ರಾಬರ್ಟ್ ಚಿತ್ರದ ಬಿಡುಗಡೆಯ ದಿನವೇ ದರ್ಶನ್ ಅವರ ದೊಡ್ಡ ಸೀಕ್ರೆಟ್ ಹೇಳಿದ ರಕ್ಷಿತಾ, ಸೀಕ್ರೆಟ್ ಏನು ಗೊತ್ತಾ.

ಸದ್ಯ ಕರ್ನಾಟಕ ಮಾತ್ರವಲ್ಲದೆ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದೂ ರಾಬರ್ಟ್ ಚಿತ್ರದ ವಿಷಯವೆಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ರಾಬರ್ಟ್ ಚಿತ್ರ ಬಹಳ ಭರ್ಜರಿಯಾಗಿ ಬಿಡುಗಡೆಯಾಗಿದ್ದು ಜನರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಎಲ್ಲಾ ಅಭಿಮಾನಿಗಳು ಚಿತ್ರವನ್ನ ಹಾಡಿ ಹೊಗಳಿದ್ದು ಚಿತ್ರದಲ್ಲಿ ದರ್ಶನ್ ಅಭಿನಯವನ್ನ ಮೆಚ್ಚಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಹಳ ಅದ್ದೂರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಎಲ್ಲಾ ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದೆ ಎಂದು ಹೇಳಬಹುದು.

ಇನ್ನು ಚಿತ್ರವನ್ನ ನೋಡಿದ ಸಿನಿ ರಸಿಕರು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ. ಇನ್ನು ಚಿತ್ರವನ್ನ ನೋಡಿದ ಕೆಲವು ನಟ ನಟಿಯರು ಕೂಡ ಚಿತ್ರವನ್ನ ಹೊಗಳಿದ್ದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ದರ್ಶನ್ ರಾಬರ್ಟ್ ಚಿತ್ರದ ಬಗ್ಗೆ ಒಂದು ಕಾಲದ ಕನ್ನಡ ಚಿತ್ರರಂಗದ ಟಾಪ್ ನಟಿಯಾದ ರಕ್ಷಿತಾ ಅವರು ಮಾತನಾಡಿದ್ದು ದರ್ಶನ್ ಅವರ ಒಂದು ಸೀಕ್ರೆಟ್ ಅನ್ನು ಅಭಿಮಾನಿಗಳಿಗೆ ಹೇಳಿದ್ದಾರೆ. ಹೌದು ಶಿವರಾತ್ರಿಗೂ ರಾಬರ್ಟ್ ಚಿತ್ರಕ್ಕೂ ಮತ್ತು ದರ್ಶನ್ ಅವರಿಗೂ ಇರುವ ಸಂಬಂಧದ ಬಗ್ಗೆ ಹೇಳಿದ್ದಾರೆ.

Rakshita releve darshan secret

ಹಾಗಾದರೆ ದರ್ಶನ್ ಅವರ ಆ ಸೀಕ್ರೆಟ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕರೋನ ನಂತರ ಒಳ್ಳೆಯ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು ಬಹಳ ಒಳ್ಳೆಯ ಸ್ವಾಗತವನ್ನ ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು. ರಕ್ಷಿತಾ ಅವ್ರು ಟ್ವಿಟರ್ ಮೂಲಕ ರಾಬರ್ಟ್ ಚಿತ್ರತಂಡಕ್ಕೆ ಶುಭಾಶಯವನ್ನ ಹೇಳಿದ್ದಾರೆ. “ರಾಬರ್ಟ್ ಚಿತ್ರಕ್ಕೆ ದೇಶದಲ್ಲಿ ಒಳ್ಳೆಯ ಪ್ರಶಂಸೆ ಸಿಗುತ್ತಿದೆ, ನಿರ್ಮಾಪಕ ಉಮಾಪತಿ ಗೌಡ ಮತ್ತು ನಿರ್ದೇಶಕ ತರುಣ್ ಮತ್ತು ದರ್ಶನ್ ಅವರ ಕೆಲಸ ಬಹಳ ಅದ್ಭುತವಾಗಿದೆ” ಎಂದು ರಕ್ಷಿತಾ ಅವರು ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ದರ್ಶನ್ ಕುರಿತಾಗಿ ಒಂದು ಸೀಕ್ರೆಟ್ ವಿಷಯವನ್ನ ರಕ್ಷಿತಾ ಅವರು ಹೇಳಿದ್ದಾರೆ.

ರಾಬರ್ಟ್ ಚಿತ್ರದ ಅದ್ಬುತ ಓಪನಿಂಗ್ ನೋಡಿ ನಟಿ ರಕ್ಷಿತಾ ಅವರು ಫುಲ್ ಖುಷಿ ಆಗಿದ್ದಾರೆ, ಇದು ಪಕ್ಕ ಪೈಸೆ ವಸೂಲ್ ಸಿನಿಮಾ ಮತ್ತು ಸಂಪೂರ್ಣ ಮನರಂಜನೆ ನೀಡಲಿದೆ ಎಂದು ಟ್ವಿಟ್ ಮಾಡಿದ ರಕ್ಷಿತಾ ಅವರು ನಿರ್ಮಾಪಕ ಮತ್ತು ನಿರ್ದೇಶಕರ ಕೆಲಸವನ್ನ ಕೊಂಡಾಡಿದ್ದಾರೆ. “ಇಂದು ಬಹಳ ವಿಶೇಷವಾದ ದಿನ, ಈ ವಿಶೇಷವಾದ ದಿನದಂದು ಸಿನಿಮಾ ತೆರೆಕಂಡಿದೆ” ಎಂದು ಹೇಳಿದ ರಕ್ಷಿತಾ ಅವರು, ಒಂದುಕಡೆ ಶಿವರಾತ್ರಿ ಹಬ್ಬ ಮತ್ತು ಇನ್ನೊಂದು ರಾಬರ್ಟ್ ಹಬ್ಬದಲ್ಲಿ ಇರುವ ದರ್ಶನ್ ಅಭಿಮಾನಿಗಳಿಗೆ ಒಂದು ಸೆಕ್ರೆರ್ಟ್ ಕೂಡ ತಿಳಿಸಿದ್ದಾರೆ. ದರ್ಶನ್ ಅವರು ಹುಟ್ಟಿದ ದಿನವೂ ಕೂಡ ಶಿವರಾತ್ರಿ ಆಗಿತ್ತಂತೆ, ಹೌದು ಡಿ ಬಾಸ್ 1977 ರ ಫೆಬ್ರವರಿ 16 ಬುಧವಾರದಂದು ಜನಿಸಿದ್ದರು ಮತ್ತು ಆ ದಿನ ಶಿವರಾತ್ರಿ ಆಗಿತ್ತು ಎಂದು ರಕ್ಷಿತಾ ಅವರು ಹೇಳಿದ್ದಾರೆ. ಸ್ನೇಹಿತರೆ ರಾಬರ್ಟ್ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Rakshita releve darshan secret

Join Nadunudi News WhatsApp Group