ಹುಟ್ಟಿದ ಹಬ್ಬದ ದಿನವೇ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳುಹಿಸಿದ ರಾಧಿಕಾ ಪಂಡಿತ್, ಸಂದೇಶ ಏನು ನೋಡಿ.

ನಟಿ ರಾಧಿಕಾ ಪಂಡಿತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಕನ್ನಡ ಚಿತ್ರಗಳಲ್ಲಿ ಹಲವು ನಾಯಕ ನಂತರ ಜೊತೆ ಅಭಿನಯವನ್ನ ಮಾಡಿದ ರಾಧಿಕಾ ಪಂಡಿತ್ ಅವರು ಈಗ ಚಿತ್ರರಂಗದಿಂದ ದೂರ ಉಳಿದಿದ್ದು ತಮ್ಮ ಮಕ್ಕಳ ಆರೈಕೆಯಲ್ಲಿ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ನಾಲ್ಕು ವರ್ಷದ ಹಿಂದೆ ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನ ಮದುವೆಯಾದ ನಂತರ ನಟಿ ರಾಧಿಕಾ ಪಂಡಿತ್ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಬಹುದು.

ಇನ್ನು ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ನಟನೆಯನ್ನ ಮಾಡಲಿ ಅಥವಾ ಮಾಡದೆ ಇರಲಿ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಪ್ರತಿ ವರ್ಷ ರಾಧಿಕಾ ಪಂಡಿತ್ ಅವರ ಹುಟ್ಟಿದ ಹಬ್ಬದ ದಿನ ಅವರ ಅಭಿಮಾನಿಗಳು ರಾಧಿಕಾ ಪಂಡಿತ್ ಅವರ ಮನೆಗೆ ಹೋಗಿ ಹುಟ್ಟಿದ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಿದ್ದರು ಮತ್ತು ಕೇಕ್ ಕಟ್ ಮಾಡುವುದರ ಮೂಲಕ ಕೆಲವು ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳುತ್ತಿದ್ದರು.

Radhika birthday

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಇಂದು ರಾಧಿಕಾ ಪಂಡಿತ್ ಅವರ ಹುಟ್ಟಿದ ದಿನ ಮತ್ತು ಮನೆಯಲ್ಲಿ ಕುಟುಂಬದವರು ಸೇರಿಕೊಂಡು ಹುಟ್ಟಿದ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡಿದ್ದಾರೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ರಾಧಿಕಾ ಪಂಡಿತ್ ಅವರು ಇಂದು ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನ ಕಳುಹಿಸಿದ್ದು ಸದ್ಯ ರಾಧಿಕಾ ಪಂಡಿತ್ ಅವರ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಹುಟ್ಟಿದ ಹಬ್ಬದ ದಿನವೇ ರಾಧಿಕಾ ಪಂಡಿತ್ ಅವರು ತಮ್ಮ ಅಭಿಮಾನಿಗಳಿಗೆ ಕಳುಹಿಸಿದ ಆ ಸಂದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ರಾಧಿಕಾ ಪಂಡಿತ್ ಅವರ ಅಭಿಮಾನಿ ಆಗಿದ್ದರೆ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳಿ.

ಯಶ್ ಮತ್ತು ಕುಟುಂಬದವರ ಜೊತೆ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಿಕೊಂಡ ರಾಧಿಕಾ ಪಂಡಿತ್ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶವನ್ನ ಕಳುಹಿಸಿದ್ದಾರೆ. “ಪ್ರತಿ ವರ್ಷ ಬೇರೆ ಜಾಗದಿಂದ ಬೇರೆ ಊರುಗಳಿಂದ ನನ್ನ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಲು ಮತ್ತು ನನ್ನನ್ನ ಭೇಟಿ ಮಾಡಲು ನೀವು ಬರುತ್ತಿದ್ದಿರಿ, ಆದರೆ ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಿಲ್ಲ, ಕರೋನ ಎಲ್ಲಾ ಕಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ನಿಮ್ಮನ್ನ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತುಂಬಾ ಕಾಡುತ್ತಿದೆ, ಈ ಭಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ, ದಯವಿಟ್ಟು ಯಾರು ಬೇಜಾರಾಗಬೇಡಿ” ಎಂದು ಸಂದೇಶ ಕಳುಹಿಸಿದ್ದಾರೆ ರಾಧಿಕಾ ಪಂಡಿತ್ ಅವರು. ಕೊನೆಯಲ್ಲಿ ” ನಿಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಸಂದೇಶಗಳನ್ನ ನಾವು ನೋಡುತ್ತಿದ್ದೇನೆ ಮತ್ತು ಸಾಧ್ಯವಾದಷ್ಟು ಅದಕ್ಕೆ ಉತ್ತರ ಕೊಡುತ್ತೇನೆ ಮತ್ತು ಎಲ್ಲಾ ಪ್ರೀತಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ” ಎಂದು ರಾಧಿಕಾ ಪಂಡಿತ್ ಅವರು ಹೇಳಿದ್ದಾರೆ.

Join Nadunudi News WhatsApp Group

Radhika birthday

Join Nadunudi News WhatsApp Group