ಯಶ್ ಬಳಿ ಇದ್ದ ಆ ವಸ್ತುಗೆ ಬಹಳ ಆಸೆ ಪಟ್ಟಿದ್ದರು ಅಪ್ಪು, ಏನದು ಗೊತ್ತಾ, ನೋಡಿ ಒಮ್ಮೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸರಳತೆ ಯಾವ ಮಟ್ಟಕ್ಕೆ ಇತ್ತೆಂದು ಬಹುತೇಕ ಎಲ್ಲರಿಗೂ ಕೂಡ ತಿಳಿದೇ ಇದೆ ಅಲ್ಲವೇ? ಹೌದು ಅದರಲ್ಲೂ ಕೂಡ ಪುನೀತ್ ಅವರು ತಮ್ಮ ಸಹ ನಟರ ಜೊತೆ ಕನ್ನಡ ಚಿತ್ರರಂಗದ ಇತರ ಸ್ಟಾರ್ ನಟರ ಜೊತೆ ನಡೆದುಕೊಳ್ಳುತ್ತಿದ್ದ ಪತಿ ನಿಜಕ್ಕೂ ‍ಅವರ ದೊಡ್ಡಗುಣವೇ ಸರಿ. ಸದಾ ಮತ್ತೊಬ್ಬರಿಗೆ ಕೈತುಂಬಾ ನೀಡುತ್ತಿದ್ದ ಪುನೀತ್ ಅವರಿಗೆ ಯಶ್ ಬಳಿ ಇದ್ದ ಆ ಒಂದು ವಸ್ತು ಬಹಳ ಇಷ್ಟವಾಗಿತ್ತಂತೆ.

ಆ ಬಗ್ಗೆ ಯಶ್ ಅವರ ಜೊತೆಯೂ ಸಾಕಷ್ಟು ಬಾರಿ ಹೇಳಿಕೊಂಡಿದ್ದರಂತೆ. ಅಷ್ಟೇ ಅಲ್ಲದೇ ಕಾರ್ಯಕ್ರಮವೊಂದರಲ್ಲಿಯೂ ಕೂಡ ಯಶ್ ಬಳಿ ಇರುವ ಆ ವಸ್ತು ಬೇಕು ಎಂದೂ ಸಹ ಕೇಳಿಕೊಂಡಿದ್ದರು. ಹೌದು ಪುನೀತ್ ರಾಜ್ ಕುಮಾರ್ ಅವರು ಅಗಲಿದಾಗ ಆ ದಿನ ಯಶ್ ಅವರು ಎಷ್ಟು ದುಃಖ ಪಟ್ಟಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಈ ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ಯಶ್ ಕಾರ್ ನಿಂದ ಇಳಿಯುತ್ತಿದ್ದಂತೆ ಆಸ್ಪತ್ರೆಗೆ ಓಡಿ ಹೋಗಿದ್ದು ಆ ಸಮಯದಲ್ಲಿ ಆ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತರು ಶಿವಣ್ಣನನ್ನು ಅಪ್ಪಿಕೊಂಡು ಬಹಳಾನೇ ಸಮಾಧಾನ ಪಡಿಸಿದರು.KGF' Actor Yash Pens A Heartfelt Note For Puneeth Rajkumar On His Birth Anniversary

ಅಷ್ಟೇ ಅಲ್ಲದೇ ಅಪ್ಪು ಅವರ ಕೊನವಯ ವಿಧಿಯ ವರೆಗೂ ಸಂಪೂರ್ಣವಾಗಿ ಪುನೀತ್ ಅವರ ಕುಟುಂಬದ ಜೊತೆಯೇ ನಿಂತಿದ್ದರು. ಪುನೀತ್ ಅವರ ಮನೆಗೆ ಆಗಮಿಸಿ ಅಲ್ಲಿ ನಡೆಯಬೇಕಾದ ಕೆಲಸಗಳಿಗೆ ತಮ್ಮ ಅವಶ್ಯಕತೆ ಇದ್ದರೆ ಸಹಾಯವಾಗಬಹುದೆಂದು ಸದಾಶಿವನಗರದ ಪುನೀತ್ ಅವರ ನಿವಾಸಕ್ಕೂ ಹೋಗಿದ್ದು ಆನಂತರ ಕಂಠೀರವ ಸ್ಟೇಡಿಯಂ ನಲ್ಲಿ ಸತತವಾಗಿ ಎರಡು ದಿನಗಳ ಕಾಲ ಅಲ್ಲಿಯೇ ಇದ್ದರು. ಹೌದು ಮೊದಲ ದಿನ ರಾತ್ರಿ ಕಣ್ಣೀರಿಟ್ಟು ಬಹಳ ಸುಸ್ತಾಗಿದ್ದ ಶಿವಣ್ಣನನ್ನು ದಯವಿಟ್ಟು ಸ್ವಲ್ಪ ಹೊತ್ತು ಮಲಗಿ ಎಂದು ಬಹಳಷ್ಟು ಮನವಿ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಮಾಡಿದ್ದರು.

