Rohith Sharma: ಶರ್ಮ ಮಾಡಿದ ಈ ಸಾಧನೆ ಧೋನಿ ಕೂಡ ಮಾಡಿಲ್ಲ, ವಿಶೇಷ ದಾಖಲೆ ನಿರ್ಮಿಸಿದ ಹಿಟ್ ಮ್ಯಾನ್

ಧೋನಿಗಿಂತಲೂ ವಿಶೇಷ ದಾಖಲೆ ನಿರ್ಮಿಸಿದ ಶರ್ಮ

Rohith Sharma New Record In T20 world Cup 2024: ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯದ ಬಗ್ಗೆ ಕ್ರಿಕೆಟ್ ಪ್ರಿಯರು ಹೆಚ್ಚಿನ ಕುತೂಹಲ ಇಟುಕೊಂಡಿದ್ದಾರೆ. ಈ ಬಾರಿ ಟೀಮ್ ಇಂಡಿಯಾ ಕಪ್ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಭಾರತೀಯರಲ್ಲಿದೆ.

ಸದ್ಯ ಟೀಮ್ ಇಂಡಿಯಾ T20 ವಿಶ್ವಕಪ್ ಪಂದ್ಯದಲ್ಲಿ ಸೆಮಿ ಫೈನಲ್ ಹಂತ ತಲುಪಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2024 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್‌ ಗಳಿಂದ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ. ಧೋನಿಗಿಂತಲೂ ಶರ್ಮ ವಿಶೇಷ ದಾಖಲೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Rohit Sharma New Record
Image Credit: Hindustantimes

ವಿಶೇಷ ದಾಖಲೆ ನಿರ್ಮಿಸಿದ ಹಿಟ್ ಮ್ಯಾನ್
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2024 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್‌ ಗಳಿಂದ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ. ಸತತ ಮೂರು ಬಾರಿ ಐಸಿಸಿ ಟ್ರೋಫಿಯಲ್ಲಿ ಫೈನಲ್ ತಲುಪಿದ ಅಪರೂಪದ ಸಾಧನೆಯನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಮಾಡಿದ್ದಾರೆ. ಆದರೆ ಈ ಸಾಧನೆ ಮಾಡಿದ ನಾಯಕ ರೋಹಿತ್ ಮಾತ್ರ ಅಲ್ಲ. ಇದಕ್ಕೂ ಮುನ್ನ ಸೌರವ್ ಗಂಗೂಲಿ ಭಾರತಕ್ಕಾಗಿ ಈ ಸಾಧನೆ ಮಾಡಿದ್ದರು. ಗ್ಲೋಬಲ್ ವೆಸ್ಟ್ ಇಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಕೂಡ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ಈಗ ಐಸಿಸಿ ಟ್ರೋಫಿ ಫೈನಲ್ ತಲುಪಿದ ನಾಲ್ಕನೇ ನಾಯಕನ ಪಟ್ಟಿಯಲ್ಲಿದ್ದಾರೆ.

ಶರ್ಮ ಮಾಡಿದ ಈ ಸಾಧನೆ ಧೋನಿ ಕೂಡ ಮಾಡಿಲ್ಲ
ಕ್ಲೈವ್ ಲಾಯ್ಡ್ 1975 ರ ವಿಶ್ವಕಪ್, 1979 ರ ವಿಶ್ವಕಪ್, 1983 ರ ವಿಶ್ವಕಪ್ ಫೈನಲ್ ಅನ್ನು ಗೆದ್ದಿದ್ದರು. ಭಾರತದ ಸೌರವ್ ಗಂಗೂಲಿ 2000 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2002 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2003 ರಲ್ಲಿ ODI ವಿಶ್ವಕಪ್ ಫೈನಲ್ ತಲುಪಿದರು. ಕೇನ್ ವಿಲಿಯಮ್ಸನ್ 2019 ರಲ್ಲಿ ವಿಶ್ವಕಪ್, 2021 WTC ಟೂರ್ನಮೆಂಟ್ ಫೈನಲ್ ಮತ್ತು 2021 ರಲ್ಲಿ ವಿಶ್ವ ಕಪ್ ಫೈನಲ್. ಈಗ ರೋಹಿತ್ ಶರ್ಮಾ 2023 ರ WTC ಫೈನಲ್, 2023 ODI ವಿಶ್ವಕಪ್ ಫೈನಲ್ ಮತ್ತು ಈಗ T20 ವಿಶ್ವಕಪ್ ಫೈನಲ್ ಅನ್ನು ಗೆಲ್ಲುವ ಮೂಲಕ ವಿಶೇಷ ಸಾಧ್ನೆ ಮಾಡಿದ್ದಾರೆ. ರೋಹಿತ್ ಶರ್ಮ ಈ ಹೊಸ ದಾಖಲೆಯ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Rohit Sharma New Record In T20 world Cup 2024
Image Credit: ABP Live

Join Nadunudi News WhatsApp Group

Join Nadunudi News WhatsApp Group