Railway Ticket Confirmation: ರೈಲು ಟಿಕೆಟ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಸಿಗಲಿದೆ ದುಪ್ಪಟ್ಟು ಹಣ

ಇನ್ನುಮುಂದೆ ರೈಲ್ವೆ ಟಿಕೆಟ್ ಕನ್ಫರ್ಮ್ ಆಗದೆ ಇದ್ದರೆ ಚಿಂತಿಸುವ ಅಗತ್ಯ ಇಲ್ಲ

Railway Ticket Confirmation New Update: ಸಾಮಾನ್ಯವಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇನ್ನಿತರ ವಿಧಾನದ ಪ್ರಯಾಣಕ್ಕೆ ಹೋಲಿಸಿದರೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಕ್ಕಾಗಿ ಜನರು ಮೊದಲು ರೈಲು ಪ್ರಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಇನ್ನು ರೈಲುಗಳಲ್ಲಿ ಕೂಡ ಪ್ರಯಾಣಿಕರಿಗಾಗಿಗೇ ಸಾಕಷ್ಟು ಅನುಕೂಲವಿರುತ್ತದೆ. ರೈಲ್ವೆ ಇಲಾಖೆಯು ಪ್ರಯಾಣಿಕರಿಗೆಂದೇ ಹಲವು ಸೌಲಭ್ಯವನ್ನು ನೀಡಿರುತ್ತದೆ. ಸದ್ಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ರೈಲಿನಲ್ಲಿ ಪ್ರಯಾಣ ಮಾಡುವವರಿಗಾಗಿ ರೈಲ್ವೆ ಇಲಾಖೆ ಸದ್ಯ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Railway Ticket Confirmation
Image Credit: Informalnewz

ಇನ್ನುಮುಂದೆ ರೈಲ್ವೆ ಟಿಕೆಟ್ ಕನ್ಫರ್ಮ್ ಆಗದೆ ಇದ್ದರೆ ಚಿಂತಿಸುವ ಅಗತ್ಯ ಇಲ್ಲ
ರೈಲುಪ್ರಯಾಣ ಮಾಡಲು ರೈಲ್ವೆ ಟಿಕೆಟ್ ಬುಕ್ ಮಾಡಲು ಸಮಸ್ಯೆ ಎದುರಾಗುವುದು ಸಹಜ. ಪ್ರಯಾಣಿಕರಿಗೆ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಪ್ರಯಾಣ ಕೂಡ ಕಷ್ಟವಾಗುತ್ತದೆ ಹಾಗೆ ಟಿಕೆಟ್ ಬುಕಿಂಗ್ ಹಣ ಹಿಂಪಡೆಯುವುದು ಕೂಡ ಕಷ್ಟವಾಗುತ್ತದೆ. ಇವೆಲ್ಲವನ್ನು ಗಮನಿಸಿದ ರೈಲ್ವೆ ಇಲಾಖೆ ಇದೀಗ Ticket Confirm ಮಾಡುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ. ಹೌದು, ನಿಮ್ಮ ಟಿಕೆಟ್ ದೃಡೀಕರಿಸದಿದ್ದರೆ ನೀವು ಯಾವುದೇ ಸಮಸ್ಯೆಯಿಲ್ಲದೆ ಹಣವನ್ನು ಮರಳಿ ಪಡೆಯಬಹುದು. ಟಿಕೆಟ್ ಹಣ ಮರಳಿ ಪಡೆಯುವಲ್ಲಿ ಸಮಸ್ಯೆಯಾದರೆ ದುಪ್ಪಟ್ಟು ಹಣವನ್ನು ಕೂಡ ಪಡೆಯಬಹುದು. ಅದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಡಿಟೈಲ್ಸ್.

ಟಿಕೆಟ್ ಕನ್ಫರ್ಮ್ ಆಗದೆ ಇದ್ದರೆ ಸಿಗುತ್ತೆ ದುಪ್ಪಟ್ಟು ಹಣ
Goibibo ನಿಮ್ಮ ರೈಲು ಪ್ರಯಾಣವನ್ನು ಹೆಚ್ಚು ಸುರಕ್ಷಿತಗೊಳಿಸಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಸ್ತವವಾಗಿ, ಕಂಪನಿಯು ಇತ್ತೀಚೆಗೆ ‘ಗೋ ಕನ್ಫರ್ಮ್ಡ್ ಟ್ರಿಪ್’ ಎಂಬ ಸೌಲಭ್ಯವನ್ನು ಪ್ರಾರಂಭಿಸಿದೆ. GoiBibo ನ ‘Go Confirmed Trip’ ಅಡಿಯಲ್ಲಿ, ನೀವು ಕಾಯುವ ಟಿಕೆಟ್ ಅನ್ನು ಬುಕ್ ಮಾಡಿದಾಗ ನಿಮ್ಮ ಟಿಕೆಟ್ ದೃಢೀಕರಣವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಚಾರ್ಟ್ ಸಿದ್ಧಪಡಿಸಿದ ನಂತರವೂ ನಿಮ್ಮ ಟಿಕೆಟ್ ದೃಢೀಕರಿಸದಿದ್ದರೆ, Goibibo ನಿಮಗೆ ಟಿಕೆಟ್ ಶುಲ್ಕವನ್ನು ದ್ವಿಗುಣಗೊಳಿಸುತ್ತದೆ. ಈ ಸಮಯದಲ್ಲಿ ನೀವು ನಿಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಪಡೆಯಬಹುದು.

Railway Ticket Confirmation New Update
Image Credit: Herzindagi

Join Nadunudi News WhatsApp Group

Join Nadunudi News WhatsApp Group