ಅಗ್ನಿ ಪುರಾಣದ ಪ್ರಕಾರ ಕನಸಿನಲ್ಲಿ ಈ 7 ಸೂಚನೆ ಕಾಣಿಸಿಕೊಂಡರೆ ಅದು ಸಾವಿನ ಸಂಕೇತವಂತೆ, ಅಗ್ನಿ ಪುರಾಣ ಹೇಳುವುದೇನು ನೋಡಿ.

ಹುಟ್ಟಿದ ಪ್ರತಿಯೊಂದು ಜೀವಿ ಕೂಡ ಒಂದಲ್ಲ ಒಂದು ದಿನ ಸಾಯಲೇಬೇಕು ಮತ್ತು ಈ ಭೂಮಿಯ ಮೇಲೆ ಅಮರರಾದವರು ಯಾರು ಇಲ್ಲ ಎಂದು ಹೇಳಬಹುದು. ಇನ್ನು ಈ ಭೂಮಿಯ ಮೇಲೆ ಹುಟ್ಟಿದ ಕೆಲವರು ಸ್ವಲ್ಪ ಬೇಗ ಇಹಲೋಕವನ್ನ ತ್ಯಜಿಸಿದರೆ ಇನ್ನೂ ಕೆಲವರು ವಯಸ್ಸಾದ ನಂತರ ಇಹಲೋಕವನ್ನ ತ್ಯಜಿಸುತ್ತಾರೆ ಎಂದು ಹೇಳಬಹುದು. ಇನ್ನು ಕನಸುಗಳು ಯಾರಿಗೆ ಬೀಳುವುದಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ದೊಡ್ಡ ದೊಡ್ಡ ಮುದುಕರ ತನಕ ಎಲ್ಲರೂ ಕನಸುಗಳನ್ನ ಕಾಣುತ್ತಾರೆ ಎಂದು ಹೇಳಬಹುದು, ನಾವು ಕಾಣುವ ಕೆಲವು ಕನಸುಗಳು ಬಹಳ ಒಳ್ಳೆಯ ಕನಸಾಗಿದ್ದರೆ ಇನ್ನೂ ಕೆಲವು ಕನಸುಗಳು ಬಹಳ ಕೆಟ್ಟ ಕನಸಾಗಿರುತ್ತದೆ ಎಂದು ಹೇಳಬಹುದು.

ಇನ್ನು ನಮಗೆ ಮಲಗಿರುವ ಸಮಯದಲ್ಲಿ ಬೀಳುವ ಕನಸುಗಳು ಅದರದ್ದೇ ಆದ ಅರ್ಥವನ್ನ ಹೊಂದಿರುತ್ತದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಅಗ್ನಿ ಪುರಾಣ ಹೇಳುವ ಪ್ರಕಾರ ಮಾನವ ಮಲಗಿದಾಗ ಈ 7 ಕನಸುಗಳು ಕಾಣಿಸಿಕೊಂಡರೆ ಅದೂ ಸಾವಿನ ಸೂಚನೆ ಎಂದು ಹೇಳಲಾಗಿದೆ. ಹಾಗಾದರೆ ಆ ಕನಸುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sleeping dream news

ಮೊದಲನೆಯದಾಗಿ ನಿಮಗೆ ಇಅಷ್ಟವಾದ ವಸ್ತುಗಳು ನಿಮ್ಮ ಕನಸಿನಲ್ಲಿ ದಗದಗಿಸಿ ಸುಟ್ಟು ಹೋದ ಕನಸು ಬಿದ್ದರೆ ಅದೂ ಅಶುಭದ ಸಂಕೇತ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ ಮತ್ತು ಅದೂ ಮೃತ್ಯವಿನ ಸೂಚನೆ ಎಂದು ಕೂಡ ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಇನ್ನು ಎರಡನೆಯದಾಗಿ ಕೇಶ ಮುಂಡನ, ನಮ್ಮ ಹಿಂದೂ ಪುರಾಣದಲ್ಲಿ ಕೇಶ ಮುಂಡನಕ್ಕೆ ಅದರದ್ದೇ ಆದ ಸ್ಥಾನಮಾನವನ್ನ ಕೊಡಲಾಗಿದೆ, ಆದರೆ ಅಗ್ನಿ ಪುರಾಣದಲ್ಲಿ ಕೇಶ ಮುಂಡನಕ್ಕೆ ಮೃತ್ಯವಿನ ಅರ್ಥವನ್ನ ನೀಡಲಾಗಿದೆ.

