ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಗಳಗಳನೆ ಕಣ್ಣೀರಿಟ್ಟ ಶುಭ ಪೂಂಜಾ, ಅಷ್ಟಕ್ಕೂ ಆಗಿದ್ದೇನು ಗೊತ್ತಾ.

ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಿ ಎರಡು ದಿನಗಳು ಕಳೆದೆ ಬಿಟ್ಟಿದೆ ಎಂದು ಹೇಳಬಹುದು. ಹೌದು ಜನರು ಅದೆಷ್ಟೋ ದಿನಗಳಿಂದ ಕಾದು ಕುಳಿತ್ತಿದ್ದ ಬಿಗ್ ಬಾಸ್ ಸೀಸನ್ ಆರಂಭ ಆಗಿದ್ದು ಜನರು ಸೀರಿಯಲ್ ಗಳನ್ನ ನೋಡುವುದು ಬಿಟ್ಟು ಬಿಗ್ ಬಾಸ್ ನೋಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ ಗೆ ಘಟಾನುಘಟಿ ಸ್ಪರ್ಧಿಗಳು ಬಂದ್ದಿದ್ದು ಈ ಭಾರಿಯ ಬಿಗ್ ಬಾಸ್ ಭಾರಿ ರೋಚಕ ಹಂತವನ್ನ ತಲುಪುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟ ಘಟಾನುಘಟಿ ಸ್ಪರ್ಧಿಗಳಲ್ಲಿ ನಟಿ ಶುಭಾ ಪೂಂಜಾ ಕೂಡ ಒಬ್ಬರು ಎಂದು ಹೇಳಬಹುದು. ಐದು ಭಾರಿ ಭಾರಿ ಬಿಗ್ ಬಾಸ್ ಗೆ ಬರಲು ಅವಕಾಶ ಇದ್ದರು ತಿರಸ್ಕರಿಸಿದ ಶುಭಾ ಪೂಂಜಾ ಅವರು ಈ ಭಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದು ಜನರ ಮೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ನಟಿ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಕಣ್ಣೀರು ಹಾಕಿದ್ದು ಸದ್ಯ ಈ ವಿಷಯ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಟಿ ಶುಭಾ ಪೂಂಜಾ ಅವರು ಕಣ್ಣೀರು ಹಾಕಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬಿಗ್‍ ಬಾಸ್ ಶೋ ಆರಂಭವಾದ ಮೊದಲ ದಿನವೇ ಸ್ಪರ್ಧಿ ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಕಣ್ಣೀರಿಟ್ಟಿದ್ದಾರೆ.

Shubha poonja crying

ಸದಾ ನಗುಮುಖದಲ್ಲಿ ಇರುವುದನ್ನ ನೋಡಿದ ಅಭಿಮಾನಿಗಳು ಮೊದಲ ಭಾರಿ ಶುಭಪುಂಜ ಅವರು ಕನ್ನರು ಹಾಕಿರುವುದನ್ನ ನೋಡಿದ್ದು ಅವರ ನಿಷ್ಕಲ್ಮಶವಾದ ಮನಸ್ಸಿಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಸ್ಪರ್ಧಿ ಟಿಕ್‍ಟಾಕ್ ಸ್ಟಾರ್ ಧನುಶ್ರೀ ನೀಡಿದ ಬಾಲ್‍ಗಳಲ್ಲಿಯ ಕೀಗಳ ಬಣ್ಣದ ಆಧಾರದ ಮೇಲೆ ಬಿಗ್‍ಬಾಸ್ ಟೀಂ ರಚಿಸಿ ಮೊದಲ ಟಾಸ್ಕ್ ನೀಡಿದ್ದರು. ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ನಿರ್ಮಲಾ ಮತ್ತು ಧನುಶ್ರೀ ಅವರ ಕೆಂಪು ಬಣ್ಣದ ಟೀಂ ಬಿಗ್‍ಬಾಸ್ ನೀಡಿದ ಸೋಲುಂಡ ಟವರು ಟಾಸ್ಕ್ ನಲ್ಲಿ ಸೋತಿತ್ತು. ಹಾಗಾಗಿ ಬಿಗ್‍ಬಾಸ್ ನಿಮ್ಮ ನಾಲ್ವರಲ್ಲಿ ಒಬ್ಬರನ್ನ ಲೂಸರ್ ಎಂದು ತೀರ್ಮಾನಿಸಿ ಎಂದು ಹೇಳಿತ್ತು.

ಅದರಂತೆ ನಾಲ್ವರು ಐಸ್-ಪೈಸ್ ಹಾಕಿದ್ರೂ, ಯಾರು ಲೂಸರ್ ಅಂತ ನಿರ್ಧರಿಸಲು ಕಷ್ಟವಾಗಿತ್ತು. ಇದು ಗುಂಪು ಆಟವಾದ ಕಾರಣ ಯಾರನ್ನ ಲೂಸರ್ ಎಂದು ತೀರ್ಮಾನ ಮಾಡುವುದು ಬಹಳ ಕಷ್ಟವಾದ ವಿಷಯವಾಗಿತ್ತು. ಕೊನೆಗೆ ಶಿಕ್ಷೆ ನೀಡಿದ್ರೆ ನಾಲ್ವರನ್ನ ಮನೆಯಿಂದ ಹೊರ ಹೋಗುವ ಸದಸ್ಯರ ಲಿಸ್ಟ್ ನಲ್ಲಿ ನಾಮಿನೇಟ್ ಮಾಡಿ ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡು ನಿರ್ಮಲಾ ಲೂಸರ್ ಎಂದು ತೀರ್ಮಾನಿಸಿ ಬಿಗ್‍ಬಾಸ್‍ಗೆ ಹೇಳಲಾಯಿತು. ಇನ್ನು ಲೂಸರ್ ಆಗಿದ್ದ ನಿರ್ಮಲ ಅವರು ನೇರವಾಗಿ ನೊಮಿನೇಟ್ ಆದರು ಮತ್ತು ಎಲ್ಲ ಲಗೇಜ್ ಸ್ಟೋರ್ ರೂಮಿನಲ್ಲಿ ತಂದಿರಿಸುವಂತೆ ಬಿಗ್‍ಬಾಸ್ ಆದೇಶಿಸಿದ್ದರು.

Join Nadunudi News WhatsApp Group

Shubha poonja crying

ನಿರ್ಮಲಾ ಲಗೇಜ್ ಇಟ್ಟ ಬಳಿಕ ಸ್ಟೋರ್ ರೂಮ್ ಲಾಕ್ ಆಗಿದ್ದರಿಂದ ಭಾವುಕರಾದ ಶುಭಾ ಕಣ್ಣೀರು ಹಾಕಲು ಆರಂಭಿಸಿದರು, ಇದು ಗುಂಪು ಆಟ ಆಗಿದ್ದರಿಂದ ಸೋಲಿನಲ್ಲಿ ಎಲ್ಲರೂ ಸಮಾನರು ಅಂತ ಹೇಳಿ ಗಳಗಳನೇ ಅತ್ತರು. ನಂತರ ನಿರ್ಮಲಾ ಸೇರಿದಂತೆ ಮನೆಯ ಎಲ್ಲ ಸದಸ್ಯರು ಶುಭಾ ಪೂಂಜಾ ಅವರನ್ನ ಸಮಾಧಾನಪಡಿಸಿದರು. ಸದ್ಯ ಶುಭಾ ಪೂಂಜಾ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಬಹುದು.

Join Nadunudi News WhatsApp Group