Kantara: ಕಾಂತಾರ ಹಿಟ್ ಬಳಿಕ ಹೊಸ ವಿಮಾನ ಖರೀದಿ ಮಾಡಿದ್ರಾ ರಿಷಬ್ ಶೆಟ್ಟಿ, ಇಲ್ಲಿದೆ ಸಿಹಿಸುದ್ದಿ.

Kantara: ಸದ್ಯ ಕನ್ನಡ ನೆಲದ ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡುತ್ತಿರುವ ಸಿನಿಮಾವಾಗಿದ್ದು ಕನ್ನಡದಲ್ಲಿ ಅಂದಾಜು ನೂರೈವತ್ತು ಕೋಟಿಗೂ ಅಧಿಕ ಹಣ ಮಾಡಿದ್ದರೆ ಇತರ ಭಾಷೆಗಳಲ್ಲೂ ಕೂಡ ನೂರಾರು ಕೋಟಿ ಬಾಚುತ್ತಿದೆ. ಪ್ರತಿ ಭಾಷೆಯಲ್ಲೂ ಕನ್ನಡದ ಸಿನಿಮಾವನ್ನು ಕೊಂಡಾಡುತ್ತಿದ್ದು ಬಾಕ್ಸ್ ಆಫೀಸ್(Box Office) ಸಹ ಧೂಳಿಪಟವಾಗಿದೆ.

ಇನ್ನು ಈ ಹೊತ್ತಿನಲ್ಲಿ ರಿಷಬ್ ಶೆಟ್ಟಿ(Rishab Shetty) ವಿಮಾನದಲ್ಲಿ(Plane) ಓಡಾಡುತ್ತಿರುವ ಫೋಟೋವನ್ನು ಹೊಂಬಾಳೆ ಫಿಲ್ಮ್ಸ್(Hombale Flims) ಹಂಚಿಕೊಂಡಿದೆ. ಇನ್ನು ಈ ಫೋಟೋವನ್ನು ಹಂಚಿಕೊಂಡ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಲವರು ರಿಷಬ್ ಶೆಟ್ಟಿ ರವರು ಸ್ವಂತ ಬಳಕೆಗಾಗಿ ವಿಮಾನ ಖರೀದಿಸಿರಬಹುದು ಎಂದು ಹೇಳಿದ್ದು ಅಲ್ಲದೆ ಇತ್ತೀಚೆಗಷ್ಟೇ ಐಷಾರಾಮಿ ಆಡಿ ಕಾರನ್ನು(Car) ರಿಷಬ್ ಶೆಟ್ಟಿಯವರು ಖರೀದಿಸಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದರು.

ಆದರೆ ಬಲ್ಲ ಮೂಲಗಳ ಪ್ರಕಾರವಾಗಿ ಕಾಂತಾರ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಭಾರತದಾತ್ಯಂತ ಸುತ್ತುವಂತಾಗಿದ್ದು ಈ ಕಾರಣದಿಂದಾಗಿ ಹೊಂಬಾಳೆ ಫಿಲಂಸ್ ಬಾಡಿಗೆ ಖಾಸಗಿ ವಿಮಾನವನ್ನು ರಿಷಬ್ ಶೆಟ್ಟಿಯವರ ಪ್ರಯಾಣಕ್ಕಾಗಿ ಬುಕ್ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ.

Rishabh Shetty bought a new plane after Kantara hit, here is the sweet news.
Image Source: India Today

ಹೌದು ಇತ್ತೀಚೆಗಷ್ಟೇ ರಿಷಬ್ ಐಶಾರಾಮಿ ಆಡಿ ಕಾರು ತಗೆದುಕೊಂಡಿದ್ದು ಆ ಫೋಟೋ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ರಿಷಬ್ ಅವರು ವಿಮಾನದಲ್ಲಿ ಅದರಲ್ಲೂ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಬಡವ್ರ ಮಕ್ಕಳು ಬೆಳಿಬೇಕು ಹೆಸರಿನಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ.

ಸಾಕಷ್ಟು ಜನರು ಈ ಫೋಟೋವನ್ನು ಹಂಚಿಕೊಂಡಿದ್ದುಬಡವರ ಮಕ್ಕಳು ಬೆಳಿಬೇಕು ಎನ್ನುವ ಮಾತು ನಟ ಡಾಲಿ ಧನಂಜಯ್ ಅವರದ್ದು. ಹೌದು ಆ ಮಾತನ್ನು ರಿಷಬ್ ಶೆಟ್ಟಿಗೆ ಬಳಸಿಕೊಂಡು ಡಾಲಿಗೆ ಟಾಂಗ್ ಕೊಡಲಾಗುತ್ತಿದ್ದು ವಿಮಾನದಲ್ಲಿ ಪ್ರಯಾಣದ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋಗೆ ಡಾಲಿ ಹೊಡೆದ ಡೈಲಾಗ್ ಅನ್ನು ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ.