ಕೇಶ ಮುಂದಣ ಮಾಡಿಕೊಳ್ಳುವ ವ್ಯಕ್ತಿಯ ಮುಂದೆ ಡೋಲು ಮತ್ತು ನಗಾರಿ ಬಾರಿಸುವ ಕನಸು ಬಿದ್ದರೆ ಅದನ್ನ ಅಶುಭ ಎಂದು ಹೇಳಲಾಗಿದೆ ಮತ್ತು ಇಂತಹ ಕನಸು ಬಿದ್ದರೆ ಮನೆಯ ಹಿರಿಯರು ಯಾರೋ ಸ್ವರ್ಗಸ್ತರಾಗಲಿದ್ದಾರೆ ಅನ್ನುವ ಸೂಚನೆ ಇದು ಎಂದು ನಂಬಲಾಗಿದೆ. ಇನ್ನು ಮೂರನೆಯದಾಗಿ ಯಾರಿಗೆ ಯಾತ್ರೆಯ ಕನಸುಗಳು ಹೆಚ್ಚಾಗಿ ಬಿಳುತ್ತದೆಯೋ ಅಂತಹ ವ್ಯಕ್ತಿಗಳು ನಿಜವಾಗಿ ಯಾತ್ರೆಯ ವೇಳೆಯಲ್ಲಿ ಇಹಲೋಕವನ್ನ ತ್ಯಜಿಸುವ ಸಾಧ್ಯತೆ ಇದೆ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಇನ್ನು ನಾಲ್ಕನೆಯದಾಗಿ ಭಯಂಕರವಾದ ಸಾವನ್ನ ಕಂಡ ಕನಸು, ಹೌದು ನಿಮ್ಮ ಕನಸಿನಲ್ಲಿ ಯಾವುದಾದರೂ ವ್ಯಕ್ತಿ ಭೀಕರವಾಗಿ ಸಾವನ್ನಪ್ಪಿದ ಕನಸು ಬಿದ್ದರೆ ಅದೂ ಅಶುಭದ ಸೂಚಕ ಎಂದು ನಂಬಲಾಗಿದೆ.

Join Nadunudi News WhatsApp Group

Sleeping dream news

ಇನ್ನು ಐದನೆಯದಾಗಿ ನಗುವುದು ಮತ್ತು ಕುಣಿಯುವುದು, ಸ್ನೇಹಿತರೆ ನಗುವುದು ಮತ್ತು ಕುಣಿಯುವುದು ಎಲ್ಲರಿಗೂ ಆರೋಗ್ಯಕ್ಕೆ ಒಳ್ಳೆಯದು, ಆದರೆ ಎಚ್ಚರದಲ್ಲಿ ಇದ್ದಾಗ ಮಾತ್ರ, ಹೌದು ಮಲಗಿದ್ದಾಗ ಯಾವುದೋ ಒಬ ವ್ಯಕ್ತಿ ವಿಚಿತ್ರವಾಗಿ ನಗುವ ಅಥವಾ ಕುಣಿಯುವ ಕನಸು ನಿಮಗೆ ಬಿದ್ದರೆ ಅದೂ ಸಾವಿನ ಸುಕ್ಕಿನ ಎಂದು ಹೇಳುತ್ತದೆ ಸ್ವಪ್ನಶಾಸ್ತ್ರ. ಇನ್ನು ಆರನೆಯದಾಗಿ ಕಡುಗೆಂಪು ಸೀರೆಯ ಹೆಂಗಸು ಒಣಗಿದ ಹೂವನ್ನ ಮುಡಿದುಕೊಂಡು ಅದು ಸಾವಿನ ಸೂಚನೆ ಎಂದು ಹೇಳಲಾಗಿದೆ. ಇನ್ನು ಏಳನೆಯದಾಗಿ ನಿಮ್ಮ ಕನಸಿನಲ್ಲಿ ಪದೇ ಪದೇ ಕಾಗೆಗಳು ಕಾಣಿಸಿಕೊಳ್ಳುತ್ತಿದ್ದರೆ ಸದ್ಯದಲ್ಲೇ ನಿಮಗೆ ಯಾರದ್ದೋ ಮೃತ್ಯು ಸಮಾಚಾರ ಬರಲಿದೆ ಅನ್ನುವುದರ ಸೂಚನೆ ಅಡಗಿದೆ. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group