ಹೌದು ಮೊದಲು ಅಲ್ಲಿಂದ ಹೋಗಲು ಒಪ್ಪದ ಶಿವಣ್ಣನಿಗೆ ನಾನು ಈ ಜಾಗದಲ್ಲಿ ಇಲ್ಲೇ ಇರ್ತೀನಿ ನೀವು ಹೋಗಿ ಮಲಗಿ ಎಂದು ಕಳುಹಿಸಿದ್ದು ಅಷ್ಟೇ ಅಲ್ಲದೇ ಆ ದಿನದಿಂದ ಮಾರನೇ ದಿನದವರೆಗೂ ಆ ಜಾಗದಿಂದ ಕದಲದ ಯಶ್ ಕಂಠೀರವ ಸ್ಟೇಡಿಯಂ ನ ಒಂದು ರೂಮಿನಲ್ಲಿ ಕೂತು ಪುನೀತ್ ಅವರ ಮಗಳು ಧೃತಿ ಅವರನ್ನು ಅಮೇರಿಕಾದಿಂದ ಮರಳಿ ಕರೆತರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೂಡ ತಾವೇ ಖುದ್ದಾಗಿ ನಿಂತು ಮಾಡಿದರು.KGF Chapter 2 trailer launch: Yash pays heartfelt tribute to late actor Puneeth Rajkumar; says, 'Miss you Appu sir'

ಇನ್ನು ಅಲ್ಲಿಗೂ ಕೂಡ ಶಿವಣ್ಣ ಬಂದಾಗ ಆಗಲೂ ಸಹ ಶಿವಣ್ಣನಿಗೆ ಯಾವುದೇ ಜವಾಬ್ದಾರಿ ನೀಡದೇ ಸ್ವಲ್ಪ ರೆಸ್ಟ್ ಮಾಡಿ ಶಿವಣ್ಣ ನಾನು ನೋಡಿಕೊಳ್ತೇನೆ ಎಂದು ಧೃತಿ ಅಮೇರಿಕಾದಿಂದ ಮರಳಿ ಭಾರತಕ್ಕೆ ಬಂದು ಬೆಂಗಳೂರಿಗೆ ಆಗಮಿಸುವವರೆಗೂ ಮನೆಗೆ ತೆರಳದ ಯಶ್ ಅವರು ಧೃತಿ ಬಂದ ನಂತರ ಮನೆಗೆ ಹಿಂತಿರುಗಿದರು. ಮಾರನೆ ದಿನ ಮತ್ತೆ ಜೊಬೆಯ ವಿಧಿ ನಡೆಯುವ ಕಾರಣ ಬೆಳ್ಳಂಬೆಳಿಗ್ಗೆ ಕಂಠೀರವ ಸ್ಟೇಡಿಯಂ ಗೆ ಆಗಮಿಸಿ ಅಪ್ಪುವಿನ ಕೊನೆ ಕ್ಷಣದಲ್ಲಿ ಜೊತೆಯಾದರು.

Join Nadunudi News WhatsApp Group

ಇನ್ನು ಪುನೀತ್ ರಾಜ್ ಕುಮಾರ್ ರವರು ಅಗಲುವ ಕೇವಲ ಎರಡು ದಿನದ ಮುಂಚೆ ಶಿವಣ್ಣನ ಭಜರಂಗಿ ೨ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಯಶ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಆ ದಿನವೂ ಕೂಡ ಯಶ್ ಅವರನ್ನು ಮಗುವಿನಂತೆ ಅಪ್ಪಿಕೊಂಡಿದ್ದ ಅಪ್ಪು ಯಶ್ ಹಾಗೂ ಶಿವಣ್ಣ ಅವರ ಜೊತೆ ಡ್ಯಾನ್ಸ್ ಮಾಡಿದ್ದರು. ಅದೇ ಅಪ್ಪುವಿನ ಕೊನೆಯ ಡ್ಯಾನ್ಸ್ ಆಗುತ್ತದೆ ಎಂದು ಯಾರು ಊಹೆ ಕೂಡ ಮಾಡಿರುವುದಿಲ್ಲ.

