ನ್ಯಾಷನಲ್ ಕ್ರಶ್ ರಶ್ಮಿಕಾಳನ್ನು ನಟ ರಣಬೀರ್ ಯಾವ ಹೆಸರಿಂದ ಕರೆಯುತ್ತಾರೆ ಗೊತ್ತಾ, ಅಬ್ಬಾ ನೋಡಿ ಒಮ್ಮೆ

ಕಿರಿಕ್ ಪಾರ್ಟಿ’ ಕನ್ನಡ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಇದೀಗ ಭಾರತೀಯ ಚಿತ್ರರಂಗದಲ್ಲಿ ಬ್ಯುಸಿಯೆಸ್ಟ್ ಹೀರೋಯಿನ್. ಸೌತ್‌ ನ ಅನೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಮೂಲಕ ಸೂಪರ್ ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟಿರೋ ರಶ್ಮಿಕಾ, ಶ್ರೀವಲ್ಲಿ ಅಂತಾನೇ ಫೇಮಸ್.

ಈಗಾಗಲೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು. ಸಾಲು ಸಾಲು ಸಿನೆಮಾಗಳು ರಿಲೀಸ್‌ಗಾಗಿ ಕಾಯ್ತಿದೆ. ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ರಶ್ಮಿಕಾ ಮಂದಣ್ಣನವರ ಹೊಸ ಸಿನೆಮಾ ಸೆಟ್ಟೇರಿದ್ದು, ಆ ಸಿನೆಮಾಗೆ ‘ಎನಿಮಲ್’ ಎಂದು ಹೆಸರಿಡಲಾಗಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಇವರ ಅಪ್‌ಕಮಿಂಗ್‌ ಸಿನೆಮಾ ಇದಾಗಿದ್ದು, ಈ ಸಿನೆಮಾ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ.Rashmika Mandanna Opens Up On Working With Ranbir Kapoor In Animal, “I Am  So Thrilled, That The Announcement Is Finally Out”

ಸಂದೀಪ್ ರೆಡ್ಡಿ ವಾಂಗಾ ಈ ಸಿನೆಮಾದ ನಿರ್ದೇಶಕರಾಗಿದ್ದು, ಇವರು ‘ಕಬೀರ್ ಸಿಂಗ್’ ನಂತಹ, ಬ್ಲಾಕ್ ಬ್ಲಾಸ್ಟರ್ ಸಿನೆಮಾ ಕೊಟ್ಟಿದ್ದಾರೆ. ಇಂಟ್ರಸ್ಟಿಂಗ್ ವಿಚಾರ ಏನಂದ್ರೆ, ಈ ಸಿನೆಮಾದಲ್ಲಿ ರಶ್ಮಿಕಾ ಮತ್ತು ರಣಬೀರ್ ಕಪೂರ್ ಜೋಡಿಯನ್ನ ತೆರೆಯ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.

ಕಾರ್ಯಕ್ರಮವೊಂದರ ಇಂಟರ್ವೂನಲ್ಲಿ ರಶ್ಮಿಕಾ, ರಣಬೀರ್ ಕಪೂರ್‌ ಜೊತೆ ಕೆಲಸ ಮಾಡಿರುವ ಅನುಭವವನ್ನ ಹಂಚಿಕೊಂಡಿದ್ದು ಹೀಗೆ. ‘ಅವರು ತುಂಬಾ ಒಳ್ಳೆಯವರು, ನಾನು ಮೊದಲ ಬಾರಿಗೆ ಅವರನ್ನ ಭೇಟಿಯಾಗುವಾಗ ತುಂಬಾ ಭಯ ಪಟ್ಟಿದ್ದೆ. ಆದರೆ ಅವರು ತುಂಬಾ ಸರಳ ಜೀವಿ, ಎಲ್ಲರ ಜೊತೆಯೂ ಸುಲಭವಾಗಿ ಬೆರೆತು ಬಿಡ್ತಾರೆ.Rashmika Mandanna reveals Ranbir Kapoor calls her 'madam' - Hindustan Times

ನಾನು ಕೂಡಾ ಅವರ ಜೊತೆ ಐದೇ ಐದು ನಿಮಿಷದಲ್ಲಿ ಕಂಫರ್ಟ್ ಆಗಿ ಬೆರೆತುಬಿಟ್ಟೆ. ರಣಬೀರ್ ಕಪೂರ್‌ ಮತ್ತು ಸಂದೀಪ್ ಅವರ ಜೊತೆ ಕೆಲಸ ಮಾಡೋದು ತುಂಬಾ ಸುಲಭ. ಈ ಸಿನೆಮಾ ಇಂಡಸ್ಟ್ರಿಯಲ್ಲಿ ರಣಬೀರ್ ಕಪೂರ್ ಅವರೊಬ್ಬರೇ ನನಗೆ ಮೇಡಂ ಅಂತ ಕರೆಯೋದು. ಆದರೆ ಅವರು ಹಾಗೆ ಕರೆಯೋದು ನನಗೆ ಬಿಲ್‌ಕುಲ್‌ ಇಷ್ಟ ಇಲ್ಲ ಎಂದಿದ್ದಾರೆ.

Join Nadunudi News WhatsApp Group

ಮನಾಲಿಯಲ್ಲಿ ‘ಎನಿಮಲ್’ ಸಿನೆಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಅಲ್ಲಿನ ಜನರು ಈ ಕ್ಯೂಟ್ ಜೋಡಿಯನ್ನ ನೋಡಿ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಹಿಂದಿ ಭಾಷೆ ಜೊತೆ ಜೊತೆಗೆ ತಮಿಳು ಹಾಗೂ ತೆಲಗುವಿನಲ್ಲೂ ಈ ಸಿನೆಮಾ ತಯಾರಾಗುತ್ತಿದೆ. ಈ ಸಿನೆಮಾ 2023ರ ಅಗಸ್ಟ್ 11ರಲ್ಲಿ ರಿಲೀಸ್ ಆಗೋ ಪ್ಲಾನ್‌ನಲ್ಲಿದೆ.Rashmika Mandanna joins Ranbir Kapoor's Animal after Parineeti Chopra's  exit - Movies News

ಅದಕ್ಕಿಂತ ಮುಂಚೆ ರಶ್ಮಿಕಾ ಮತ್ತು ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ನಟನೆಯ ‘ಮಿಶನ್ ಮಜ್ನು’ ಸಿನೆಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರ ನಂತರ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಹಿರಿಯ ನಟಿ ನೀನಾ ಗುಪ್ತಾರ ಜೊತೆ ‘ಅಲ್ವಿದಾ’ ಸಿನೆಮಾದಲ್ಲೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

Join Nadunudi News WhatsApp Group