Sim Card: ನಿಮ್ಮ ಆಧಾರ್ ಕಾರ್ಡಿನಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ…? ಈ ರೀತಿಯಲ್ಲಿ ಚೆಕ್ ಮಾಡಿ

ನಿಮ್ಮ ಆಧಾರ್ ಕಾರ್ಡಿನಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ...?

Sim Card Purchase Through Aadhaar Card: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ (Mobile Phone) ಗಳ ಬಳಕೆ ಹೆಚ್ಚಾಗಿವೆ. ಪ್ರತಿಯೊಬ್ಬರೂ ಕೂಡ ಒಂದಕ್ಕಿಂತ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನೂ ಬಳಸುತ್ತಾರೆ. ಇನ್ನು ಮೊಬೈಲ್ ಫೋನ್ ಗಳಿಗೆ ಒಂದಕ್ಕಿತ ಹೆಚ್ಚಿನ ಸಿಮ್ ಗಳನ್ನು ಕೂಡ ಹಾಕುತ್ತಾರೆ. ಇದೀಗ ಸಿಮ್ ಕಾರ್ಡ್ (Sim Card) ಖರೀದಿಸಲು ಆಧಾರ್ ಕಾರ್ಡ್ (Aadhar Card) ಅವಶ್ಯಕತೆ ಇರುತ್ತದೆ.

ಇನ್ನು ದೂರಸಂಪರ್ಕ ಇಲಾಖೆ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದು ಆಧಾರ್ ಕಾರ್ಡ್ ನಲ್ಲಿ 9 ಸಿಮ್ ಗಳನ್ನ ಖರೀದಿಸಬಹುದಾಗಿದೆ. ಇನ್ನು ನಿಮ್ಮ ಆಧಾರ್ ಸಂಖ್ಯೆ ಇದ್ದರೆ ಯಾರು ಬೇಕಾದರೂ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನೂ ಖರೀದಿಸಬಹುದು. ಇನ್ನು ನಿಮ್ಮ ಆಧಾರ್ ನಂಬರ್ ಅನ್ನು ದುರುಪಯೋಗಪಡಿಸಿಕೊಂಡು ಬೇರೆಯವರು ಸಿಮ್ ಖರೀದಿ ಮಾಡಿದ್ದರೆ ಅದನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

steps to check registered sim cards on your aadhaar card
Image Credit: Rightsofemployees

ಸಿಮ್ ಕಾರ್ಡ್ ಖರೀದಿ ಮಾಡಲು ಆಧಾರ್ ಕಾರ್ಡ್ ಅವಶ್ಯಕ
ಕೆಲವು ವರ್ಷಗಳ ಹಿಂದೆ ರೇಷನ್ ಕಾರ್ಡ್ (Ration Card) ಮತ್ತು ಒಂದು ಫೋಟೋ ನೀಡುವುದರ ಮೂಲಕ ಆಧಾರ್ ಕಾರ್ಡ್ ಖರೀದಿ ಮಾಡಬಹುದಿತ್ತು, ಆದರೆ ಈಗ ಸುರಕ್ಷತೆಯ ಉದ್ದೇಶದಿಂದ ಕೆಲವು ನಿಯಮಗಳನ್ನ ಜಾರಿಗೆ ತರಲಗಿದೆ. ಸದ್ಯದ ದಿನಗಳಲ್ಲಿ ಆಧಾರ್ ಮೂಲಕ ಸಿಮ್ ಖರೀದಿ ಮಾಡಬೇಕು. ಸಿಮ್ ಖರೀದಿ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್ ನಂಬರ್ ತೆಗೆದುಕೊಳ್ಳಲಾಗುತ್ತದೆ ಮತ್ತು ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವುದರ ಮೂಲಕ ಜನರು ಸಿಮ್ ಖರೀದಿ ಮಾಡಬಹುದು.

ನಿಮ್ಮ ಆಧಾರ್ ಕಾರ್ಡಿನಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ…?
•TAFCOP ಪೋರ್ಟಲ್‌ಗೆ ಭೇಟಿ ನೀಡಬೇಕು ( https://tafcop.dgtelecom.gov.in/)

•ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನೀವು ಪರಿಶೀಲಿಸಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

Join Nadunudi News WhatsApp Group

•ನೀವು ನಮೂದಿಸಿದ ನಂಬರ್ ಗೆ ಒಂದು OTP ಬರುತ್ತದೆ ಮತ್ತು ಆ OTP ಯನ್ನು ನಮೂದಿಸಬೇಕು.

•ಇದರಿಂದ ಅವನ ಅಥವಾ ಅವಳ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಬಹುದು.

Sim Card link With Aadhar Card
Image Credit: Gizbot

Join Nadunudi News WhatsApp Group