Fact Check: ವಿಲೀನವಾಗಲಿದೆ ದೇಶದ ಮೂರೂ ಪ್ರತಿಷ್ಠಿತ ಬ್ಯಾಂಕುಗಳು, ಸ್ಪಷ್ಟನೆ ನೀಡಿದ RBI.

ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಹಣಕಾಸು ಸಚಿವಾಲಯ.

Bank Merge Fact Check: ಇತ್ತೀಚಿಗೆ ದೇಶದಲ್ಲಿ ಸಾಕಷ್ಟು ಬ್ಯಾಂಕ್ ಗಳು ವಿಲೀನಗೊಂಡಿವೆ. ಬ್ಯಾಂಕ್ ಗಳ ವಿಲೀನ ಪ್ರಕಿಯೆಯ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಹೊರಬೀಳುತ್ತಲೇಇವೆ. ಇನ್ನು ಬ್ಯಾಂಕ್ ವಿಲೀನದ (Bank Merge) ಜೊತೆಗೆ ಆರ್ ಬಿಐ ಕೆಲವು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ಕೂಡ ರದ್ದುಮಾಡಿದೆ.

ಇನ್ನು ಇತ್ತೀಚೆಗಷ್ಟೇ ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಹೆಚ್ ಡಿಎಫ್ ಸಿ ಬ್ಯಾಂಕ್ ಹಾಗು ಹೆಚ್ ಡಿಎಫ್ಸಿ ಲಿಮಿಟೆಡ್ ವಿಲೀನಗೊಂಡಿದೆ. ಈ ವಿಲೀನ ಪ್ರಕ್ರಿಯೆಯು ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಇನ್ನು ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಬ್ಯಾಂಕ್ ಮಾಹಿತಿ ತಿಳಿಸಿತ್ತು. ಇದೀಗ ಮತ್ತೆ ದೇಶದ ಮೂರು ಬ್ಯಾಂಕ್ ವಿಲೀನಗೊಳ್ಳುವ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ.

Central clarification on bank merger
Image Credit: Livemint

ವಿಲೀನವಾಗಲಿದೆ ದೇಶದ ಮೂರೂ ಪ್ರತಿಷ್ಠಿತ ಬ್ಯಾಂಕುಗಳು
ಇತ್ತೀಚೆಗೆ ಹೆಚ್ಚಾಗಿ ಬ್ಯಾಂಕ್ ಗಳ ಖಾಸಗೀಕರಣ ಹಾಗೂ ವಿಲೀನದ ಬಗ್ಗೆ ಸಾಕಷ್ಟಿ ರೀತಿಯ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ದೇಶದಲ್ಲಿ ಮತ್ತೆ ಮೂರು ಬ್ಯಾಂಕ್ ಗಳು ವಿಲೀನಗೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿ ಹರಿದಾಡುತ್ತಿದೆ. ಬ್ಯಾಂಕ್ ವಿಲೀನದ ಬಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕೇಂದ್ರ ಹಣಕಾಸು ಸಚಿವಾಲಯ ವಿಲೀನ ಪ್ರಕ್ರಿಯೆಯ ಬಗ್ಗೆ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

ದೇಶದ ಯಾವ ಯಾವ ಬ್ಯಾಂಕ್ ಗಳು ವಿಲೀನಗೊಳ್ಳಲಿದೆ
ಸರ್ಕಾರವು ಯುಪಿಯ 3 ಬ್ಯಾಂಕ್ ಗಳನ್ನೂ ವಿಲೀನಗೊಳಿಸಲಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದೆ. ಉತ್ತರ ಪ್ರದೇಶದ ಬರೋಡ ಬ್ಯಾಂಕ್, ಆರ್ಯಾವರ್ಟ್ ಬ್ಯಾಂಕ್ ಮತ್ತು ಪ್ರಥಮ ಉತ್ತರ ಪ್ರದೇಶದ ಗ್ರಾಮೀಣ ಬ್ಯಾಂಕ್ ವಿಲೀನಗೊಳ್ಳುವ ಬಗ್ಗೆ ಸುದ್ದಿ ಹರಿದಾಡಿತ್ತು.

Join Nadunudi News WhatsApp Group

ಬ್ಯಾಂಕ್ ವಿಲೀನದ ಬಗ್ಗೆ ಕೇಂದ್ರದ ಸ್ಪಷ್ಟನೆ
ಈ ವೈರಲ್ ಸುದ್ದಿಯ ಬಗ್ಗೆ ಹಣಕಾಸು ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯ ಬಗ್ಗೆ ಪ್ರಸ್ತುತ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿಕೊಂಡಿದೆ. ಈ ಮೂಲಕ ಮೂರು ಬ್ಯಾಂಕ್ ಗಳು ವಿಲೀನಗೊಳ್ಳುವ ಸುದ್ದಿ ಸುಳ್ಳು ಎಂದು ಹಣಕಾಸು ಸಚಿವಾಲ ಸ್ಪಷ್ಟಪಡಿಸಿದೆ.

Join Nadunudi News WhatsApp Group