ಅಂದು ದುಡ್ಡೇ ಇಲ್ಲದೆ ಕಂಗೆಟ್ಟಿದ್ದ ಸಲ್ಮಾನ್ ಖಾನ್, ಸಹಾಯ ಮಾಡಿದ ಆ ಕನ್ನಡಿಗ ಯಾರು ಗೊತ್ತಾ, ನೆನಪಿಸಿಕೊಂಡ ಸಲ್ಲು

ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಬಾಲಿವುಡ್​ನ ಪ್ರತಿಷ್ಠಿತ ಅವಾರ್ಡ್ ಶೋ IIFAನಲ್ಲಿ ಬಾಲಿವುಡ್​ ನಟ ಸಲ್ಮಾನ್​ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಕಾರ್ಯಕ್ರಮದಲ್ಲಿ ಅವರು ತಮ್ಮ ಸ್ಟ್ರಗ್ಲಿಂಗ್ ಡೇಗಳನ್ನ ಹೇಳಿಕೊಂಡಿದ್ದರು. ಆ ಸಮಯದಲ್ಲಿ ತಮ್ಮ ಬಳಿ ದುಡ್ಡಿಲ್ಲದಿದ್ದಾಗ ಹೇಗ್ಹೇಗೆ ಪರದಾಡಿದ್ದರು ಅನ್ನೋದನ್ನ ಹೇಳಿಕೊಂಡಿದ್ದರು.
ಅಷ್ಟೇ ಅಲ್ಲ ಆ ಸಮಯದಲ್ಲಿ ಗೆಳೆಯ ನಟ ಸುನೀಲ್ ಶೆಟ್ಟಿ ಹೇಗೆ ತಮಗೆ ಸಹಾಯ ಮಾಡಿದ್ದರು ಅನ್ನೋದನ್ನೂ ಹೇಳಿದ್ದಾರೆ.

ತಮ್ಮ ಬಳಿ ಒಂದು ಶರ್ಟ್ ತೆಗೆದುಕೊಳ್ಳೊದಕ್ಕೂ ಆಗ ದುಡ್ಡಿರಲಿಲ್ಲ ಅದೇ ಸಮಯದಲ್ಲಿ ನಟ ಸುನೀಲ್​ ಶೆಟ್ಟಿ ತಮಗೆ ದುಬಾರಿ ಶರ್ಟ್ ಒಂದನ್ನ ಉಡುಗೊರೆಯಾಗಿ ಕೊಟ್ಟಿದ್ದನ್ನ ನೆನಪು ಮಾಡಿಕೊಂಡಿದ್ದಾರೆ. ಆ ಕಾರ್ಯಕ್ರಮದ ನಿರೂಪಣೆಯನ್ನ ಮಾಡ್ತಿದ್ದ ನಟ ಮನೀಪ್​ಪೋಲ್​ ಸಲ್ಮಾನ್ ಬಳಿ ಹೋಗಿ ಜೀವನದ ಯಾವ ಘಳಿಗೆ ನಿಮಗೆ ತುಂಬಾ ಭಾವುಕರನ್ನಾಗಿ ಮಾಡುತ್ತೆ ಅಂದಾಗ, ಸಲ್ಮಾನ್ ಆಗ ತಮ್ಮ ಜೀವನದಲ್ಲಿ ಎದುರಿಸಿರೋವಂತಹ ಈ ಕಷ್ಟದ ದಿನಗಳನ್ನ ನೆನಪು ಮಾಡಿಕೊಳ್ಳುತ್ತಾರೆ.Tearful Salman Khan at Rajjat Barjatya's prayer meet - Rediff.com movies