ಇನ್ನು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಪುನೀತ್ ಅವರಿಗೆ ಯಶ್ ಅವರ ಮೇಲೆ ಕೊಂಚ ಹೆಚ್ಚು ಅಭಿಮಾನವಿತ್ತು.ಇದಕ್ಕೆ ಕಾರಣ ಪುನೀತ್ ಅವರಿಗೂ ಸಹ ಕನ್ನಡ ಚಿತ್ರರಂಗವನ್ನು ಹೊಸ ರೀತಿ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿತ್ತು. ಇತ್ತ ಯಶ್ ಅವರಿಗೂ ಕೂಡ ಅದೇ ಆಸೆಯಿದ್ದ ಕಾರಣ ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗ ದೊಡ್ಡ ಹೆಸರು ಮಾಡುತ್ತದೆ.Puneeth Rajkumar Dancing With KGF Star Yash A Day Before His Death Goes Viral

ಈ ಬಗ್ಗೆ ಬಹಳಷ್ಟು ಬಾರಿ ಮಾತನಾಡಿದ್ದ ಅಪ್ಪು ಯಶ್ ಅವರಿಗೆ ಶುಭ ಕೋರಿದ್ದು ಅಷ್ಟೇ ಅಲ್ಲದೇ ಯಶ್ ಅವರ ಬಳಿಯಿದ್ದ ಆ ವಸ್ತುವನ್ನು ಇಷ್ಟಪಟ್ಟು ಯಶ್ ಅವರ ಬಳಿ ಹೇಳಿಕೊಂಡಿದ್ದರು. ಪುನೀತ್ ಆಸೆ ಪಟ್ಟಿದ್ದು ಮತ್ತಿನ್ನೇನು ಅಲ್ಲ ಯಶ್ ಅವರ ಗಡ್ಡವನ್ನ.ಹೌದು ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದ ಪುನೀತ್ ಯಶ್ ಅವರ ಕೆಜಿಎಫ್ ಗಡ್ಡ ಬಹಳ ಇಷ್ಟ.

ಆದರೆ ಏನ್ಮಾಡೋದು ನಮಗೆ ಆ ರೀತಿ ಗಡ್ಡ ಬರಲ್ಲ. ಅಂತ ಮಗುವಿನಂತೆ ನಗುತ್ತಿದ್ದರು.ಇನ್ನು ಈ ಬಗ್ಗೆ ನಿರೂಪಕಿ ರಶ್ಮಿ ಅವರ ಕಾರ್ಯಕ್ರಮದಲ್ಲಿಯೂ ಹೇಳಿಕೊಂಡಿದ್ದ ಅಪ್ಪು ಅವರು ನನಗೆ ಯಶ್ ಅವರಿಂದ ಅವರ ಕೆಜಿಎಫ್ ಸಿನಿಮಾ ಶೈಲಿಯ ಗಡ್ಡ ಪಡೆಯುವ ಆಸೆ ಇದೆ ಎಂದು ನಕ್ಕಿದ್ದರು.

ತಾವು ನಗುವದಷ್ಟೇ ಅಲ್ಲದೇ ತಮ್ಮ ಮುಗ್ಧ ನಗುವಿನ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಸ್ವತವಾಗಿ ನೆಲೆಯೂರಿ ನೋವ ಕೊಟ್ಟು ಹೊರಟೇ ಬಿಟ್ಟರು ಈ ನದುವಿನ ಸರದಾರ. ನಿಜಕ್ಕೂ ನಮ್ಮ ಪರಮಾತ್ಮ ನನ್ನು ಆ ಪರಮಾತ್ಮ ಇಷ್ಟು ಬೇಗ ಕರೆಸಿಕೊಂಡಿರುವುದು ನಿಜಕ್ಕೂ ಅನ್ಯಾವೇ ಸರಿ.Rockstar Yash Penned Emotional Note About His friend Puneeth Rajkumar - Chitraseema

Join Nadunudi News WhatsApp Group