35 ನೇ ವಯಸ್ಸಿಗೆ ಸಿಹಿಸುದ್ದಿ ನೀಡಿದ್ರಾ ರಮ್ಯಾ, ಈ ಹುಡುಗ ನಿಜಕ್ಕೂ ಯಾರು ಗೊತ್ತಾ ನೋಡಿ

ಚಂದನವನ ಕಂಡ ಪ್ರತಿಭಾವಂತ ನಾಯಕಿ ಮತ್ತು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಥಾಪಿಸಿಕೊಂಡು ಸಿನಿ ರಸಿಕರಿಗೆ ರಸದೌತಣ ನೀಡಿ ಮೋಹಕತಾರೆ ಯಾದವರು ನಟಿ ರಮ್ಯಾ. ಹೌದು ಪಾರ್ವತಮ್ಮ ರಾಜ್ ಕುಮಾರ್ ಅವರ ಬ್ಯಾನರ್ ನಡಿಯಲ್ಲಿ ಪುನೀತ್ ರಾಜ್ ಅವರ ನಾಯಕತ್ವದ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ರಮ್ಯಾ, ಕನ್ನಡದ ಬಹುತೇಕ ಸ್ಟಾರ್ ನಟರಿಂದ ಹಿಡಿದು ಯುವ ನಟರ ಜೊತೆ ಅಭಿನಯಿಸಿ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಪ್ರಶಸ್ತಿ ,ಫಿಲ್ಮ್ ಫೇರ್ ಪ್ರಶಸ್ತಿ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.  ಇನ್ನು ದಶಕಗಳ ಹಿಂದೆ ರಮ್ಯಾ ಕರುನಾಡ ಮನೆ ಮಗಳಾಗಿದ್ದಳು ಅಲ್ಲದೆ ಯುವ ಪೀಳಿಗೆಗಳ ಡ್ರೀಮ್ ಗರ್ಲ್ ಕೂಡ ಆಗಿದ್ದರು.

Kannada Actress Ramya Pics | 626180 | Galleries & HD Images

ಮೋಹಕ ತಾರೆ, ತಮ್ಮ ನಟನೆ ಮತ್ತು ಗ್ಲಾಮರ್ ಲುಕ್ ನಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸೆರೆ ಹಿಡಿದಿದ್ದು, ಇನ್ನು ರಾಜಕೀಯಕ್ಕೆ ಧುಮುಕಿದ ರಮ್ಯಾ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದನ್ನು ಕಮ್ಮಿ ಮಾಡಿದರು. ಸದ್ಯ ಮದುವೆ ವಿಚಾರವಾಗಿ ಅನೇಕಬಾರಿ ಸುದ್ದಿಯಲ್ಲಿರುವ ರಮ್ಯಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ಬೇರೆ ಏನು ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಒಂದು ಫೋಟೋ.

ಹೌದು ಇದಕ್ಕೆಲ್ಲಾ ಕಾರಣ ನಟಿ ರಮ್ಯಾ ಹಂಚಿಕೊಂಡಿರುವ ಫೋಟೋ ವೊಂದು. ರಮ್ಯಾ ಅವರು ಮೊನ್ನೆಯಷ್ಟೇ ವ್ಯಕ್ತಿಯೊಬ್ಬರ ಜೊತೆ ಬಹಳ ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡಿದ್ದು ಈ ಫೋಟೋ ಅವರ ಅಭಿಮಾನಿ ಪುಟಗಳಲ್ಲಿಯೂ ರಾರಾಜಿಸುತಿತ್ತು. ಕೊನೆಗೂ ಈ ಫೋಟೋ ನೋಡಿ ರಮ್ಯಾ ಮದುವೆಯಾಗುತ್ತಿದ್ದರೆ ಎನ್ನುವ ಪ್ರಶ್ನೆ ಎಲ್ಲರಲೂ ಮೂಡಿದೆ.ramya01

Join Nadunudi News WhatsApp Group

ಇದೀಗ ರಮ್ಯಾ ಅವರು ಒಬ್ಬ ಹುಡುಗನ ಜೊತೆಗೆ ಆತ್ಮೀಯವಾಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಮ್ಯಾ ಅವರ ಜೊತೆಗೆ ಅಷ್ಟು ಆತ್ಮೀಯರಾಗಿರುವ ಹುಡುಗ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಹುಡುಗ ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಸಿಕ್ಕಿದೆ.

ರಮ್ಯಾ ಅವರ ಜೊತೆಗೆ ಫೋಟೋದಲ್ಲಿರುವ ಹುಡುಗನ ಹೆಸರು ಕರಣ್ ಜೋಶಿ ಎಂದು ತಿಳಿದುಬಂದಿದ್ದು, ಈ ಹುಡುಗ ಯಾರು? ರಮ್ಯಾ ಅವರಿಗೆ ಈತ ಏನಾಗಬೇಕು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ರಮ್ಯಾ ಅವರು ಇನ್ನು ಮದುವೆಯಾಗಿಲ್ಲ, ಹಾಗಾಗಿ ಅವರು ಮದುವೆಯಾಗುವ ಹುಡುಗ ಕರಣ್ ಜೋಶಿ ಅವರೇ ಇರಬಹುದಾ ಎನ್ನುವ ಚರ್ಚೆ ಕೂಡ ಈಗ ಶುರುವಾಗಿದ್ದು, ಇದರ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರೇ ಉತ್ತರ ನೀಡಬೇಕಿದೆ.Kannada Actress Ramya Pics | 626186 | Galleries & HD Images

Join Nadunudi News WhatsApp Group