Deepika Padukone: ದೀಪಿಕಾ ಪಡುಕೋಣೆಗೆ ಡಿವೋರ್ಸ್ ಕೊಡುವ ಬಗ್ಗೆ ಅಂತಿಮ ನಿರ್ಧಾರ ತಿಳಿಸಿದ ನಟ ರಣವೀರ್ ಸಿಂಗ್

Deepika Padukone: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಇತ್ತೀಚಿಗೆ ದೀಪಿಕಾ ಪಡುಕೋಣೆ(Deepika Padukone)  ಅವರಿಗೆ ಡಿವೋರ್ಸ್ (Divorce) ನೀಡುವ ಬಗ್ಗೆ ಹಲವು ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು ಆದರೆ ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದೆ.

ಬಾಲಿವುಡ್ ನ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್ ಕಪಲ್ ಗಳಾಗಿದ್ದು ತೆರೆ ಮೇಲೆ ಮತ್ತು ತೆರೆಹಿಂದೆಯೂ ಕೂಡ ಸಕ್ಸಸ್ ಫುಲ್ ಜೋಡಿಯಾಗಿದ್ದಾರೆ. ಬೆಳ್ಳಿ ಪರದೆ ಮೇಲೆ ಇಬ್ಬರ ಕೆಮಿಸ್ಟ್ರಿ ನೋಡಿ ಇಷ್ಟ ಪಟ್ಟ ಅಭಿಮಾನಿಗಳಿಗೆ ನಿಜಜೀವನದಲ್ಲೂ ಕೂಡ ಈ ಜೋಡಿ ಹಾಟ್ ಫೇವರಿಟ್.

ರಣ್ವೀರ್ ಮತ್ತು ದೀಪಿಕಾ ಅವರ ಪ್ರೀತಿ ಮದುವೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ. ಇನ್ನು ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿದ ಸಿನಿಮಾ ಗೋಲಿಯೋನ್ ಕಿ ರಾಸ್ಲೀಲ ರಾಮ್ ಲೀಲಾ.

ಹೌದು ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದು ಮೊದಲ ನೋಟದಲ್ಲೇ ದೀಪಿಕಾಗೆ ರಣ್ವೀರ್ ಸಿಂಗ್ ಮೇಲೆ ಲವ್ ಆಗಿತ್ತು ಎಂದು ದೀಪಿಕಾ ರವರು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.

ಇನ್ನು ಸೂಪರ್ ಹಿಟ್ ಸಿನಿಮಾ ರಾಮ್-ಲೀಲಾ ಗೂ ಮೊದಲೇ ಝಿ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಭೇಟಿಯಾಗಿದ್ದು ಮೊದಲ ನೋಟದಲ್ಲಿ ರಣ್ವೀರ್ ಸಿಂಗ್ ದೀಪಿಕಾ ನೋಡಿ ಫ್ಲಾಟ್ ಆಗಿದ್ದರು.

Join Nadunudi News WhatsApp Group

ಮೊದಲ ಭೇಟಿ ಬಗ್ಗೆ ರಣ್ವೀರ್ ಸಿಂಗ್ ಈ ಹಿಂದೆ ಬಹಿರಂಗಪಡಿಸಿದ್ದು ನಾನು ಅವಳನ್ನು ಮೊದಲ ಬಾರಿಗೆ ನೋಡಿದಾಗ ಫ್ಲಾಟ್ ಆಗಿದ್ದೆ ಎಂದು ಹೇಳಿದ್ದರು. ಜೊತೆಗೆ ದೀಪಿಕಾ ಸಿಲ್ವರ್ ಬಣ್ಣದ ಗೌನ್ ಧರಿಸಿದ್ದ ಬಗ್ಗೆಯೂ ವಿವರಿಸಿದ್ದು ಮೊದಲು ಯಶ್ ರಾಜ್ ರವರ ಸ್ಟುಡಿಯೋದಲ್ಲಿ ಭೇಟಿಯಾದಾಗ ರಣ್ವೀರ್ ರವರು ದೀಪಿಕಾ ಜೊತೆ ಫ್ಲರ್ಟ್ ಮಾಡಿದ್ದರಂತೆ.

deepika and ranveer singh
Image Credit: Economic Times

ಹೌದು ತಮ್ಮೊಂದಿಗೆ ಫ್ಲರ್ಟ್ ಮಾಡಿದ ಬಗ್ಗೆ ದೀಪಿಕಾ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದು ನಾನು ಯಶ್ ರಾಜ್ ಸ್ಟುಡಿಯೋದಲ್ಲಿದ್ದೆ. ರಣ್ವೀರ್ ಸಹ ಅಲ್ಲೇ ಇದ್ದರು. ಫ್ಲರ್ಟ್ ಮಾಡುತ್ತಿದ್ದರು. ಆ ಸಂಧರ್ಭದಲ್ಲಿ ಮತ್ತೊಬ್ಬರ ಜೊತೆ ಡೇಟಿಂಗ್‌ನಲ್ಲಿದ್ದು ಆಗ ನಾನು ನಗುತ್ತಾ ನನ್ನ ಜೊತೆ ಫ್ಲರ್ಟ್ ಮಾಡುತ್ತಿದ್ದೀರಾ? ಎಂದು ಕೇಳಿದೆ ಎಂದಿದ್ದಾರೆ.

