Mukesh Ambani: ಅಯೋಧ್ಯಾ ರಾಮನಿಗೆ ಮುಕೇಶ್ ಅಂಬಾನಿ ಕೊಟ್ಟ ಚಿನ್ನ ಎಷ್ಟು ಗೊತ್ತಾ…? ಸ್ಪಷ್ಟನೆ ನೀಡಿದ ಟ್ರಸ್ಟ್

ಅಯೋಧ್ಯಾ ರಾಮನಿಗೆ ಅಂಬಾನಿ ಚಿನ್ನದ ಉಡುಗೊರೆ ನೀಡಿದ್ದು ನಿಜಾನಾ...? ಸ್ಪಷ್ಟನೆ ನೀಡಿದ ಟ್ರಸ್ಟ್

Ram Mandir Donation: ಸದ್ಯ ದೇಶದಲ್ಲಿ ಹಲವು ದಿನಗಳಿಂದ ಶ್ರೀ ರಾಮನ ಹೆಸರು ಕೇಳಿ ಬರುತ್ತಿದೆ. ಜನವರಿ 22 ರಂದು  ಹಿಂದೂಗಳ ಹಲವು ವರ್ಷದ ಕನಸು ಈಡೇರಿದೆ. ದೇಶದ ಕೋಟ್ಯಾಂತರ ಭಕ್ತರು ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಹಲವು ಕಡೆಯಿಂದ ಉಡುಗೊರೆಗಳು ಬಂದಿದೆ.

ಸಾಕಷ್ಟು ಭಕ್ತರು, ಸಿನಿಮಾ ತಾರೆಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ ಉಡುಗೊರೆಯನ್ನು ನೀಡಿದ್ದಾರೆ. ಇನ್ನು ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ಹಾಗೂ Nita Ambani  ಅವರು ಶ್ರೀರಾಮನಿಗೆ ಕೋಟಿ ಬೆಲೆಯ ಉಡುಗೊರೆಯನ್ನು ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ. 

Ram Mandir Donation
Image Credit: Timesnowhindi

ಅಯೋಧ್ಯ ರಾಮನಿಗೆ 33 ಕೆಜಿ ಚಿನ್ನದ 3 ಕಿರೀಟ ನೀಡಿದ ಅಂಬಾನಿ..!
ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಅವರು ರಾಮನಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ರಾಮನಿಗಾಗಿ 33 ಕೆಜಿ ತೂಕದ ವಜ್ರಾಭರಣಗಳನು ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಕುಟುಂಬ ರಾಮನಿಗೆ ನೀಡಿರುವ ಉಡುಗೊರೆಯ ಬಗ್ಗೆ ಬಾರಿ ಚರ್ಚೆ ಉಂಟಾಗುತ್ತಿದೆ. ಅಂಬಾನಿ ಹಾಗೂ ನೀತಾ ಅಂಬಾನಿ ರಾಮನಿಗೆ 3 ಕಿರೀಟಗಳನ್ನು ನೀಡಿದಿದ್ದು, ಕಿರೀಟಗಳು 33 ಕೆಜಿ ಚಿನ್ನವನ್ನು ತೂಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಈ ವೈರಲ್ ಸುದ್ದಿಯ ಬಗೆ ರಾಮಜನ್ಮಭೂಮಿ ಟ್ರಸ್ಟ್ ನ ಬಳಿ ಮಾಹಿತಿ ಕೇಳಿದಾಗ ಈ ವಿಚಾರದ ಬಗೆ ಸ್ಪಷ್ಟನೆ ಲಭಿಸಿದೆ.

Mukesh Ambani attends Pran Pratishtha with family
Image Credit: News9live

ರಾಮನಿಗಾಗಿ ಅಂಬಾನಿ ಬಹುಕೋಟಿ ಕಿರೀಟ ನೀಡಿದ್ದು ನಿಜಾನಾ..?
ರಾಮಜನ್ಮಭೂಮಿ ತೀರ್ಥ ಸೇವಾ ಟ್ರಸ್ಟ್ ಅನ್ನು ಸಂಪರ್ಕಿಸಿ, ಅಂಬಾನಿ ಕುಟುಂಬವು ರಾಮನಿಗಾಗಿ 33 ಕೆಜಿ ಚಿನ್ನದ 3 ಕಿರೀಟ ನೀಡಿರುವ ಬಗ್ಗೆ ವಿಚಾರಿಸಲಾಗಿದೆ. ಮುಕೇಶ್ ಅಂಬಾನಿ , ನೀತಾ ಅಂಬಾನಿ ಸೇರಿದಂತೆ ಅವರ ಕುಟುಂಬದ ಯಾರು ಕೂಡ ಈ ಉಡುಗೊರೆಯನ್ನು ನೀಡಿಲ್ಲ. ಉಡುಗೊರೆ ನೀಡಿರುವವರ ಲಿಸ್ಟ್ ನಲ್ಲಿ ಇವರ ಹೆಸರು ಇಲ್ಲ ಎಂದು ರಾಮಜನ್ಮಭೂಮಿ ತೀರ್ಥ ಸೇವಾ ಟ್ರಸ್ಟ್ ಸ್ಪಷ್ಟಪಡಿಸಿದೆ.

Join Nadunudi News WhatsApp Group

Join Nadunudi News WhatsApp Group