ಅಣ್ಣಾವ್ರ ಜೊತೆ ನಟಿಸಲು ಎಷ್ಟೇ ಅವಕಾಶ ಬಂದರು ಶ್ರುತಿ ಮಾತ್ರ ನಟಿಸಿಲ್ಲ ಏಕೆ ಗೊತ್ತಾ, ನೋಡಿ

ಶ್ರುತಿ ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರು.
ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ ಭಾಷೆಗಳ ಕೆಲವೊಂದು ಪ್ರಸಿದ್ಧ ಚಿತ್ರನಟಿಯರು, ಇಲ್ಲವೇ ಕೆಲವೊಂದು ಪರಭಾಷಾ ನಟಿಯರು.

ಇಂತಹವರ ನಡುವೆ ಇಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತವರಲ್ಲಿ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ ಪ್ರಮುಖರು. ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.Kannada Actress Shruthi Driver's Mysterious Death

ಹೌದು 90ರ ದಶಕದಲ್ಲಿ ವರ್ಷಕ್ಕೆ ಬರೋಬ್ಬರಿ ಎರಡರಿಂದ ಮೂರು ಸಿನಿಮಾಗಳು ನಟಿ ಶೃತಿ ಯವರ ನಟನೆಯಲ್ಲಿ ಮೂಡಿಬಂದಿದ್ದ ಸಿನಿಮಾಗಳೆ ಆಗಿದ್ದವು. ಹೌದು ಬಹುತೇಕ ಎಲ್ಲ ಸಿನಿಮಾಗಳಲ್ಲಿ ಅಳುಮುಂಜಿ ಪಾತ್ರಗಳೇ ಅವರು ಕಾಣಿಸಿಕೊಂಡಿದ್ದು ಶೃತಿಯವರು ಹೆಚ್ಚಾಗಿ ಇಂತಹ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದರು.

ಇನ್ನು ಹೀಗೆ ಕಾಲಕಳೆದಂತೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟ ಬಳಿಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಬಲ್ಲ ಹಾಗೂ ಎಲ್ಲಾ ಪಾತ್ರಗಳಿಗೆ ಜೀವತುಂಬುವ ಶಕ್ತಿ ಹೊಂದಿದ್ದ ಪರಿಪೂರ್ಣ ಕಲಾವಿದೆಯಾಗಿ ಶೃತಿಯವರು ಬೆಳೆದು ನಿಂತಿದ್ದು ಡಾಕ್ಟರ್ ವಿಷ್ಣುವರ್ಧನ್ ಡಾಕ್ಟರ್ ಅಂಬರೀಶ್
ರವಿಚಂದ್ರನ್ ರಮೇಶ್ ಅರವಿಂದ್ ರಾಮ್ ಕುಮಾರ್ ಹೀಗೆ ಬಹುತೇಕ ಎಲ್ಲಾ ನಟರೊಂದಿಗೆ ಅಭಿನಯಿಸಿದ್ದರು.ನಟಿ ಶ್ರುತಿ ಮಗಳು ಈಗ ಹೇಗಿದ್ದಾಳೆ ನೋಡಿ | Shruthi Daughter Recent Photo | Kannada  Heroine Sruthi Daughter - YouTube

ಹೌದು ನಟಿ ಶೃತಿ ಎಷ್ಟೇ ಹೆಸರುಗಳಿಸಿದರು ಈಕೆಗೆ ಇಂದಿಗೂ ಇರುವ ಕೊರಗು ಒಂದೇ ಅದು ಕನ್ನಡದ ಕಣ್ಮಣಿ ಅಣ್ಣವ್ರೊಂದಿಗೆ ಒಂದು ಸಾರಿಯೂ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು.ಹೌದು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಬಣ್ಣಹಚ್ಚಿದ ಶ್ರುತಿ ಅವರಿಗೆ ಇಂದಿಗೂ ಸಹ ಅಣ್ಣಾವ್ರೊಂದಿಗೆ ಅಭಿನಯಿಸಲು ಆಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆಯಂತೆ. ಹೌದು ನಾನು ಅಪ್ಪಾಜಿ ಅವರೊಂದಿಗೆ ಜೀವನಚೈತ್ರ ಸಿನಿಮಾದಲ್ಲಿ ನಟಿಸಬೇಕಿದ್ದುಈ ಚಿತ್ರದಲ್ಲಿ ನನಗಾಗಿಯೇ ಒಂದು ಉತ್ತಮವಾದ ಪಾತ್ರವನ್ನು ಒದಗಿಸಿಕೊಟ್ಟಿದ್ದರು.

Join Nadunudi News WhatsApp Group

ನನ್ನನ್ನು ನೆನಪಲ್ಲಿಟ್ಟುಕೊಂಡು ನನಗೆ ತಕ್ಕಂತ ಪಾತ್ರವನ್ನು ಸೂಚಿಸಿದ್ದರಂತೆ ನಿರ್ದೇಶಕ ದೊರೆ ಭಗವಾನ್ ಅವರು. ಹೌದು ಜೀವನ ಚೈತ್ರ ಸಿನಿಮಾದಲ್ಲಿ ಅಪ್ಪಾಜಿಯವರ ಮನೆಯ ಸದಸ್ಯರಾಗಿ ಅವರೊಂದಿಗೆ ತೆರೆ ಹಂಚಿಕೊಳ್ಳುವ ಪಾತ್ರ ನನಗೆ ದೊರಕಿತ್ತು. ಆದರೆ ಅವತ್ತಿನ ದಿನಗಳಲ್ಲಿ ನನ್ನ ಬಿಸಿ ಶೆಡ್ಯೂಲ್ ಕಾರಣದಿಂದ ಆ ಸಿನಿಮಾವನ್ನು ಒಪ್ಪಿಕೊಳ್ಳಲಾಗಲಿಲ್ಲ.

ಸ್ವತಃ ಅಣ್ಣಾವ್ರೇ ಕರೆದು ನನಗಾಗಿ ನೀಡಿದ ಪಾತ್ರವನ್ನು ನಾನು ಮಾಡಲು.ಆಗಲಿಲ್ಲ ಎನ್ನುತ್ತಾ ಅಂದು ಕಳೆದುಕೊಂಡಂತಹ ಅದ್ಭುತ ಅವಕಾಶವನ್ನು ನೆನೆದು ನಟಿ ಶ್ರುತಿಯವರು ಇದೀಗ ಬೇಸರವನ್ನು ವ್ಯಕ್ತಪಡಿಸಿದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.Unknown Facts About Dr Rajkumar Every Annavru Fan Must Know

Join Nadunudi News WhatsApp Group