Join Nadunudi News WhatsApp Group

ಇನ್ನು ಕಾಂತಾರ ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ಹೌದು ರಿಷಬ್ ಶೆಟ್ಟಿ ಭಾರತದಾದ್ಯಂತ ಸುತ್ತುವಂತಾಗಿದ್ದು ಎಲ್ಲ ಕಡೆ ಪ್ರಯಾಣ ಮಾಡಲು ಅವರಲ್ಲಿ ವೇಳೆಯಿಲ್ಲ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನವರು ಬಾಡಿಗೆ ಖಾಸಗಿ ವಿಮಾನ ಬುಕ್ ಮಾಡಿದ್ದು ರಿಷಬ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎನ್ನಲಾಗುತ್ತಿದೆ.

Rishabh Shetty bought a new plane after Kantara hit, here is the sweet news.
Image Source: The Economic Times

ಈ ಹಿಂದೆ ಯಶ್ ಅವರಿಗೂ ಕೂಡ ಹಾಗೆಯೇ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಹಾಗಾಗಿ ಇದು ರಿಷಬ್ ಖರೀದಿಸಿದ ವಿಮಾನವಲ್ಲ ಎನ್ನುವುದು ಸ್ಪಷ್ಟನೆ ವಿಚಾರವಾಗಿದೆ.ಇನ್ನುಯಾವ ಸೂಪರ್‌ಸ್ಟಾರ್ ಸಿನಿಮಾ ಥಿಯೇಟರ್‌ಗೆ ಬಂದರೂ ಅಷ್ಟೇ ಕಾಂತಾರ ಆರ್ಭಟ ತಡೆಯೋದಕ್ಕೆ ಆಗುತ್ತಿಲ್ಲ.ಹೌದು ದಿನದಿಂದ ದಿನಕ್ಕೆ ಸಿನಿಮಾ ಬೇಜಾನ್‌ ಸದ್ದು ಮಾಡುತ್ತಲೇ ಇದ್ದು ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.

ಕಾಂತಾರ ಹಂತ ಹಂತವಾಗಿ ಬಾಕ್ಸಾಫೀಸ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದು ಅಕ್ಷಯ್ ಕುಮಾರ್ ರಾಮ್‌ ಸೇತು ಹಾಗೂ ಅಜಯ್ ದೇವಗನ್ ಥ್ಯಾಂಕ್ ಗಾಢ್ ಸಿನಿಮಾಗಳು ಗ್ರ್ಯಾಂಡ್ ರಿಲೀಸ್ ಆಗಿದ್ದರೂ ಕಾಂತಾರಗೆ ಏನೂ ಎಫೆಕ್ಟ್ ಆಗಿಲ್ಲ.ಕಾಂತಾರ ಸಿನಿಮಾ ಈಗಾಗಲೇ ಬಾಕ್ಸಾಫೀಸ್‌ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿದ್ದು ಈಗಾಗಲೇ ಈ ಸಿನಿಮಾ 200 ಕೋಟಿ ಕ್ಲಬ್ ಸೇರಿದ್ದು ಶೀಘ್ರದಲ್ಲಿಯೇ 300 ಕೋಟಿ ಕ್ಲಬ್‌ಗೂ ಎಂಟ್ರಿ ಕೊಡಲಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರವಾಗಿದೆ.

ಒಂದು ವೇಳೆ ಈ ದಾಖಲೆನೂ ಮಾಡಿದರೆ ಹೊಸ ದಾಖಲೆ ಬರೆಯೋದು ಗ್ಯಾರಂಟಿ.ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಕರ್ನಾಟಕದಲ್ಲಿ ರಿಲೀಸ್ ಆಗಿ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದ್ದು 50 ದಿನಗಳತ್ತ ಮುನ್ನುಗ್ಗುತ್ತಿರುವ ಕಾಂತಾರ ಗುಂಗು ಮಾತ್ರ ಕಮ್ಮಿಯಾಗಿಲ್ಲ.

Rishabh Shetty bought a new plane after Kantara hit, here is the sweet news.
Image Source: India Today

ಇನ್ನು ಕಾಂತಾರ ಹಿಂದಿ ಹಾಗೂ ತೆಲುಗಿನಲ್ಲಿ ಕ್ರೇಜ್ ಹೆಚ್ಚಾಗಿದ್ದು ಇನ್ನು ವೀಕೆಂಡ್‌ನಲ್ಲಿ ಮಲಯಾಳಂ ವರ್ಷನ್‌ ಕೂಡ ಸದ್ದು ಮಾಡುತ್ತಿದೆ. ಅತ್ತ ಓವರ್‌ಸೀಸ್‌ನಲ್ಲೂ ಕಾಂತಾರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ದಾಖಲೆ ಬರೆಯೋದು ಗ್ಯಾರಂಟಿ ಎನ್ನಲಾಗುತ್ತಿದೆ.

Join Nadunudi News WhatsApp Group