Price Hike: ನೀರು, ಹಾಲು ಮತ್ತು ಟಿಕೆಟ್ ದರದಲ್ಲಿ ಮತ್ತೆ ಇಷ್ಟು ಏರಿಕೆ, ಸರ್ಕಾರ ತಗೆದುಕೊಳ್ಳುತ್ತಾ ಕೆಟ್ಟ ನಿರ್ಧಾರ…?

ಹಾಲು ಮತ್ತು ನೀರಿನ ದರದಲ್ಲಿ ಮತ್ತೆ ಏರಿಕೆ, ಜನತೆಯ ಜೇಬಿಗೆ ಕತ್ತರಿ

Price Hike In Karnataka: ಸದ್ಯ ದೇಶದಲ್ಲಿ ವಸ್ತುಗಳ ಬೆಲೆ ಒಂದೊಂದಾಗಿಯೇ ಹೆಚ್ಚಾಗುತ್ತಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರ ಹೆಗಲಿಗೆ ಹೊರೆ ಬೀಳಲಿದೆ. ಈಗಾಗಲೇ ಹಾಗೂ ಹಾಗೂ ಇಂಧನ ಬೆಲೆ ಏರಿಕೆ ಮಾಡಿದ ಸರ್ಕಾರ, ಇನ್ನು ಮುಂದಿನ ದಿನಗಳಲ್ಲಿ ಮೆಡಿಕಲ್ ಸೀಟ್ ಶುಲ್ಕ, ಬಸ್ ಟಿಕೆಟ್ ದರ, ನೀರಿನ ದರ ಏರಿಕೆ ಮಾಡುದಾಗಿ ಮಾಹಿತಿ ತಿಳಿದುಬಂದಿದೆ.

Nandini Milk Price Hike In Karnataka
Image Credit: Thefederal

*ಹಾಲಿನ ದರ ಹೆಚ್ಚಳ
ಹಾಲು ದಿನನಿತ್ಯ ಬಳಕೆಯ ಪದಾರ್ಥ ಆಗಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಹಾಲು ಬಳಕೆ ಮಾಡುತ್ತಾರೆ. ಸದ್ಯ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ 2.10 ರೂ. ಗೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.

*ಬಸ್ ಟಿಕೆಟ್ ದರ ಹೆಚ್ಚಳ
ಸದ್ಯ ಟಿಕೆಟ್‌ ದರ ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರಕ್ಕೆ 4 ಸಾರಿಗೆ ಬಸ್‌ ನಿಗಮಗಳು ಮನವಿ ಮಾಡಿಕೊಂಡಿವೆ. BMTC, KSRTC, Northwest Transport ಹಾಗೂ Kalyan Karnataka Transport ಸಂಸ್ಥೆಗಳು ಕಳೆದ 4-5 ವರ್ಷಗಳಿಂದ ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ. ಮುಂದಿನ‌ ದಿನಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚುವ ಸಾಧ್ಯತೆ ಇದೆ.

Water Rates to Increase
Image Credit: Vistaranews

*ಮೆಡಿಕಲ್ ಸೀಟ್ ಶುಲ್ಕ ದುಬಾರಿ
ಸದ್ಯ ಮೆಡಿಕಲ್ ವಿದ್ಯಾರ್ಥಿಗಳಿಗೂ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಹೌದು ಈಗಾಗಲೇ ಮೆಡಿಕಲ್ ಸೀಟ್ ಶುಲ್ಕ ಹೆಚ್ಚಳದ ಬಗ್ಗೆ ಮೀಟಿಂಗ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶೇ.10 ರಷ್ಟು ಶುಲ್ಕ ಹೆಚ್ಚಾಗುವ ಸಾಧ್ಯತೆ ಇದೆ.

*ಆಟೋ ದರ ಹೆಚ್ಚಳ
ಇನ್ನು ಆಟೋ ಪ್ರಯಾಣಿಕರಿಗೂ ಕೂಡ ಶಾಕ್ ಎದುರಾಗಬಹುದು. ಬೆಲೆ ಏರಿಕೆ ಬಿಸಿಯಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಯಾಣ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯಿಸಿದೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗಿಲ್ಲ. ಕನಿಷ್ಠ ಆಟೋ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ ಏರಿಸಬೇಕು ಎಂದು ಮನವಿ ಮಾಡಲಾಗಿದೆ.

Join Nadunudi News WhatsApp Group

Price Hike In Karnataka
Image Credit: Oneindia

Join Nadunudi News WhatsApp Group