ಇದೇ ಮೊದಲಬಾರಿ ರಶ್ಮಿಕಾ ಮಾಡಿದ ಆ ಕೆಲಸ ನೋಡಿ ಖುಷಿಯಾದ ಅಭಿಮಾನಿಗಳು, ನೋಡಿ ಏನು

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿಯಾಗಿ, ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಕಾಣಿಸಿಕೊಂಡರೂ ಕೂಡ, ಎಲ್ಲರಿಗೂ ಇಷ್ಟವಾಗಿ ಬಿಟ್ಟಿದ್ದರು.ನಟಿ ರಶ್ಮಿಕಾ ಅವರು ಎಷ್ಟು ಬೇಗ ಫೇಮಸ್ ಆದರೂ ಎಂದರೆ, ಕೊಡಗಿನ ಬೆಡಗಿಗೆ ಅವಕಾಶಗಳಿಗೇನು ಕೊರತೆಯಿಲ್ಲ. ಇನ್ನು,ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ಈ ಕೊಡಗಿನ ಬೆಡಗಿಗೆ ಇಂದು ಕನ್ನಡ ಮಾತ್ರವಲ್ಲದೇ ಬಾಲಿವುಡ್ ಸಿನಿಮಾರಂಗದಲ್ಲೂ ಮಿಂಚುತ್ತಿದ್ದಾರೆ. ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ.

ಹೌದು ರಲ್ಲಿ 2016ರಲ್ಲಿ ತೆರೆ ಕಂಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಾನ್ವಿ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿದವರಿಗೆ ಅದೃಷ್ಟ ಇಷ್ಟರ ಮಟ್ಟಿಗೆ ಖುಲಾಯಿಸುತ್ತದೆ ಎಂದು ಯಾರು ಊಹಿಸಿರಲಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಶ್ಮಿಕಾ ಮಂದಣ್ಣ ಜರ್ನಿ ಇಂದು ಬಾಲಿವುಡ್ ಅಂಗಳದವರೆಗೂ ಬಂದು ನಿಂತಿದೆ.ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಾಲ್ಕು ಐದು ವರ್ಷ ಆದರೂ, ಇವರ ಅದೃಷ್ಟದ ಬಾಗಿಲು ತೆರೆದಿದೆ.I am a big BTS fan: Rashmika Mandanna | Entertainment News,The Indian  Express

ಐದು ವರ್ಷದ ಸಿನಿ ಬದುಕಿನಲ್ಲಿ 12 ಸಿನಿಮಾಗಳನ್ನು ಮಾಡಿ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಇವರು ನಟಿಸಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಬಹುದೊಡ್ಡ ಮಟ್ಟಿಗೆ ಸದ್ದು ಮಾಡಿತು. ಇನ್ನು ಸ್ಟಾರ್ ನಟರಾದ ಕನ್ನಡದಲ್ಲಿ ದರ್ಶನ್, ಪುನೀತ್ ರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ತೆಲುಗಿನಲ್ಲಿ ಮಹೇಶ್ ಬಾಬು, ನಾನಿ, ವಿಜಯ್ ದೇವರಕೊಂಡ, ನಿತೀನ್ ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ ತೆರೆ ಹಂಚಿಕೊಂಡರು.

ಸೆಲೆಬ್ರಿಟಿಗಳು ಕಂಡಾಗ ಅಭಿಮಾನಿಗಳು ಮುಗಿ ಬಿದ್ದು ಸೆಲ್ಪಿ ತೆಗೆದುಕೊಳ್ಳೋದು ಕಾಮನ್. ಕೆಲವೊಂದಷ್ಟು ಮಂದಿ ಅಭಿಮಾನಿಗಳ ಜೊತೆ ಫೋಟೋಗೆ ಫೋಸ್ ಕೊಟ್ರೆ ಮತ್ತೊಂದಷ್ಟು ಮಂದಿ ಗರಂ ಆಗಿ ಬಿಡ್ತಾರೆ.ಇವುಗಳನ್ನ ಸಂಭಾಳಿಸೋದಕ್ಕೆ ಬಾಡಿಗಾರ್ಡ್ ಗಳು ಇರ್ತಾರೆ. ಆದ್ರೆ ಇದೀಗ ರಶ್ಮಿಕಾ ಬಾಡಿಗಾರ್ಡ್ ಮೇಲೆಯೇ ಮುನಿಸಿಕೊಂಡಿದ್ದು ರಶ್ಮಿಕಾ ಕೆಲಸ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.Pin on girlfriend goal

ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪಾಪರಾಜಿಗಳು ರಶ್ಮಿಕಾ ಅವರ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಭಿಮಾನಿಗಳು ರಶ್ಮಿಕಾರ ವಿಡಿಯೋ ಶೂಟ್ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಭಿಮಾನಿಗಳು ರಶ್ಮಿಕಾ ಜೊತೆ ಫೋಟೋ ತೆಗೆದುಕೊಳ್ಳಲು ಮುಂದಾದರು. ರಶ್ಮಿಕಾ ಬಳಿ ಬಂದ ಅಭಿಮಾನಿಯೋರ್ವನನ್ನು ಬಾಡಿಗಾರ್ಡ್ ದೂರ ತಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ಅಸಮಾಧಾನಗೊಂಡ ರಶ್ಮಿಕಾ ಆ ರೀತಿ ಮಾಡಬೇಡಿ ಎಂದು ಹೇಳಿ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಂಡರು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Join Nadunudi News WhatsApp Group

Join Nadunudi News WhatsApp Group