ಚಾರ್ಲಿ ಸಿನೆಮಾ ಹಿಟ್ ಆಗಿದ್ದೆ ತಡ, ರಶ್ಮಿಕಾ ಮಂದಣ್ಣ ಮಾಡಿದ್ದೆ ಬೇರೆ ನೋಡಿ ಒಮ್ಮೆ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕರ್ನಾಟಕದ ಕ್ರಶ್ ಆದವರು ಕೊಡಗಿನ ಬೆಡಗಿ ಎಂದರೆ ರಶ್ಮಿಕಾ ಮಂದಣ್ಣರವರು. ಕೇವಲ ಇದೊಂದು ಸಿನಿಮಾದ ಮೂಲಕ ಕರ್ನಾಟಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಈ ಚೋರಿ ತದನಂತರ ಸಾಲು ಸಾಲು ಕನ್ನಡದ ಟಾಪ್ ನಟರ ಜೊತೆ ಅಭಿನಯಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಹೌದು ಅಲ್ಪ ಅವಧಿಯಲ್ಲಿಯೇ ತಮ್ಮ ಹೆಸರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದ ಈ ಕೊಡಗಿನ ಬೆಡಗಿಗೆ ಇಡೀ ಕರುನಾಡ ಸಿನಿ ಪ್ರೇಕ್ಷಕರು ಮಾರು ಹೋಗಿದ್ದು ತದನಂತರ ಕಿರಿಕ್ ಪಾರ್ಟಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಅವರನ್ನು ವಿವಾಹವಾಗುತ್ತೇನೆ ಎಂದು ಹೇಳಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು.

ಹೌದು ಈ ಸುದ್ಧಿ ಕೇಳಿ ಅವರ ಅಭಿಮಾನಿಗಳು ಬಹಳಾನೇ ಖುಷಿ ಪಟ್ಟಿದ್ದು ರೀಲ್ ಲೈಫ್ ನಲ್ಲಿ ಒಂದಾಗದಿದ್ದರೂ ಕೂಡ ರಿಯಲ್ ಲೈಫ್ ನಲ್ಲಿ ಒಂದಾಗುತ್ತಿದ್ದಾರಲ್ಲಾ ಎಂದು ಹೇಳುವ ಮೂಲಕ ಶುಭ ಹಾರೈಸಿದ್ದರು ಕನ್ನಡದಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಗುರಿಯಾಗುವ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ನ್ಯಾಷಿನಲ್ ಕ್ರಶ್ ಆದ ಮೇಲಂತೂ ಸುದ್ದಿ ಮೇಲೆ ಸುದ್ದಿ ಆಗುತ್ತಿದ್ದಾರೆ. ಇದೀಗ ಅವರು ನಾಯಿಯನ್ನು ಮುದ್ದಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಆ ಫೋಟೋಗೂ ಮತ್ತು ಅವರ ಮಾಜಿಪ್ರೇಮಿ ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಚಿತ್ರಕ್ಕೂ ಹೋಲಿಕೆ ಮಾಡಲಾಗುತ್ತಿದೆ.Rashmika's Former Boyfriend Replied To Her Tweet !! - Chennai Memes

ಚಾರ್ಲಿ 777 ನಾಯಿ ಮತ್ತು ಮನುಷ್ಯನ ಪ್ರೇಮವನ್ನು ಪ್ರಮುಖವಾಗಿಟ್ಟುಕೊಂಡು ಮಾಡಿರುವ ಸಿನಿಮಾ. ಈ ಚಿತ್ರವನ್ನು ನೋಡಿ ಬಂದವರು, ತಮ್ಮ ಮನೆಯ ನಾಯಿಯನ್ನು ಮತ್ತಷ್ಟು ಪ್ರೀತಿಸುವ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸ್ವತಃ ಚಿತ್ರತಂಡವೇ ತನ್ನ ಸಾಮಾಜಿಕ ಜಾಲತಾಣಗಳ ಪೇಜ್ ನಲ್ಲಿ ಹಾಕಿಕೊಳ್ಳುತ್ತಿದೆ. ನಾಯಿಯನ್ನು ಸಾಕದೇ ಇರುವವರು, ಹೊಸ ನಾಯಿಯೊಂದಿಗೆ ಮನೆಗೆ ಮರಳುತ್ತಿದ್ದಾರೆ ಎನ್ನುವಲ್ಲಿಗೆ ಸುದ್ದಿಯಾಗಿದೆ. ಹಾಗಾಗಿ ರಶ್ಮಿಕಾ ಮತ್ತು ನಾಯಿಯ ಫೋಟೋ ಮಹತ್ವ ಪಡೆದುಕೊಂಡಿದೆ.

ತಮ್ಮ ಮನೆಯ ನಾಯಿಯೊಂದಿಗೆ ರಶ್ಮಿಕಾ ಇರುವ ಕ್ಯೂಟ್ ಫೋಟೋವನ್ನು ಪೋಸ್ಟ್ ಮಾಡಿರುವ ಹಲವರು, ಕದ್ದುಮುಚ್ಚಿ ಚಾರ್ಲಿ ಸಿನಿಮಾ ನೋಡಿಬಿಟ್ಟರಾ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಿನಿಮಾವನ್ನು ನೋಡಿರುವ ಕಾರಣಕ್ಕಾಗಿಯೇ ತಮ್ಮ ನಾಯಿಯನ್ನು ಇಷ್ಟೊಂದು ಮುದ್ದಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ಸಿನಿಮಾಗೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ರಶ್ಮಿಕಾ ಅವರನ್ನು ಪ್ರಾಣಿಯೊಂದಿಗೆ ಹೋಲಿಸಿ ಗೇಲಿ ಮಾಡಿದ್ದರು. ಆದರೆ, ಈ ಬಾರಿ ಮತ್ತೊಂದು ರೀತಿಯಲ್ಲಿ ಗೇಲಿ ಮಾಡಲಾಗಿದೆ.Adorable PHOTOS of Rashmika Mandanna with her pet dog Aura are too cute to  miss out

Join Nadunudi News WhatsApp Group

Join Nadunudi News WhatsApp Group