾರಿ ಪೈಪೋಟಿಯಲ್ಲಿ ಇರುತ್ತದೆ ಅಂದರೆ ಕೇಂದ್ರ ಚುನಾವಣೆ ಯಾವ ರೀತಿಯಲ್ಲಿ ಇರುತ್ತದೆ ಎಂದು ನೀವೇ ಯೋಚನೆ ಮಾಡಿ ಸ್ನೇಹಿತರೆ. ಇನ್ನು ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ ಗೆಲ್ಲಬೇಕು ಅಂದರೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡಬೇಕು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವನ್ನ ಕೂಡ ಮಾಡಬೇಕು.

ಇನ್ನು ಕೆಲವು ಅಭ್ಯರ್ಥಿಗಳು ಎಷ್ಟೇ ಹಣವನ್ನ ಖರ್ಚು ಮಾಡಿದರು ಮತ್ತು ಎಷ್ಟೇ ಪ್ರಚಾರವನ್ನ ಮಾಡಿದರು ಕೂಡ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಈ ಮಂತ್ರಿಯ ಬಗ್ಗೆ ಕೇಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹೌದು ಸ್ನೇಹಿತರೆ ನಾವು ಹೇಳುವ ಈ ಕೇಂದ್ರ ಮಂತ್ರಿ ಸೈಕಲ್ ನಲ್ಲಿ ಪ್ರಚಾರವನ್ನ ಮಾಡಿದ್ದಾರೆ ಮತ್ತು ಈಗಲೂ ಕೂಡ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಹಾಗಾದರೆ ಈ ವ್ಯಕ್ತಿ ಯಾರು ಮತ್ತು ಯಾಕೆ ಇವರೂ ಇನ್ನೂ ಕೂಡ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಮತ್ತು ಜನರಿಗೆ ಯಾಕೆ ಇವರನ್ನ ಅಷ್ಟು ಇಷ್ಟ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಂತ್ರಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Prathap Sarangi news

ಸ್ನೇಹಿತರೆ ಒಮ್ಮೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಅಂದರೆ ಸುಮಾರು 10 ಕೋಟಿ ರೂಪಾಯಿಯಿಂದ 100 ಕೋಟಿ ರೂಪಾಯಿಯ ತನಕ ಖರ್ಚು ಮಾಡಬೇಕಾಗುತ್ತದೆ. ಸ್ನೇಹಿತರೆ ನಾವು ಹೇಳುತ್ತಿರುವ ಈ ಮಂತ್ರಿಯ ಹೆಸರು ಪ್ರತಾಪ್ ಸಾರಂಗಿ, ಒರಿಸ್ಸಾ ರಾಜ್ಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರು ಇವರು ಎಂದು ಹೇಳಬಹುದು. ಇರುವ ಸ್ವಲ್ಪ ಜಮೀನಿನಲ್ಲಿ ವ್ಯವಸಾಯವನ್ನ ಮಾಡಿಕೊಂಡು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಈ ವ್ಯಕ್ತಿ. ಸ್ನೇಹಿತರೆ ಪ್ರತಾಪ್ ಸಾರಂಗಿ ಅವರಿಗೆ ಸ್ವಂತ ಮನೆ ಕೂಡ ಇಲ್ಲ ಎಂದು ಹೇಳಬಹುದು, ಮದುವೆಯನ್ನ ಮಾಡಿಕೊಳ್ಳದ ಪ್ರತಾಪ್ ಸಾರಂಗಿ ಅವರು ಕಳೆದ ವರ್ಷ ತಮ್ಮ ತಾಯಿಯನ್ನ ಕಳೆದುಕೊಂಡ ಕಾರಣ ತಾವೇ ಅಡುಗೆಯನ್ನ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪಟ ಮೋದಿಯವರ ಅಭಿಮಾನಿಯಾಗಿರುವ ಪ್ರತಾಪ್ ಅವರು ಜನರಿಗೆ ತನ್ನಿಂದ ಏನಾದರು ಸಹಾಯ ಆಗಬೇಕು ಎಂದು ಮೊದಲು ನೀಲಗಿರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ನಿಂತು ಎರಡು ಭಾರಿ MLA ಆಗಿ ಆಯ್ಕೆಯಾದರು. ಎರಡು ಭಾರಿ ಚುನಾವಣೆಯಲ್ಲಿ ಗೆದ್ದರೂ ಕೂಡ ಇವರ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ಏರಿಕೆ ಆಗಿಲ್ಲ ಅನ್ನುವುದು ಬಹಳ ಹೆಮ್ಮೆಯ ವಿಚಾರ ಎಂದು ಹೇಳಬಹುದು. ಇನ್ನು ಇವರ ನಿಷ್ಠೆ ಮತ್ತು ಶ್ರದ್ದೆಯನ್ನ ನೋಡಿದ ಮೋದಿಯವರು ಬಾಲಸೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸೀಟ್ ಕೊಡುತ್ತಾರೆ.

Join Nadunudi News WhatsApp Group

Prathap Sarangi news

ಇನ್ನು ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಇರುವ ಘೋಷಣೆ ಮಾಡಿದ ಒಟ್ಟು ಆಸ್ತಿಯ ಮೊತ್ತ 169 ರೂಪಾಯಿ, ಯಾಕೆ ಅಂದರೆ ಅವಾಗ ಅವರ ಬಳಿ ಇದ್ದಷ್ಟು ಅಷ್ಟೇ. ಎಂದಿನಂತೆ ಸೈಕಲ್ ನಲ್ಲಿ ಊರು ಊರಿಗೆ ಹೋಗಿ ಪ್ರಚಾರ ಮಾಡಿದ ಪ್ರತಾಪ್ ಸಾರಂಗಿ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾದರು. ಇನ್ನು ಇವರ ನಿಷ್ಠೆ ಪ್ರಾಮಾಣಿಕತೆಯನ್ನ ಮೆಚ್ಚಿ ಇವರನ್ನ ಕೇಂದ್ರ ಮಂತ್ರಿಯನ್ನಾಗಿ ಕೂಡ ಮಾಡಲಾಗಿದೆ. ಸ್ನೇಹಿತರೆ ಈ ಶ್ರೇಷ್ಠ ವ್ಯಕ್ತಿ ಪ್ರತಾಪ್ ಸಾರಂಗಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group