ನಟ ಶರತ್ ಕುಮಾರ್ ಮತ್ತು ಪತ್ನಿಗೆ ಒಂದು ವರ್ಷ ಜೈಲು ಶಿಕ್ಷೆ, ಅಷ್ಟಕ್ಕೂ ಇವರು ಮಾಡಿದ್ದೇನು ಗೊತ್ತಾ.

ಯಾಕೋ ಚಿತ್ರರಂಗದ ಸಮಯ ಸರಿ ಇಲ್ಲ ಎಂದು ಕಾಣುತ್ತದೆ ಹೌದು ಒಂದಾದ ಮೇಲೆ ಒಂದು ಶಾಕಿಂಗ್ ಸುದ್ದಿ ಬರುತ್ತಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಒಬ್ಬ ನಟ ಮತ್ತು ನಟಿ ಅಂದಮೇಲೆ ಅವರಿಗೆ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ ಮತ್ತು ಅವರು ತಿಳಿದೋ ತಿಳಿಯದೆ ಮಾಡುವ ಕೆಲವು ತಪ್ಪುಗಳು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಮ್ಮ ದೇಶದ ಕಾನೂನಿನಲ್ಲಿ ಹಲವು ನಿಯಮಗಳು ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ನಾವು ಅದಕ್ಕೆ ತಕ್ಕನಾದ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ಹೇಳಬಹುದು.

ಇನ್ನು ಈಗ ಬಂದಿರುವ ಶಾಕಿಂಗ್ ಸುದ್ದಿ ಏನು ಅಂದರೆ, ಭಾರತದ ಚಿತ್ರರಂಗದ ಖ್ಯಾತ ನಟ ಮತ್ತು ನಟಿ ಎನಿಸಿಕೊಂಡಿರುವ ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಅವರಿಗೆ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆಯನ್ನ ನೀಡಿದ್ದು ಇದು ಚಿತ್ರರಂಗದ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಪೋಷಕ ಪಾತ್ರ ಮತ್ತು ವಿಲನ್ ಪಾತ್ರದಲ್ಲಿ ನಟನೆ ಮಾಡುತ್ತಿದ್ದ ನಟ ಶರತ್ ಕುಮಾರ್ ಅವರು ದಕ್ಷಿಣ ಭಾರತದ ಬಹತೇಕ ಎಲ್ಲಾ ಚಿತ್ರ ಮಂದಿರಗಳ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದಾರೆ ಎಂದು ಹೇಳಬಹುದು. ಇನ್ನು ಶರತ್ ಕುಮಾರ್ ಅವರು ಕನ್ನಡದ ಕೆಲವು ಚಿತ್ರಗಳಲ್ಲಿ ಕೂಡ ಅಮೋಘವಾಗಿ ನಟನೆಯನ್ನ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Sharat kumar ad his wife

ಇನ್ನು ಶರತ್ ಕುಮಾರ್ ಅವರ ಪತ್ನಿ ಕೂಡ ದೇಶಕಂಡ ಹೆಮ್ಮೆಯ ನಟಿ ಎಂದು ಹೇಳಬಹುದು ಮತ್ತು ಇವರು ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡವರು ಆಗಿದ್ದಾರೆ. ಹಾಗಾದರೆ ಈ ಸ್ಟಾರ್ ದಂಪತಿಗಳಿಗೆ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ನೀಡಲು ಕಾರಣ ಮತ್ತು ಈ ಸ್ಟಾರ್ ದಂಪತಿಗಳು ಮಾಡಿದ ಆ ತಪ್ಪೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಚೆಕ್ ಬೌನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಖ್ಯಾತ ಸ್ಟಾರ್ ದಂಪತಿಗಳಾದ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ರಾಜಕಾರಣಿ ಮತ್ತು ನಟ ಶರತ್ ಕುಮಾರ್ ಹಾಗು ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆ 2015 ರಲ್ಲಿ ‘ಇದು ಎನ್ನಮಾಯಂ’ ಎಂಬ ಚಿತ್ರ ನಿರ್ಮಾಣಕ್ಕಾಗಿ ರೇಡಿಯಂಟ್ ಗ್ರೂಪ್ ನಿಂದ ಸಾಲ ಪಡೆದುಕೊಂಡಿತ್ತು. ವಿಕ್ರಂ ಪ್ರಭು ಹಾಗೂ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದರು. ಇನ್ನು ಚಿತ್ರ ನಿರ್ಮಾಣಕ್ಕಾಗಿ ಪಡೆದುಕೊಂಡ ಸಾಲವನ್ನ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಶರತ್ ಕುಮಾರ್ ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದವು ಮತ್ತು ಪತ್ನಿ ರಾಧಿಕಾ ವಿರುದ್ಧ 2 ಪ್ರಕರಣ ದಾಖಲಾಗಿತ್ತು.

Join Nadunudi News WhatsApp Group

Sharat kumar ad his wife

ಇನ್ನು ಕೆಲವು ಸಮಯದ ಹಿಂದೆ ಶರತ್ ಕುಮಾರ್ ಅವರು ರೇಡಿಯಂಟ್ ಗ್ರೂಪ್ ಗೆ ಸಾಲ ಮರುಪಾವತಿಗಾಗಿ ಶರತ್ ಹಾಗೂ ರಾಧಿಕಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ 2018 ರಲ್ಲಿ ರೇಡಿಯಂಟ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿತ್ತು, ಈಗ ನಾಲ್ಕು ವರ್ಷಗಳ ವಿಚಾರಣೆ ಬಳಿಕ ಇದೀಗ ನ್ಯಾಯಾಲಯ ನಟ ಶರತ್ ಕುಮಾರ್ ಹಾಗೂ ರಾಧಿಕಾ ದಂಪತಿಗೆ 1 ವರ್ಷ ಜೈಲುಶಿಕ್ಷೆ ವಿಧಿಸಿದೆ.

Join Nadunudi News WhatsApp Group