ಇನ್ನು ರಾಮ್-ಲೀಲಾ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿದ್ದು ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಸಿನಿಮಾ. ಹೌದು ತೆರೆಮೇಲಿನ ಕೆಮಿಸ್ಟ್ರಿ ನೋಡಿದವರು ಇಬ್ಬರೂ ರಿಯಲ್ ಲೈಫ್‌ನಲ್ಲೂ ಪ್ರೇಮಿಗಳು ಎಂದು ನಂಬುವ ಹಾಗೆ ಮಾಡಿದ್ದು ಈ ಸಿನಿಮಾ.

2013ರಲ್ಲಿ ರಾಮ್-ಲೀಲಾ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾ ಬಿಡುಗಡೆ ಬಳಿಕ ಇಬ್ಬರ ಪ್ರೀತಿ-ಪ್ರೇಮದ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಲು ಪ್ರಾರಂಭವಾಯಿತು
ಇನ್ನು ಇಬ್ಬರು ಕೂಡ ಸರಿ ಸುಮಾರು 5 ವರ್ಷಗಳ ಡೇಟಿಂಗ್ ಬಳಿಕ ರಣ್ವೀರ್ ಮತ್ತು ದೀಪಿಕಾ 2018ರಲ್ಲಿ ಹಸೆಮಣೆ ಏರಿದರು.

ಇಟಲಿಯಲ್ಲಿ ಇಬ್ಬರು ಮದುವೆಯಾಗಿದ್ದು ಅದ್ದೂರಿ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ನಂತರ ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ಏರ್ಪಡಿಸಿದ್ದರು. ಸದ್ಯ ಇದೀಗ ಇಬ್ಬರ ಸಂಬಂದ ಹಲಸಿದೆ ಎಂಬ ವಿಚಾರ ಎಲ್ಲಡೆ ಹರಿದಾಡುತ್ತಿದೆ.

ಸದ್ಯ ಇದೀಗ ತಮ್ಮಿಬ್ಬರ ನಡುವಿನ ಸಂಬಂಧದ ಕುರಿತಾದ ಎಲ್ಲ ವದಂತಿಗಳಿಗೂ ಕೂಡ ತೆರೆ ಎಳೆದಿರುವ ನಟ ರಣವೀರ್‌ ಸಿಂಗ್‌ ಪತ್ನಿ ದೀಪಿಕಾ ಪಡುಕೋಣೆಯವರು ನನ್ನ ರಾಣಿ ಎಂದಿದ್ದಾರೆ.

ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ನಡುವಿನ ಸಂಬಂಧ ಸರಿಯಿಲ್ಲವೆಂದು ಇತ್ತೀಚೆಗೆಷ್ಟೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು ಖಾಸಗಿ ಆಭರಣ ಬ್ರ್ಯಾಂಡ್‌ಗೆ ರಾಯಭಾರಿಯಾಗಿರುವ ದೀಪಿಕಾ ಅಭಿನಂದಿಸಿರುವ ರಣವೀರ್‌ ರವರು ನನ್ನ ರಾಣಿ! ನಾವು ಹೆಮ್ಮೆ ಪಡುವ ಕೆಲಸ ಮಾಡುತ್ತಿದ್ದಾಳೆ ಎಂದು ಟ್ವೀಟ್‌ ಮಾಡಿದ್ದಾರೆ.

ಹೌದು ಉಮರ್‌ ಸಂಧು ಎಂಬ ಸಿನಿಮಾ ವಿಮರ್ಶಕರೊಬ್ಬರು ದೀಪಿಕಾ-ರಣವೀರ್‌ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಟ್ವೀಟ್‌ ಮಾಡಿದ್ದಯ ಆದರೆ ಇದಕ್ಕೆ ಇಬ್ಬರೂ ಉತ್ತರಿಸಲು ಹೋಗಿರಲಿಲ್ಲ.

ಬದಲಿಗೆ ಅವರ ಅಭಿಮಾನಿಗಳು ಸಂಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ವೈರಲ್‌ ಆದ ಟ್ವೀಟ್‌ನ ಸುದ್ದಿ ಬರಿ ವದಂತಿ ಎಂಬಂತೆ ರಣವೀರ್‌ ಟ್ವೀಟ್‌ ಮಾಡಿದ್ದರು. ಸದ್ಯ ಇದೀಗ ದೀಪಿಕಾ ಬಗ್ಗೆ ಮತ್ತೆ ಪೋಸ್ಟ್‌ ಮಾಡುವ ಮೂಲಕ ರಣವೀರ್‌ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

 

Join Nadunudi News WhatsApp Group