ಬಡವ ಶ್ರೀಮಂತ ಅನ್ನದೆ ಯಾರದ್ದೇ ಮದುವೆಗೆ ಹೋದರು ಅಪ್ಪು ಕೊಡುತ್ತಿದ್ದ ಗಿಫ್ಟ್ ಏನು ಗೊತ್ತಾ, ನಿಜಕ್ಕೂ ಆಶ್ಚರ್ಯ

ಈ ಸಮಯ ಎಂಬುದು ಅದೆಷ್ಟು ಬೇಗ ಸಾಗುತಿದೆ ಎಂದು ತಿಳಿಯಲಾಗುತ್ತಿಲ್ಲ. ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಅದಾಗಲೇ ಇಪ್ಪತ್ತು ದಿನಗಳು ಕಳೆದೇ ಹೋಗಿದ್ದು ಈಗಲೂ ಕೂಡ ಸೋಶಿಯಲ್ ಮೀಡಿಯದಲ್ಲಿ ಆ ನಗುಮುಖದ ರಾಜಕುಮಾರನ ಫೋಟೋಗಳನ್ನು ವೀಡಿಯೋಗಳನ್ನು ನೋಡುತ್ತಿದ್ದರೆ ಯಾಕೆ ಹೀಗೆಲ್ಲಾ ಆಗಿ ಹೋಯ್ತು ಎಂದು ಮನಸ್ಸಿನಲ್ಲಿ ಒಂದು ರೀತಿ ನೋವಾಗುತ್ತದೆ.

ಹೌದು ಅವರ ಕುಟುಂಬ ಅಶ್ವಿನಿ ಅವರನ್ನು ಹಾಗೂ ಮಕ್ಕಳನ್ನು ನೆನೆದರೆ ಹೊಟ್ಟೆಯಲ್ಲೇನೋ ಒಂದು ರೀತಿ ಸಂಕಟದ ಅನುಭವವಾಗುವುದು ಸತ್ಯ. ಆದರೆ ವಾಸ್ತವ ಅರಿತು ನೋವಿನ ಜೊತೆಯೇ ಜೀವನ ಸಾಗಿಸಬೇಕಿದೆ.ಇನ್ನು ಪುನೀತ್ ರಾಜ್ ಕುಮಾರ್ ಅವರು ತಮ್ಮ ಕುಟುಂಬಕ್ಕೆ ಎಷ್ಟು ಮಹತ್ವ ಹಾಗೂ ಪ್ರಾಮುಖ್ಯತೆ ನೀಡುತ್ತಿದ್ದರು ಎಂಬುದು ತಮಗೆಲ್ಲರಿಗೂ ಕೂಡ ತಿಳಿದಿಯೇ ಇದೆ.Puneeth Rajkumar at Pavan Wadeyar and Apeksha Purohith wedding -  Photos,Images,Gallery - 96738

ಇನ್ನು ಮಕ್ಕಳಿಗೆ ಒಬ್ಬ ತಂದೆ ಹೇಗಿರಬೇಕುಬತಂದೆ ತಾಯಿಗೆ ಒಬ್ಬ ಮಗ ಹೇಗಿರಬೇಕು ಹೆಣ್ಣಿಗೆ ಗಂಡ ಆದವನು ಹೇಗಿರಬೇಕು. ಅಣ್ಣ ಅಕ್ಕಂದಿರಿಗೆ ತಮ್ಮನಾದವನು ಹೇಗಿರಬೇಕು ಈ ಎಲ್ಲಾ ಸಂಬಂಧಗಳಿಗೂ ಕೂಡ ನಮ್ಮ ಪುನೀತ್ ರಾಜ್ ಕುಮಾರ್ ಅವರೊಬ್ಬರನ್ನೇ ಉದಾಹರಣೆಯಾಗಿ ನೀಡಬಹುದು ಎಂದರೆ ತಪ್ಪಾಗಲಾರದು. ಇನ್ನು ಯಾರೇ ಆತ್ಮೀಯರು ಕರೆದರೂ ಯಾವುದೇ ಸಮಾರಂಭ ಮಿಸ್ ಮಾಡುತ್ತಿರದ ಅಪ್ಪು ಪತ್ನಿ ಜೊತೆಗೆ ಹೋಗುತ್ತಿದ್ದರು.

ಬಹಳ ಇಂಟ್ರೆಸ್ಟಿಂಗ್ ವಿಷಯ ಎಂದರೆ ಮದುವೆ ಸಮಾರಂಭಗಳಿಗೆ ಬರುತ್ತಿದ್ದ ಅಪ್ಪು ಹಾಗು ಅಶ್ವಿನಿ ತಪ್ಪದೆ ಒಂದು ಉಡುಗೊರೆಯನ್ನು ನೀಡುತ್ತಿದ್ದರು ಆ ಉಡುಗೊರೆ ನಿಜಕ್ಕೂ ಏನು ಎನ್ನುವುದು ನಾವಿಂದು ತಿಳಿಸುತ್ತೇವೆ ನೋಡಿ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಮದುವೆಗೆ ಬರುತ್ತಿದ್ದಾರೆ ಅಂದರೆ ಹೂಗುಚ್ಛವನ್ನೋ ಅಥವಾ ಇನ್ನೇನೋ ಗಿಫ್ಟ್ ನೀಡುವುದು ಸಾಮಾನ್ಯ. ಆದರೆ ಅಪ್ಪು ಹಲವು ಬಾರಿ ಸದ್ದಿಲ್ಲದೇ ಮಾಡುತ್ತಿದ್ದ ದಾನ ಯಾರಿಗೂ ತಿಳಿಯುತ್ತಿರಲಿಲ್ಲ.Puneeth Rajkumar graces Santhosh Ananddram's reception | Kannada Movie News  - Times of India

ಹೌದು ಆತ್ಮೀಯರ ಮದುವೆಗೆ ತೆರಳುತ್ತಿದ್ದ ಪುನೀತ್ ಹಾಗು ಅಶ್ವಿನಿ ಜೋಡಿ ವಿವಾಹಿತ ಜೋಡಿಗೆ ಬಂಗಾರದ ನಾಣ್ಯ ಅಥವಾ ಸಾರವನ್ನು ಗಿಫ್ಟ್ ಕೊಡುತ್ತಿದ್ದರು, ಇದಲ್ಲವೇ ದೊಡ್ಮನೆಯ ದೊಡ್ಡ ಗುಣ ನಿಜಕ್ಕೂ ಇಂತಹ ಒಬ್ಬ ವ್ಯಕ್ತಿ ನಮ್ಮ ಜೊತೆ ಇಲ್ಲ ಎನ್ನುವುದು ಬಹಳ ನೋವು ಕೊಡುತ್ತೆ. ಅಪ್ಪು ಮತ್ತೆ ಕರ್ನಾಟಕದಲ್ಲಿ ಹುಟ್ಟಿಬರಲಿ ಎನ್ನುವುದೇ ಕನ್ನಡಿಗರ ಆಶಯ.

Join Nadunudi News WhatsApp Group

Join Nadunudi News WhatsApp Group