ಅಮ್ಮ ಅಂತ ಹೇಳಿಕೊಟ್ಟರೆ ಅಪ್ಪ ಎನ್ನುತ್ತಿರುವ ರಾಯನ್ ಸರ್ಜಾ, ನೋಡಿ ಮುದ್ದಾದ ವಿಡಿಯೋ ಹೇಗಿತ್ತು

ಸದ್ಯ ನಮ್ಮ ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ನಟಿ ಹಾಗೂ ಮುದ್ದು ಚೆಲುವೆ ಮೇಘನಾ ರಾಜ್ ಕಳೆದ ಎರಡು ವರ್ಷಗಳಿಂದ ತಮ್ಮ ರವರು ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದರು. ಹೌದು ಜೀವನದ ಉದ್ದಕ್ಕೂ ಜೊತೆಯಾಗಿ ಇರಬೇಕಿದ್ದ ಸಂಗಾತಿ ಚಿರು ಸರ್ಜಾರನ್ನು ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಿದರು. ಆದರೆ ಜೀವನ ಮುಂದೆ ಸಾಗಲೇ ಬೇಕಾಗಿದ್ದು ಮಗುವಿಗೆ ಜನ್ಮ ನೀಡಿದ ನಂತರದ ಬದುಕು ಮುಂಚಿನ ಜೀವನದಂತೆ ಇರುವುದಿಲ್ಲ.

ನಮ್ಮನ್ನು ನಾವು ಸಾಕಷ್ಟು ಬದಲಿಸಿಕೊಳ್ಳಬೇಕಾಗುತ್ತದೆ. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಮಗುವಿಗಾಗಿ ಮುನ್ನಡೆಯಲೇ ಬೇಕಿದ್ದು ಇನ್ನು ಮೇಘನಾ ರಾಜ್ ಅವರು ಮಾಡಿದ್ದೂ ಸಹ ಅದೇ. ಮನಸ್ಸಿನಲ್ಲಿ ಸಾಕಷ್ಟು ನೋವಿದ್ದರೂ ಕೂಡ ತಮ್ಮ ಮಗುವಿನ ಮುಂದಿನ ಭವಿಷ್ಯ ರೂಪಿಸಲೇ ಬೇಕಾದ ಕರ್ತವ್ಯ ಅನಿವಾರ್ಯತೆ ಜವಾಬ್ದಾರಿ ಎಲ್ಲವೂ ಕೂಡ ಮೇಘನಾ ರಾಜ್ ಅವರದ್ದೇ ಆಗಿದ್ದು ಕಳೆದ ವರ್ಷ ರಾಯನ್ ನ ಹುಟ್ಟುಹಬ್ಬದ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ ನಂತರ ಯಮ್ಮ ಮುಂದಿನ ವೃತ್ತಿ ಜೀವನದ ಬಗ್ಗೆ ಗಮನ ಕೊಟ್ಟಿದ್ದರು.

Meghana Raj is determined to continue acting. Chiranjeevi Sarja is one of the reasons - Movies News
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಮಗ ರಾಯನ್ ಆರೈಕೆಯ ಜೊತೆ ಸಿನಿಮಾ ರಂಗಕ್ಕೆ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಗನ ಹೊಸ ವಿಡಿಯೋವೊಂದು ಶೇರ್ ಮಾಡಿದ್ದಾರೆ. ಪತಿಯ ನಿಧನ ನೋವು ನಂತರ ಮಗನ ಆಗಮನ ಇದನ್ನೆಲ್ಲಾ ಮೆಟ್ಟಿ ನಿಂತು ಇದೀಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ.ಸಿನಿಮಾ ಮತ್ತು ತಾಯಿಯ ಜವಾಬ್ದಾರಿಯನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಇನ್ನು ಆಗಾಗ ಮಗನ ಫೋಟೋ ಮತ್ತು ವಿಡಿಯೋ ಶೇರ್ ಮಾಡುವ ನಟಿ ಮೇಘನಾ ಮತ್ತೆ ರಾಯನ್ ಹೊಸ ವಿಡಿಯೋವೊಂದು ಶೇರ್ ಮಾಡಿದ್ದಾರೆ.

ಅಮ್ಮ ಎಂದು ಕರೆಯುವುದನ್ನು ಮೇಘನಾ ಹೇಳಿಕೊಟ್ಟಿದ್ದಾರೆ. ಒಂದೆರೆಡು ಬಾರಿ ಅಮ್ಮ ಅಂತಾ ಕರೆದು ಮತ್ತೆ ಅಪ್ಪ ಎಂದು ರಾಯನ್ ಕರೆದಿದ್ದಾನೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಪತಿಯ ಅಗಲಿಕೆಯ ನಂತರ ರಾಯನ್ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಯನ್‌ನ ನೋಡಿ ಚಿರು ಅಗಲಿಕೆಯ ನೋವು ಮರೆಯುತ್ತಿದ್ದಾರೆ. ಒಟ್ನಲ್ಲಿ ರಾಯನ್ ಅಪ್ಪ ಎಂದಿರೋ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

View this post on Instagram

 

A post shared by Meghana Raj Sarja (@megsraj)

Join Nadunudi News WhatsApp Group

Join Nadunudi News WhatsApp Group