Sanju Basayya: ಕಾಮಿಡಿ ಕಿಲಾಡಿ ಸಂಜು ಬಸಯ್ಯ ಮದುವೆ ಸುದ್ದಿ ಏನಾಯ್ತು, ಇಲ್ಲಿದೆ ತಿರುವು

Sanju Basayya: ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಾಮಿಡಿ ಕಿಲಾಡಿಗಳು(Comedy Kiladigalu) ರಿಯಾಲಿಟಿ ಶೋ ಮೂಲಕ ಅದೆಷ್ಟೋ ಜನರ ಪ್ರೀತಿಯನ್ನ ಗಳಿಸಿಕೊಂಡ ಹಾಸ್ಯನಟ ಅಂದರೆ ಅದು ಸಂಜು ಬಸಯ್ಯ(Sanju Basayya)ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸಂಜು ಬಸಯ್ಯ ಅವರ ಹಾಸ್ಯಕ್ಕೆ ನಗದ ಮುಖವೇ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ಹಲವು ರಿಯಾಲಿಟಿ ಶೋ(Reality Show) ಗಳಲ್ಲಿ ಕಾಣಿಸಿಕೊಂಡು ಅದೆಷ್ಟೋ ಜನರ ಮುಖದಲ್ಲಿ ನಗುವನ್ನ ತರಿಸಿದ್ದ ಸಂಜು ಬಸಯ್ಯ ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದರು‌ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಸಂಜು ಬಸಯ್ಯ ಅವರ ಮದುವೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಅವರ ಜೋಡಿಯ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು

Comedy Khiladi Sanju Basaiya Marriage News What happened, here's the twist
Image Source:The Economic Times

ರಿಯಾಲಿಟಿ ಶೋ ಗಳಲ್ಲಿ ಮಿಂಚಿದ್ದ ಪ್ರತಿಭೆ

ಇನ್ನು ಸಂಜು ಬಸಯ್ಯ ಅವರು ಕನ್ನಡದ ಖ್ಯಾತ ರಿಯಾಲಿಟಿ ಶೋ ಅನಿಸಿಕೊಂಡಿದ್ದ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಕಾಣಿಸಿಕೊಂಡು ನಂತರ ದರ್ಶನ್ ಅವರ ಜೊತೆ ಚಿತ್ರದಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಕತ್ ಸುದ್ದಿಯಾದರು ಎಂದು ಹೇಳಬಹುದು.

Join Nadunudi News WhatsApp Group

ಸಂಜು ಬಸವಯ್ಯ ಅವರು ದರ್ಶನ್ ಅವರು ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಇಂತಿ ನಿಮ್ಮ ಭೈರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚುತ್ತಿದ್ದಾರೆ.. ಅಷ್ಟೇ ಅಲ್ಲದೇ ಕಿರುತೆರೆಯ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜು ಅವರ ತಂದೆ ಬಸಯ್ಯ. ಮೂಲತಃ ಇವರು ಡ್ರಾಮಾ ಕಲಾವಿದರು.ಸಂಜು ಬಸಯ್ಯ ಮತ್ತು ಮದುಯಾಗುತ್ತಿರುವ ಹುಡುಗಿ ಪಲ್ಲವಿ ನಡುವಿನ ವಯಸ್ಸಿನ ಅಂತರ ಎಷ್ಟು  ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ. - NADUNUDI

ಮದುವೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾರಿಸುವುದು ಇವರ ಕಾಯಕ. ಹಾಗಾಗಿ, ತಂದೆಯಂತೆ ಮಗನಿಗೂ ಅಭಿನಯ, ಹಾಡುವ ಆಸಕ್ತಿ ಬೆಳೆಯಿತು.