ಒಂದು ದಿನ ಸುನೀಲ್ ಶೆಟ್ಟಿ ತಮ್ಮ ಅಣ್ಣನ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಅದು ತುಂಬಾ ದುಬಾರಿಯಾದ ಅಂಗಡಿ. ಆ ಅಂಗಡಿಯಲ್ಲಿರೋ ಜೀನ್ಸ್ ಮತ್ತು ಶರ್ಟ್ ಖರೀದಿಸಲು ನನ್ನ ಬಳಿ ದುಡ್ಡಿರಲಿಲ್ಲ. ಹಾಗಾಗಿ ನಾನು ಅಲ್ಲಿದ್ದ ಕಡಿಮೆ ಬೆಲೆಯ ಜೀನ್ಸ್ ಒಂದನ್ನು ಖರೀದಿಸಿದೆ. ಆಗ ನನ್ನ ಬಳಿ ದುಡ್ಡಿಲ್ಲ ಅನ್ನೋದು ಸುನೀಲ್​ಶೆಟ್ಟಿ ಗಮನಿಸಿದ್ದ. ಆಗ ಸುನೀಲ್ ತಾನೇ ಒಂದು ಶರ್ಟ್ ಖರೀದಿಸಿ ನನಗೆ ಶರ್ಟ್​ನ್ನ ಉಡುಗೊರೆಯಾಗಿ ಕೊಟ್ಟ. ಈ ಮಾತನ್ನ ಹೇಳುತ್ತಿರುವಾಗಲೇ ಸಲ್ಮಾನ್​ ಕಣ್ಣುಗಳು ತೇವವಾಗಿದ್ದವು. ಮಾತುಗಳೇ ಬರದಂತೆ ಗಂಟಲು ತುಂಬಿಕೊಂಡಿತ್ತು.

ಅಲ್ಲೇ ಇದ್ದ ಸುನೀಲ್​ ಶೆಟ್ಟಿ ಮಗ ನಟ ಅಹಾನ್ ಅವರನ್ನ ಪ್ರೀತಿಯಿಂದ ತಬ್ಬಿಕೊಂಡರು ಸಲ್ಮಾನ್​ಖಾನ್​. ಆ ನಂತರ ಮಾತು ಮುಂದುವರಿಸಿದ ಸಲ್ಮಾನ್ “ಅದೇ ಅಂಗಡಿಯಲ್ಲಿದ್ದ ಒಂದು ಪರ್ಸ್ ಮೇಲೆ ನನ್ನ ಕಣ್ಣಿತ್ತು. ಅದನ್ನ ಗಮನಿಸಿದ ಸುನೀಲ್, ನನ್ನನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ತಮಗೆ ಅಂತ ಎತ್ತಿಟ್ಟ ವಿಶೇಷ ಪರ್ಸ್​ನ್ನ ಕೊಟ್ಟರು.”Bigg Boss 13: Shilpa Shetty's Marriage Taunt Makes Salman Khan Cry Like A  Baby - VIDEO

ಸಲ್ಮಾನ್ ಹೀಗೆ ಒಂದೊಂದಾಗಿ ತಮ್ಮ ಮನದಾಳದ ಮಾತನ್ನ ಹೇಳ್ತಿರುವಾಗಲೇ, IIFA ಕಾರ್ಯಕ್ರಮ ಚಪ್ಪಾಳೆಯಿಂದ ತುಂಬಿ ಬಿಟ್ಟಿತು. ಕಲರ್ ಚಾನೆಲ್​ನ ಈ ವಿಶೇಷ ಕಾರ್ಯಕ್ರಮದ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಈಗ ವೈರಲ್ ಆಗಿದೆ. ಸಲ್ಮಾನ್ ಅಭಿಮಾನಿಗಳು ಕೂಡಾ ಸಲ್ಮಾನ್​ಖಾನ್​ ಮಾತು ಕೇಳಿ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲ ಕಷ್ಟಕಾಲದಲ್ಲಿ ಸ್ಪಂದಿಸಿದ ಸುನೀಲ್ ಶೆಟ್ಟಿಯವರನ್ನ ಗುಣಗಾನ ಮಾಡಿದ್ದಾರೆ.जिसके आगे झुकती है पूरी फिल्म इंडस्ट्री, उस सलमान खान ने जोड़े थे सुनील  शेट्टी के आगे हाथ, जानिए वजह | Jansatta

Join Nadunudi News WhatsApp Group

Join Nadunudi News WhatsApp Group