ತನ್ನ ಹಾಗು ವಿಜಯ ದೇವರಿಕೊಂಡ ನಡುವೆ ಇರುವ ಸಂಬಂಧ ತಿಳಿಸಿದ ರಶ್ಮಿಕಾ, ಎಲ್ಲದಕ್ಕೂ ಅಂತ್ಯ.

ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧ ಆಗಾಗ್ಗೆ ಸುದ್ದಿಯಲ್ಲಿರುತ್ತೆ. ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ರಶ್ಮಿಕಾ ತೆಲುಗಿನಲ್ಲಿ ಮೊದಲ ಸಿನಿಮಾ ಪ್ರಾರಂಭಮಾಡಿದ್ದೆ ವಿಜಯ್ ದೇವರಕೊಂಡ ಜೊತೆ.

ಅಲ್ಲಿಂದನೂ ಇಬ್ಬರ ನಡುವಿನ ಬಾಂಧವ್ಯ ಚೆನ್ನಾಗಿದೆ. ಇತ್ತೀಚಿಗಷ್ಟೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡರನ್ನು ನಟಿ ಅನನ್ಯಾ ಪಾಂಡೆ ಪರೋಕ್ಷವಾಗಿ ರಶ್ಮಿಕಾ ಹೆಸರೇಳಿ ಕಾಲೆಳೆದಿದ್ದರು.ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2 ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ, ಈಗ ಅಂಥದ್ದು ಇವರಿಬ್ಬರ ನಡುವೆ ಇಲ್ವಂತೆ.

ವರದಿಗಳ ಪ್ರಕಾರ, 2017 ರಲ್ಲಿ ರಶ್ಮಿಕಾ ಅವರ ನಿಶ್ಚಿತಾರ್ಥದ ಬ್ರೇಕಪ್ ನಂತರ, ಇಬ್ಬರೂ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದರು, ಆದರೆ ಅವರ ಸಂಬಂಧವು ಎರಡು ವರ್ಷಗಳ ಹಿಂದೆಯೇ ಕೊನೆಗೊಂಡಿತು ಎಂಬ ಗಾಳಿ ಮಾತು ಹರಿದಾಡುತ್ತಿದ್ದು ಸತ್ಯ ಅಸತ್ಯತೆ ಇನ್ನು ತಿಳಿದು ಬಂದಿಲ್ಲ ಎನ್ನಬಹುದು. ವಿಜಯ್ ರಶ್ಮಿಕಾ ಅವರ ಮುಂಬರುವ ಚಿತ್ರ ‘ಸೀತಾ ರಾಮಂ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಲ್ಲಿ ವಿಜಯ್ ವೇದಿಕೆಯ ಮೇಲೆ, ‘ರಶ್ಮಿಕಾ, ನೀವು ಎಂದಿನಂತೆ ತುಂಬಾ ಸುಂದರವಾಗಿದ್ದೀರಿ. ಆದರೆ ನಾನು ನಿಮ್ಮ ಹೆಸರನ್ನು ತೆಗೆದುಕೊಂಡ ತಕ್ಷಣ, ಸುತ್ತಮುತ್ತಲಿನ ಜನರು ಏಕೆ ನಗಲು ಪ್ರಾರಂಭಿಸಿದರು ಎಂದು ನನಗೆ ತಿಳಿದಿಲ್ಲ’ ಎಂದು ನಟ ಹೇಳಿದ್ದರು. ವಿಜಯ್ ಹೋಗಳಿದಾಗ ರಶ್ಮಿಕಾ ಕೂಡ ನಾಚತೊಡಗಿದರು. ಈ ವಿಡಿಯೋ ವೈರಲ್ ಆದ ನಂತರ ಇಬ್ಬರ ಸಂಬಂಧ ಚರ್ಚೆಯಾಗುತ್ತಿದೆ. ಆದರೂ ಇದು ಸಿನೆಮಾ ಪ್ರಚಾರದ ಒಂದು ಟ್ರಿಕ್ ಎಂದು ಬಹುತೇಕರು ಭಾವಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದು ನಾವು ಕಲಾವಿದರು, ನಮ್ಮ ಮೇಲೆ ಎಲ್ಲರ ಗಮನ ಇರುತ್ತದೆ, ಎಲ್ಲರಿಗೂ ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ ಎಂದು ನನಗೆ ಗೊತ್ತು. ನನ್ನ ಕರಿಯರ್ ಶುರುವಾದಾಗಿನಿಂದ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಅವಳು ಇವನ ಜೊತೆಗಿದ್ದಾಳೆ, ಅವಳು ಅವನ ಜೊತೆ ಕಾಣಿಸಿಕೊಂಡಳು ಅಂತೆಲ್ಲ ಮಾತು ಬರುತ್ತದೆ.

Join Nadunudi News WhatsApp Group

ನಾವು ಪಬ್ಲಿಕ್ ಫಿಗರ್ಸ್, ನಮ್ಮ ಬಗ್ಗೆ ನೀವು ಮಾತನಾಡಬಹುದು, ನೆಗೆಟಿವ್ ಮಾತನಾಡಿ. ಕೆಲವರು ನಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡೋದಿಲ್ಲ, ಬೇರೆ ಎಲ್ಲವನ್ನು ಮಾತನಾಡುತ್ತಾರೆ. ನೀವು ನಮ್ಮ ಬಗ್ಗೆ ಮಾತನಾಡುತ್ತೀರಿ, ಮಾತನಾಡಿ, ಆದರೆ ನಾನು ಹೇಳುವ ತನಕ ಜಡ್ಜ್‌ಮೆಂಟ್‌ಗೆ ಬರಬೇಡಿ ಎಂದು ಖಡಕ್ ಆಗೆ ಉತ್ತರ ನೀಡಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ.

ಸದ್ಯ ವಿಜಯ್ ದೇವರಕೊಂಡ ವಿಜಯ್ ಈ ದಿನಗಳಲ್ಲಿ ತಮ್ಮ ಪ್ಯಾನ್-ಇಂಡಿಯಾ ಚಲನಚಿತ್ರ ‘ಲೈಗರ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಶ್ಮಿಕಾ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ಮಿಷನ್ ಮಜ್ನು ಡಬ್ಬಿಂಗ್ ನಲ್ಲಿ ನಿರತರಾಗಿದ್ದಾರೆ.ಅಮಿತಾಭ್ ಬಚ್ಚನ್ ಜೊತೆಗೆ ‘ಗುಡ್‌ಬೈ’ ಸಿನಿಮಾಗಳು ಕೂಡ ತೆರೆಗೆ ಬರಲು ಸಜ್ಜಾಗಿವೆ.

ರಣ್‌ಬೀರ್ ಕಪೂರ್ ಹೀರೋ ಆಗಿರುವ ‘ಅನಿಮಲ್’ ಸಿನಿಮಾವನ್ನು ಸಹ ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ 2’ಗೆ ಇನ್ನಷ್ಟೇ ಶೂಟಿಂಗ್ ಆರಂಭವಾಗಬೇಕಿದೆ. ‘ದಳಪತಿ’ ವಿಜಯ್ ನಟನೆಯ ‘ವಾರಿಸು’ ಸಿನಿಮಾಕ್ಕೂ ರಶ್ಮಿಕಾ ಆಯ್ಕೆಯಾಗಿದ್ದಾರೆ. ಕರಣ್ ಜೋಹರ್ ಜೊತೆಗೂ ಕೂಡ ರಶ್ಮಿಕಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group