7 ವರ್ಷಗಳಿಂದ ಚಿತ್ರರಂಗದಲ್ಲಿ ದುಡಿದು ನಟಿ ರಚಿತಾರಾಮ್ ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ, ನೋಡಿ ಒಮ್ಮೆ

ರಚಿತಾ ರಾಮ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ. ಹೌದು ಗುಳಿ ಕೆನ್ನೆಯ ಚೆಲುವೆ ತನ್ನ ನಟನೆ ಹಾಗೂ ನಗು ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ರಚಿತಾ ರಾಮ್ ಅವರ ನಟನೆಗೆ ಫಿದಾ ಆಗದವರು ಯಾರು ಇಲ್ಲ.

ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರತಿಭಾವಂತ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013ರಲ್ಲಿ ಚಂದನವನಕ್ಕೆ ಎಂಟ್ರಿ ಕೊಡುವ ಮೂಲಕ ಸಿನಿರಂಗದಲ್ಲಿ ಬದುಕು ಕಟ್ಟಿಕೊಂಡರು. ಹೌದು ಮುದ್ದು ಮುದ್ದಾದ ಮಾತು, ಮುಖದ ಮೇಲಿನ ನಗು, ನಗುವಾಗ ಮೂಡುವಾಗ ಗುಳಿ ಕೆನ್ನೆ ನೋಡಿದರೆ ಸಾಕು, ಯಾರೇ ಆದರೂ ರಚಿತಾ ರಾಮ್ ಚಂದವನ್ನು ಹೊಗಳದೆ ಇರಲು ಸಾಧ್ಯವಿಲ್ಲ.

ದುಬಾರಿ ಕಾರ್ ಖರೀದಿ ಮಾಡಿದ ಡಿಂಪಲ್ ಕ್ವೀನ್ ರಚಿತಾ | Actress Rachita Ram Bought  Mercedes Benz Car - Kannada Filmibeat
ಅಂದಹಾಗೆ, 2013 ರಲ್ಲಿ ತೆರೆಕಂಡ ಬುಲ್‌ಬುಲ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ ರಾಮ್ ಅದೃಷ್ಟ ಖುಲಾಯಿಸಿತು.ಹೌದು ಇದೀಗ ಕನ್ನಡ ಚಿತ್ರರಂಗದ ಟಾಪ್ ನಟಿಯರ ಪಟ್ಟಿಯಲ್ಲಿ ರಚಿತಾ ರಾಮ್ ಅವರು ಮುಂಚಣಿಯಲ್ಲಿ ಇದ್ದು ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.ಬುಲ್ ಬುಲ್ ಚಿತ್ರ ಇವರಿಗೆ ದೊಡ್ಡ ಹೆಸರು ಮತ್ತು ಯಶಸ್ಸು ತಂದು ಕೊಟ್ಟಿತ್ತು. ಆನಂತರ ಸಾಲು ಸಾಲು ಚಿತ್ರಗಳಲ್ಲಿ ರಚಿತಾ ರಾಮ್ ಬ್ಯುಸಿ ಆಗಿಬಿಟ್ಟರು.

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ರಚಿತಾ ರಾಮ್ ಅವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡದ ಬಹುತೇಕ ನಾಯಕ ನಟರ ಜೊತೆ ನಟನೆಯನ್ನ ಮಾಡಿರುವ ರಚಿತಾ ರಾಮ್ ಅವರು ಸದ್ಯ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನು ನಟಿ ರಚಿತಾ ರಾಮ್ ಅವರು ಸಂಭಾವನೆಯ ವಿಚಾರದಲ್ಲಿ ಕೂಡ ಬಹಳ ಮೇಲೆ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ಅವರ ಸಂಭಾವನೆ ಬಹಳ ಜಾಸ್ತಿಯಿದೆ.Rachita Ram springs a surprise!

ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ಅವರು ಒಂದು ಚಿತ್ರಕ್ಕೆ 35 ರಿಂದ 40 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ. ಸರಿಸುಮಾರು ಏಳು ವರ್ಷದ ಈ ಜರ್ನಿಯಲ್ಲಿ ತಮ್ಮ ಸ್ವಂತ ಪರಿಶ್ರಮದ ಮೂಲಕ ಈಗಾಗಲೇ ಸಂಪಾದನೆಯಲ್ಲಿ ಕೂಡ ರಚ್ಚು ಮುಂದು. ಏನಿಲ್ಲವೆಂದರೂ ಇಷ್ಟು ವರ್ಷಗಳ ಸಂಪಾದನೆಯಲ್ಲಿ 35 ರಿಂದ 40 ಕೋಟಿಯಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group

ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಸೇರಿದಂತೆ ರಚಿತಾ ರಾಮ್ ರವರ ಕೈಯಲ್ಲಿ ಏನಿಲ್ಲವೆಂದರೂ 10 ಸಿನಿಮಾಗಳು ಸಾಲು ಸಾಲಾಗಿ ನಿಂತಿವೆ. ಅಲ್ಲದೇ ಇದರಲ್ಲಿ ರಚಿತಾ ರಾಮ್ ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ.ಹೆಣ್ಣು ಮಗಳು ಸ್ವಾವಲಂಬಿಯಾಗಿ ದುಡಿದು ಬೇರೆಯವರಿಗೆ ಹಾಗೂ ಈ ಸಮಾಜಕ್ಕೆ ಮಾದರಿಯಾಗೋದು ಗಂದರೆ ರಚಿತಾ ರಾಮ್ ರವರನ್ನು ನೋಡಿಯೇ ಕಲಿಯಬೇಕು.Rachita Ram HD Wallpapers | Latest Rachita Ram Wallpapers HD Free Download  (1080p to 2K) - FilmiBeat

Join Nadunudi News WhatsApp Group