ಬಿಟ್ಟುಹೋದ ರಶ್ಮಿಕಾ ಬಗ್ಗೆ ಕೊನೆಗೂ ಮನಬಿಚ್ಚಿ ಮಾತಾಡಿದ ರಕ್ಷಿತ್ ಶೆಟ್ಟಿ, ಹೇಳಿದ್ದೆ ಬೇರೆ ನೋಡಿ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನದ ಮೂಲಕವೇ ಸುದ್ದಿಯಾಗಿರುವ ಹಾಗು ಅತ್ಯಂತ ಯಶಸ್ಸು ಕಂಡಿರುವ ಯಾವುದೇ ನಟನಾ ಹಿನ್ನೆಲೆಯ ಕುಟುಂಬವಿರದೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಎಂದರೆ ಅದು ರಕ್ಷಿತ್ ಶೆಟ್ಟಿ. ಈಗಾಗಲೇ ರಕ್ಷಿತ್ ಕೈಗೆತ್ತಿಕೊಂಡಿರುವ ಎಲ್ಲಾ ಪ್ರಾಜೆಕ್ಟ್ ಗಳು ಹಿಟ್ ಎನಿಸಿಕೊಂಡಿವೆ. ಅದರಲ್ಲೂ ಚಾರ್ಲಿ ಚಿತ್ರ ಈಗಾಗಲೇ ಇಡೀ ಇಂಡಿಯಾದ ಜನಮನ ಗೆದ್ದಿದೆ.

ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇದರೊಂದಿಗೆ ‘ಕಿರಿಕ್ ಪಾರ್ಟಿ 2’ ಬಗ್ಗೆನೂ ಮಾತಾಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಬಗ್ಗೆ ಮಾತಾಡುವಾಗ ಕರ್ಣ ಬಗ್ಗೆ ಉದಾಹರಣ ನೀಡಿದ್ದೇಕೆ.ಅನ್ನುವುದನ್ನು ತಿಳಿಯಲು ಮುಂದೆ ಓದಿ.ನನ್ನ ಲೈಫ್‌ನಲ್ಲಿ ಬಂದು ಪಾಠ ಹೇಳಿ ಹೋದ ಹುಡುಗಿ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಬಿಡುಗಡೆಯಾದ ಬಳಿಕವೂ ಪ್ರಚಾರ ಮಾಡುತ್ತಲೇ ಇದ್ದಾರೆ.Did Rashmika Mandanna lose Shahid Kapoor's Jersey for acting pricey? Here  is her response - IBTimes India

ಈ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರೂಪಕರೊಬ್ಬರು ರಶ್ಮಿಕಾ ಬಗ್ಗೆ ಪ್ರಶ್ನೆ ಮಾಡಿದ್ದರು.ಆಗ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಕರ್ಣನ ಲೈಫ್‌ ಒಳಗೆ ನಾಲ್ಕೈದು ಹುಡುಗಿಯರು ಬಂದು ಹೋಗುತ್ತಾರೆ. ಅಂತಲೇ ನನ್ನ ಲೈಫ್‌ನಲ್ಲಿ ರಶ್ಮಿಕಾ ಬಂದು ಹೋಗಿದ್ದಾರೆ ಎಂದಿದ್ದಾರೆ. ಇದೇ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

” ರಶ್ಮಿಕಾ ಆಗಲೇ ಹೇಳಿದ ಹಾಗೆ ಕರ್ಣನ ಲೈಫ್‌ನಲ್ಲಿ ನಾಲ್ಕೈದು ಹುಡುಗಿಯರು ಬರುತ್ತಾರೆ. ಹಾಗೆ ಒಬ್ಬಳು ಹುಡುಗಿ ನನ್ನ ಲೈಫ್‌ನಲ್ಲಿ ಬಂದಳು. ಸಾಕಷ್ಟು ಪಾಠಗಳನ್ನು ಹೇಳಿಕೊಟ್ಟು ಹೋದಳು.” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.ರಕ್ಷಿತ್ ಶೆಟ್ಟಿಯ ಈ ಪ್ರಬುದ್ಧ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.Rashmika Mandanna's ex-boyfriend posts her unseen video | Tamil Movie News  - Times of India

“ಯಾರ ಲೈಫ್‌ ಕೂಡ ಎರಡು ಲವ್‌ ಸ್ಟೋರಿಯಲ್ಲಿ ಲೈಫ್ ಮುಗಿಯಲ್ಲ. ಮದುವೆ ಆಗುವುದರೊಳಗೆ ನಾಲ್ಕೈದು ಲವ್‌ಸ್ಟೋರಿ ಕಾಮನ್‌ ಆಗಿ ಆಗಿರುತ್ತೆ. ಅದು ಒನ್ ವೇ ಇರಲಿ. ಇಲ್ಲಾ ಟು ವೇ ಇರಲಿ ಅದು ಬೇರೆ ವಿಷ್ಯ. ಆದರೆ ಎಲ್ಲರ ಲೈಫ್‌ನಲ್ಲೂ ನಾಲ್ಕೈದು ಲವ್‌ ಸ್ಟೋರಿಯಂತೂ ಇದ್ದೇ ಇರುತ್ತೆ. ಐದನೆಯದ್ದೋ, ಆರನೆಯದ್ದೋ ಮದುವೆಯಾಗಿ ಕನ್ವರ್ಟ್ ಆಗುತ್ತೆ. ಇಲ್ಲಾ ಇದ್ಯಾವುದೂ ಆಗದೆ ಅರೇಂಜ್ ಮ್ಯಾರೇಜ್ ಆಗುತ್ತೆ.” ಎಂದು ‘ಕಿರಿಕ್ ಪಾರ್ಟಿ 2’ ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group