ರಾಬರ್ಟ್ ಚಿತ್ರ ಕಳೆದ 5 ದಿನಗಳಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ, ದಾಖಲೆಗಳು ಧೂಳಿಪಟ ನೋಡಿ.

ಸದ್ಯ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತದ ಚಿತ್ರರಂಗದಲ್ಲಿ ಬಹಳ ಸುದ್ದಿಯಲ್ಲಿ ಒಂದೇ ಒಂದು ವಿಷಯ ಏನು ಅಂದರೆ ಅದೂ ರಾಬರ್ಟ್ ಚಿತ್ರದ ವಿಷಯವೆಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಬರ್ಟ್ ಚಿತ್ರಕ್ಕೆ ಇಡೀ ಭಾರತವೇ ಫಿದಾ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ರಾಬರ್ಟ್ ಚಿತ್ರ ಬಹಳ ಯಶಸ್ವಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ದರ್ಶನ್ ಅವರ ಅಮೋಘವಾದ ನಟನೆಗೆ ಜನರು ಫಿದಾ ಆಗಿದ್ದಾರೆ ಎಂದು ಹೇಳಬಹುದು.

ಇನ್ನು ಕಳೆದ 5 ದಿನಗಳಿಂದ ಪ್ರತಿಯೊಬ್ಬರ ಬಾಯಿಯಲ್ಲಿ ಕೇಳಿಬರುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದೂ ರಾಬರ್ಟ್ ಚಿತ್ರದ ಕಲೆಕ್ಷನ್ ವಿಚಾರ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ರಾಬರ್ಟ್ ಚಿತ್ರ ಕಳೆದ 5 ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಅನ್ನುವವರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಬರ್ಟ್ ಚಿತ್ರದ ಒಟ್ಟು ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

robert movie big collection

ಹೌದು ರಾಬರ್ಟ್ ಚಿತ್ರದ ಕಳೆದ ಐದು ದಿನಗಳಿಂದ ದೇಶದ ಬಹುತೇಕ ಚಿತ್ರ ಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಚಿಕ್ಕ ಮಕ್ಕಳಿಂದ ಮುದುಕರ ತನಕ ರಾಬರ್ಟ್ ಚಿತ್ರಕ್ಕೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಚಿತ್ರ ಕಥೆ, ದರ್ಶನ್ ಅವರ ನಟನೆ ಮತ್ತು ಕೆಲವು ಡೈಲಾಗ್ ಗಳು ಜನರಿಗೆ ಬಹಳ ಇಷ್ಟವಾಗಿದ್ದು ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬಂದಿದೆ ಎಂದು ಹೇಳಬಹುದು. ಇನ್ನು ಕಲೆಕ್ಷನ್ ವಿಚಾರದಲ್ಲಿ ಕೂಡ ರಾಬರ್ಟ್ ಚಿತ್ರ ಬಹಳ ಮುಂದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಎಂದು ಹೇಳಬಹುದು.

ಹೌದು ರಾಬರ್ಟ್ ಚಿತ್ರ ಬಿಡುಗಡೆಯಾದ ಮೊದಲ ದಿನ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಎರಡನೆಯ ದಿನ ಬರೋಬ್ಬರಿ 23 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ಮಾಹಿತಿಗಳಿಂದ ತಿಳಿದು ಬಂದಿತ್ತು. ಇನ್ನು ಚಿತ್ರ ಬಿಡುಗಡೆಯಾದ ಮೂರನೆಯ ದಿನ ಶನಿವಾರವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನ ನೋಡಲು ಚಿತ್ರ ಮಂದಿರದ ಬಳಿ ಬಂದಿದ್ದು ಮೂರನೆಯ ದಿನ ಸುಮಾರು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಮಾಹಿತಿಗಳಿಂದ ತಿಳಿದು ಬಂದಿದೆ.

Join Nadunudi News WhatsApp Group

ಇನ್ನು ಅದೇ ರೀತಿಯಲ್ಲಿ ಭಾನುವಾರ ಬಹುತೇಕ ಎಲ್ಲಾ ಜನರಿಗೆ ರಜೆ ಇರುವ ಕಾರಣ ಚಿತ್ರ ಮಂದಿರಗಳಲ್ಲಿ ಹೆಚ್ಚು ಶೋ ಗಳನ್ನ ಹಾಕಲಾಗಿದ್ದು ಭಾನುವಾರ ರಾಬರ್ಟ್ ಚಿತ್ರ ಸುಮಾರು 27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ ಮತ್ತು ಸೋಮವಾರ ಸುಮಾರು 14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಸಿನಿ ತಜ್ಞರು ಹೇಳುವ ಪ್ರಕಾರ ರಾಬರ್ಟ್ ಚಿತ್ರ ಬಿಡುಗಡೆಯಾದ ಐದು ದಿನದಲ್ಲಿ ಬರೋಬ್ಬರಿ 109 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಸ್ನೇಹಿತರೆ ರಾಬರ್ಟ್ ಚಿತ್ರ ಇನ್ನೂ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group