ಭಾರತ ಚಿತ್ರರಂಗದ ಇನ್ನೊಬ್ಬ ಖ್ಯಾತ ನಟ ಕರೋನ ಸೋಂಕಿಗೆ ಬಲಿ, ಕಣ್ಣೀರಿನಲ್ಲಿ ಇಡೀ ಚಿತ್ರರಂಗ.

ಕರೋನ ಮಹಾಮಾರಿ ಅನ್ನುವುದು ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕರೋನ ಮಹಾಮಾರಿಯ ಸೋಂಕು ಚಿತ್ರರಂಗಕ್ಕೆ ಆವರಿಸಿದ್ದು ಚಿತ್ರರಂಗದ ಹಲವು ನಟ ನಟಿಯರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಲ್ಲಿ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇದ್ದು ಜನರು ಕರೋನ ಮಾರ್ಗ ಸೂಚಿಯನ್ನ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಅಭಿಮಾನಿಗಳಿಗೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು ದೇಶದ ಇನ್ನೊಮ್ಮ ಹೆಸರಾಂತ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಅನ್‍ಫ್ರೀಡಂ ಸಿನಿಮಾ ಮೂಲಕ ಬಹಳ ಅಭಿಮಾನಿಗಳನ್ನ ಗಳಿಸಿಕೊಂಡಿದ್ದ ಖ್ಯಾತ ನಟ ರಾಹುಲ್ ವೊಹ್ರಾ ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ ಶನಿವಾರ ರಾಹುಲ್ ಅವರಿಗೆ ಕರೋನ ಸೋಂಕಿನ ತೀವ್ರತೆ ಜಾಸ್ತಿ ಆಗಿದ್ದು ತಮಗೆ ಸಹಾಯ ಮಾಡುವಂತೆ ಮನವಿಯನ್ನ ಕೂಡ ಮಾಡಿಕೊಂಡಿದ್ದರು ಮತ್ತು ತಮಗೆ ಕರೋನ ಸೋಂಕು ತಗುಲಿರುವ ಬಗ್ಗೆ ಮಾಹಿತಿಯನ್ನ ಕೂಡ ನೀಡಿದ್ದರು. ನನಗೆ ಒಳ್ಳೆಯ ಚಿಕಿತ್ಸೆ ದೊರೆತರೆ ನಾವು ಬದುಕಿ ಉಳಿಯುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದರ ಜೊತೆಗೆ ತಮ್ಮ ಬೆಡ್ ನಂಬರ್ ಕೂಡ ಬರೆದುಕೊಂಡಿದ್ದರು.

Rahul vohra

ರಾಹುಲ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹುಟ್ಟಿ ಬಂದು ಒಳ್ಳೆಯ ಕೆಲಸಗಳನ್ನ ಮಾಡುತ್ತೇನೆ, ಸದ್ಯ ನಾನು ಆತ್ಮಸ್ಥೈರ್ಯ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು. ಇನ್ನು ನಿನ್ನೆ ರಾಹುಲ್ ಅವರಿಗೆ ಚಿಕ್ಸಿತೆ ಫಲಕಾರಿಯಾಗದೆ ಕೊನೆಯುಸಿರನ್ನ ಎಳೆದಿದ್ದಾರೆ ಎಂದು ನಿರ್ದೇಶಕ ಅರವಿಂದ್ ಗೌರ್ ಅವರು ತಿಳಿಸಿದ್ದಾರೆ. ರಾಹುಲ್ ವೋಹ್ರಾ ನಮ್ಮೊಂದಿಗಿಲ್ಲ, ನಮ್ಮ ಪ್ರತಿಭಾನ್ವಿತ ಕಲಾವಿದ ಇಂದು ಜಗತ್ತಿನಲ್ಲಿಲ್ಲ.

ಒಳ್ಳೆಯ ಚಿಕಿತ್ಸೆ ಸಿಕ್ಕರೆ ಬದುಕುತ್ತೇನೆಂದು ನಿನ್ನೆ ಹೇಳಿಕೊಂಡಿದ್ದನು. ವಿಷಯ ತಿಳಿಯುತ್ತಲೇ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಆಯುಷ್ಮಾನ್ ದ್ವಾರಾಕಗೆ ಶಿಫ್ಟ್ ಮಾಡಲಾಗಿತ್ತು, ಆದರೆ ಆತನನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ನಮ್ಮನ್ನು ಕ್ಷಮಿಸು ರಾಹುಲ್, ನಿನ್ನನ್ನು ಬದುಕಿಸಿಕೊಳ್ಳದ ನಾವು ಅಪರಾಧಿಗಳು. ನಿನಗೆ ನನ್ನ ಅಂತಿಮ ನಮನಗಳು ಎಂದು ಅನ್‍ಫ್ರೀಡಂ ಚಿತ್ರದ ನಿರ್ದೇಶಕ ಅರವಿಂದ್ ಗೌರ್ ಸಂತಾಪ ಸೂಚಿಸಿದ್ದಾರೆ. ರಾಹುಲ್ ಅವರು ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಕಿರು ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು ಮತ್ತು ಕೆಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದರು, ಏನೇ ಆಗಲಿ ರಾಹುಲ್ ವೋಹ್ರಾ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Rahul vohra

Join Nadunudi News WhatsApp Group