Smart Meter: ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ, ಬಂತು ಸ್ಮಾರ್ಟ್ ಮೀಟರ್.

ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ

Smart Electricity Meter: ಸದ್ಯ ರಾಜ್ಯದೆಲ್ಲೆಡೆ ಬೆಲೆ ಏರಿಕೆ ಹೆಚ್ಚುತ್ತಿದೆ. ವಸ್ತುಗಳ ಬೆಲೆ ಏರಿಕೆಯ ಜತೆಗೆ ವಿದ್ಯುತ್ ಬಿಲ್ ಕೂಡ ಇತ್ತೀಚಿಗೆ ಹೆಚ್ಚು ಹೆಚ್ಚು ಬರುತ್ತಿದೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನ ಸೌಲಭ್ಯವಿದ್ದರೂ ಕೂಡ ಫಲಾನುಭವಿಗಳು ಹೆಚ್ಚುವರಿ ಬಳಕೆಗೆ ಹಣವನ್ನು ಪಾವತಿಸಬೇಕಿದೆ. ಹೀಗಿರುವಾಗ ಹೆಚ್ಚುವರಿ ವಿದ್ಯುತ್ ಗೆ ಬಿಲ್ ಹೆಚ್ಚು ಬರುತ್ತಿರುವ ಬಗ್ಗೆ ಗ್ರಾಹಕರು ದೂರುತ್ತಿದ್ದಾರೆ.

ಹೆಚ್ಚು ವಿದ್ಯುತ್ ಬಿಲ್ ಬರುತ್ತಿರುವ ಕಾರಣ ಜನರು ವಿದ್ಯುತ್ ಅನ್ನು ಬಳಸಲು ಹಿಂದೇಟು ಹಾಕುವಂತಾಗುತ್ತಿದೆ. ಸದ್ಯ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನಬಹುದು. ನೀವು ಇನ್ನುಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸದೇ ವಿದ್ಯುತ್ ಅನ್ನು ಬಳಸಿಕೊಳ್ಳಬಹುದು. ಅದು ಹೇಗೆ ಎನ್ನುವ ಬಗ್ಗೆ ನಾವೀಗ ಮಾಹಿತಿ ನೀಡಲಿದ್ದೇವೆ.

Smart Electricity Meter
Image Credit: Diversegy

ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ
ಜನಸಮಾನ್ಯರು ಹೆಚ್ಚು ವಿದ್ಯುತ್ ಬಿಲ್ ಬರುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಅನೇಕರು ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದರು. ಜನಸಾಮಾನ್ಯರ ಸಂಕಷ್ಟವನ್ನು ನೀಗಿಸಲು ವಿದ್ಯುತ್ ಇಲಾಖೆಯು ಈಗ ಮುಂಗಡವಾಗಿ ರಿಚಾರ್ಜ್ ಮಾಡಿ ವಿದ್ಯುತ್ ಬಳಸುವ ಸ್ಮಾರ್ಟ್ ವಿದ್ಯುತ್ ಮೀಟರ್ ಜಾರಿಗಳಿಸಲು ನಿರ್ಧರಿಸಿದೆ. ಇದರಿಂದ ಗ್ರಾಹಕರು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಎಷ್ಟು ವಿದ್ಯುತ್ ಬಳಸುತ್ತೇವೋ ಅಷ್ಟು ಮಾತ್ರ ರೀಚಾರ್ಜ್ ಮಾಡಿ ಬಳಸುವ ಸೌಲಭ್ಯ ಲಭ್ಯವಾಗಲಿದೆ. ಇಂತಹ ಸ್ಮಾರ್ಟ್ ವಿದ್ಯುತ್ ಮೀಟರ್‌ ಗಳನ್ನು ಭಾರತದ ಪ್ರತಿ ಮನೆಯಲ್ಲೂ ಅಳವಡಿಸುವುದಾಗಿ ವಿದ್ಯುತ್ ಇಲಾಖೆ ಭರವಸೆ ನೀಡಿದೆ.

ಬಂತು ಸ್ಮಾರ್ಟ್ ಮೀಟರ್
ಈ ಸ್ಮಾರ್ಟ್ ಎಲೆಕ್ಟ್ರಿಕ್ ಸಿಟಿ ಮೀಟರ್‌ ಗಳಲ್ಲಿ 4G ಸಿಮ್‌ ಗಳನ್ನು ಅಳವಡಿಸಲಾಗುತ್ತದೆ. ಇದು ನಿಧಾನ ವಿದ್ಯುತ್ ಬಳಕೆ ಮತ್ತು ಸಮತೋಲನದ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ. ಜೊತೆಗೆ, ಯಾವುದೇ ಸಮಸ್ಯೆಗಳಿದ್ದರೆ, ಅದನ್ನು ನಿಮ್ಮ ಮೊಬೈಲ್‌ ಗೆ ನವೀಕರಿಸಲಾಗುತ್ತದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಮೀಟರ್‌ ಗಳ ಸಮಸ್ಯೆಗಳು ಕೊನೆಗೊಳ್ಳಲಿವೆ.

ಈ ಸ್ಮಾರ್ಟ್ ಮೀಟರ್ ಅನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ, ವಿದ್ಯುತ್ ಸಂಪೂರ್ಣವಾಗಿ ಖರ್ಚಾದ ನಂತರ ನಿಮ್ಮ ಮೊಬೈಲ್‌ ಗೆ ಸಂದೇಶ ಬರುತ್ತದೆ. ನಂತರ ಸ್ಮಾರ್ಟ್ ಫೋನ್ ಸಿಮ್ ರೀಚಾರ್ಜ್ ನಂತೆ ಸ್ಮಾರ್ಟ್ ಮೀಟರ್ ಗಳನ್ನು ರೀಚಾರ್ಜ್ ಮಾಡಬಹುದು ಮತ್ತು ವಿದ್ಯುತ್ ಬಳಸಬಹುದು. ಹಾಗಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಅದಲ್ಲದೆ ಈ ಹಿಂದೆ ವಿದ್ಯುತ್ ಬಳಸದೇ ಇದ್ದವರು ಕನಿಷ್ಠ ವಿದ್ಯುತ್ ಬಿಲ್ ಕಟ್ಟಬೇಕಿತ್ತು. ಆದರೆ ಇನ್ನು ಮುಂದೆ ಅಂತಹ ಸಮಸ್ಯೆಗಳಿರುವುದಿಲ್ಲ.

Join Nadunudi News WhatsApp Group

Smart Electricity Meter Latest News
Image Credit: how2electronics

Join Nadunudi News WhatsApp Group