RRR ಚಿತ್ರದಲ್ಲಿ ಮಲ್ಲಿ ಪಾತ್ರ ಮಾಡಿದ್ದ ಈ ಹುಡುಗಿ ನಿಜಕ್ಕೂ ಯಾರು ಗೊತ್ತಾ, ನೋಡಿ

ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳ ಕುರಿತು ಸಾಕಷ್ಟು ಕುತೂಹಲ ಇರುತ್ತದೆ. ಅಷ್ಟೇ ಅಲ್ಲದೇ, ಪಾತ್ರಗಳ ವಿಚಾರದಲ್ಲಿ ರಾಜಮೌಳಿಯವರು ತುಂಬಾನೇ ಪರ್ಫೆಕ್ಟ್ ಆಗಿರುತ್ತಾರೆ. ಇನ್ನು, ಮಾರ್ಚ್ 25 ರಂದು ತೆರೆ ಕಂಡಿರುವ ಆರ್​ಆರ್​ಆರ್​’ ಸಿನಿಮಾ ಕೂಡ ದುಬಾರಿ ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಆರ್​ಆರ್​ಆರ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡುತ್ತಿವೆ.

ಅಂದಹಾಗೆ, ಕೋಮರಮ್ ಭೀಮ್ (ಜ್ಯೂ.ಎನ್​ಟಿಆರ್​)​ ಬುಡಗಕಟ್ಟು ಜನಾಂಗದವನು. ಅದೇ ಜನಾಂಗದ ಹುಡುಗಿಯೇ ಈ ಮಲ್ಲಿ. ಅವಳನ್ನು ಬ್ರಿಟಿಷರು ಅಪಹರಣ ಮಾಡಿಕೊಂಡು ಹೋಗುತ್ತಾರೆ. ಅವಳನ್ನು ಕರೆದುಕೊಂಡು ಬರೋಕೆ ಭೀಮ್​ ಹೋಗುತ್ತಾನೆ. ಅಲ್ಲಿಂದಲೇ ರಿಯಲ್ ಸ್ಟೋರಿ ಆರಂಭವಾಗುವುದು. ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹುಡುಗಿಯ ಹೆಸರು ಟ್ವಿಂಕಲ್ ಶರ್ಮಾ. ಟ್ವಿಂಕಲ್ ಶರ್ಮಾ ಮಲ್ಲಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾಳೆ. ಹೌದು, ಇವಳು ಚಂಡೀಗಢದವಳು. ರಾಜಮೌಳಿಯವರು ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು.RRR' actor Ahmareen Anjum shares a BTS picture from the shoot | Telugu  Movie News - Times of India

ಈ ಪಾತ್ರಕ್ಕಾಗಿ 160 ಮಕ್ಕಳನ್ನು ಆಡಿಷನ್ ಮಾಡಲಾಗಿತ್ತು. ಆದರೆ ಕೊನೆಗೆ ಆಯ್ಕೆಯಾದದ್ದು ಟ್ವಿಂಕಲ್​ ಶರ್ಮಾ. ಈ ಪಾತ್ರಕ್ಕೆ ಆಯ್ಕೆ ಆಗುವಾಗ ಆಕೆ 8ನೇ ಕ್ಲಾಸ್​ನಲ್ಲಿದ್ದಳು. ಈಗ ಅವಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಂದಹಾಗೆ, ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’ ಸೇರಿ ಹಲವು ಟಿವಿ ಶೋಗಳಲ್ಲಿ ಟ್ವಿಂಕಲ್ ಶರ್ಮಾ ಸ್ಪರ್ಧಿಸಿದ್ದಾಳೆ. ಫ್ಲಿಪ್​ಕಾರ್ಟ್​ನಲ್ಲಿ ಮಕ್ಕಳನ್ನು ಒಳಗೊಂಡ ಜಾಹೀರಾತಿನಲ್ಲಿಯೂ ಟ್ವಿಂಕಲ್ ಆಯಕ್ಟ್ ಮಾಡಿದ್ದರು.

ರಾಜಮೌಳಿ ಫ್ಲಿಪ್​ಕಾರ್ಟ್​ ಜಾಹೀರಾತನ್ನು ನೋಡಿದ್ದರು. ಮಲ್ಲಿ ಪಾತ್ರಕ್ಕೆ ಟ್ವಿಂಕಲ್​ ಸರಿಹೊಂದಬಹುದು ಎಂದೇನಿಸಿತು. ಆ ಬಳಿಕ ಟ್ವಿಂಕಲ್​ಗೆ ಆಡಿಷನ್​ಗೆ ಆಹ್ವಾನ ನೀಡಿದರು ರಾಜಮೌಳಿ. 160 ಮಂದಿಯಲ್ಲಿ ಅವಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು. ಅಂದಹಾಗೆ ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಟ್ವಿಂಕಲ್ ಶರ್ಮಾ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಮಲ್ಲಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.Who Plays Malli in RRR Movie? RRR Malli Character Name

ಒಟ್ಟಿನಲ್ಲಿ ಮಾರ್ಚ್ 25 ರಂದು ಎಲ್ಲ ಪ್ರದರ್ಶನಗಳು ಹೌಸ್​ಫುಲ್​ ಆದವು. ಎಲ್ಲಾ ಭಾಷೆಯಲ್ಲೂ ‘ಆರ್​ಆರ್​ಆರ್​’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಆರ್ ಆರ್ ಆರ್ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಹೆಚ್ಚಿದೆ.

Join Nadunudi News WhatsApp Group

Join Nadunudi News WhatsApp Group