ತಂದೆಯ ಜೊತೆಯಲ್ಲಿ ಹೋಗಿ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಅಥವಾ ಹಾಡನ್ನ ಹೇಳುವ ಮೂಲಕ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡಿದ್ದರು ಮೆಣಸಿನಕಾಯಿ ಬಸಿಯಾ ಎಂಬ ನಾಟಕದಿಂದ ಅದೇ ಹೆಸರಿನಿಂದ ನಾಟಕರಂಗದಲ್ಲಿ ಫೇಮಸ್ ಆಗಿದ್ದರು ಸಂಜು ಸುಮಾರು 8 ರಿಂದ 10 ವರ್ಷದಿಂದ ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಸಂಜು ಬಸಯ್ಯ ತಾನು ಕುಳ್ಳಗಿದ್ದೇನೆ ಎಂದು ಕೊರಗುತ್ತಾ ಕೂರದೆ ತನ್ನ ದೇಹದ ಕುಬ್ಜತೆಯನ್ನೇ ಆಧಾರವಾಗಿಟ್ಟುಕೊಂಡು ನಟಿಸಲು ಶುರುಮಾಡಿದ. ಶುರುವಿನಲ್ಲಿ ಆರ್ಕೆಷ್ಟ್ರಾ ಗಳಲ್ಲಿ ನಟಿಸುತ್ತಾ ಎಲ್ಲರಿಗು ಮನರಂಜನೆ ನೀಡುತ್ತಿದ್ದ ಸಂಜು, ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಾ, ನೋವು ಅವಮಾನಗಳೆನ್ನೆಲ್ಲಾ ಸಹಿಸುತ್ತಾ ಬೆಳೆಯುತ್ತಾರೆ.

ಮದುವೆ ಬಗ್ಗೆ ಸ್ಪಷ್ಟನೆ

ಹೌದು, ನೋಡಲು ಸುಂದರಾಗಿರುವ ಬಳ್ಳಾರಿಯವರಾಗಿರುವ ಪಲ್ಲವಿ ಅವರನ್ನೇ ಸಂಜು ಬಸಯ್ಯ ಮದುವೆಯಾಗುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಲ್ಲವಿ ಜೊತೆಗಿರುವ ಫೋಟೋಗಳು ವೈರಲ್ ಆಗಿದ್ದವು.

ಅವರಿಬ್ಬರೂ ಜೊತೆಗಿದ್ದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಉಂಟು ಆದರೆ ಒಂದು ಇದೀಗ ಸಂಜು ಬಸವಯ್ಯ ಅವರು ಒಂದು ವಿಡಿಯೋ ಮಾಡಿದ್ದು ಅದರಲ್ಲಿ ಪಲ್ಲವಿ ನನ್ನ ಪ್ರೇಯಸಿ ಅಲ್ಲ ನಾವಿಬ್ಬರೂ ಅಕ್ಕಾ ತಮ್ಮ ನಮ್ಮಿಬ್ಬರ ಮಧ್ಯೆ ಯಾವುದೇ ಪ್ರೀತಿ ಇಲ್ಲ ಸುಖಾಸುಮ್ಮನೆ ಸಂಬಂಧ ಕಟ್ಟಿಬಿಟ್ಟರು ಎಂದು ಹೇಳಿದ್ದಾಗ ಕೆಲವೊಬ್ಬರು ಅವರ ಮಾತನ್ನು ಪ್ರಶ್ನಿಸಿದ್ದರು,

Comedy Khiladi Sanju Basaiya Marriage News What happened, here's the twist
Image Source: India Today

ಹಾಗಾದ್ರೆ ಝೀ ಕನ್ನಡದಲ್ಲಿ ಹೇಳಿದೆಲ್ಲ ಸುಳ್ಳ ಎಂದಾಗ ಸಂಜು ಅವರು ಇಲ್ಲ ಅದೆಲ್ಲ ಡ್ರಾಮಾ ಅಷ್ಟೇ ಸ್ಕ್ರೀನ್ ಮುಂದೆ ನಾಟಕ ಮಾಡಿದ್ವಿ ಅಷ್ಟೇ ಸ್ಕ್ರೀನ್ ಹಿಂದೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ ನಾವಿಬ್ಬರೂ ಫ್ಯೂರ್ ಫ್ರೆಂಡ್ಸ್ ಅಥವಾ ಅಕ್ಕಾ ತಮ್ಮನ ಸಂಬಂಧ ಅಷ್ಟೇ .

ನಾವೆಲ್ಲರೂ ಕಲಾವಿದರು ತೆರೆಯ ಮೇಲೆ ನಮ್ಮದು ನಟನೆ ಮಾತ್ರ ತೆರೆಯ ಹಿಂದೆ ನಮ್ಮದು ಸ್ನೇಹ ಮಾತ್ರ ಇದೇ ಎಂದು ಹೇಳಿದ್ದಾರೆ ಇದಕ್ಕೆ ಜನರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಇಬ್ಬರ ನಡುವೆಯೂ ಪ್ರೀತಿ ಇತ್ತು ಅದಕ್ಕೆ ಮನೆಯವರ ಒಪ್ಪಿಗೆ ಇಲ್ಲದೆ ಹೀಗೆ ಹೇಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

Join Nadunudi News WhatsApp Group