ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ , ಕಿಚ್ಚನ ಪ್ರಶ್ನೆಗಳಿಗೆ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳು ಇಲ್ಲವಾದರೆ ಉಪ್ಪಿಲ್ಲದ ಊಟವಿದ್ದಂತೆ. ಹೌದು ಇನ್ನು ದಿನನಿತ್ಯದ ಆಗುಹೋಗುಗಳನ್ನು ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯ ಮಾಡಿ ಅಥವಾ ಪೋಸ್ಟ್ ಗಳ ಮೂಲಕವೋ ಜನರಿಗೆ ತಲುಪಿಸಿ ಅದೆಷ್ಟೋ ಬದಲಾವಣೆಗಳಿಗೂ ಸಹ ಟ್ರೋಲ್ ಪೇಜ್ ಗಳು ಕಾರಣವಾಗಿವೆ ಎನ್ನಬಹುದು.

ಅಷ್ಟೇ ಅಲ್ಲದೇ ಕೊರೊನಾ ಸಮಯದಲ್ಲಾಗಬಹುದು ಬೇರೆ ಸಾಕಷ್ಟು ಕಷ್ಟದ ಸಮಯದಲ್ಲಿ ಬಹಳಷ್ಟು ಜನರಿಗೆ ಟ್ರೋಲ್ ಪೇಜ್ ಗಳು ನೆರವಾಗಿದ್ದು ಇನ್ನೂ ಹೇಳಬೇಕೆಂದರೆ ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾದ ಮನರಂಜನೆಯನ್ನು ನೀಡುತ್ತಾ ಮನುಷ್ಯ ಆರೋಗ್ಯವಂತನಾಗಿ ಇರುವಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಟ್ರೋಲ್ ಪೇಜ್ ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಇತ್ತ ಈ ಟ್ರೊಲ್ ಪೇಜ್ ಗಳ ಮೂಲಕವೇ ಅದೆಷ್ಟೋ ಮಂದಿ ಬೆಳಕಿಗೆ ಬಂದು ಫೇಮಸ್ ಆಗಿದ್ದಾರೆ. ಈ ಸಾಲಿಗೆ ಹೆಚ್ಚು ಸೇರುವ ನಟಿ ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಹೌದು ಟಿಕ್ ಟಾಕ್ ಮೂಲಕ್ಷೇ ಫೇಮಸ್ ಆಗಿದ್ದ ಈ ನಟಿ ಟ್ರೊಲ್ ಪೇಜ್ ಗಳಲ್ಲೇ ಹೆಚ್ಚು ಟ್ರೊಲ್ ಆದ ನಟಿ ಎಂದರೆ ತಪ್ಪಾಗಲಾರದು. ಸದ್ಯ ಏಕೆ ಈಗ ಬಿಗ್ಬಾಸ್ ಪ್ರವೇಶ ಮಾಡಿದ್ದಾಳೆ.

ಹೌದು ಕೊನೆಗೂ ಸೋನು ಗೌಡ ಬಿಗ್ಬಾಸ್ ಮನೆಗೆ ಪ್ರವೇಶ ಮಾಡಿ ಸೀಸನ್ 9 ರ ಓಟಿಟಿ ಸೀಸನ್ ನ ಎರಡನೇ ಸ್ಪರ್ದಿಯಾಗಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ . ಇನ್ನು ವೇದಿಕೆ ಮೇಲೆ ಬರುತ್ತಲೇ ಕಿಚ್ಚ ಅವರು ಸೋನು ಅವರನ್ನು ಸ್ವಾಗತಿಸಿದ್ದಾರೆ. ಹಾಗೆಯೆ ಸೋನು ಗೌಡ ಬಗ್ಗೆ ಬಿಗ್ ಬಾಸ್ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ . ಇದಕ್ಕೆ ಸೋನು ಗೌಡ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸಿದ್ದಾರೆ.

ಹಾಗೆಯೆ ಈ ಸೀಸನ್ ಗೆ ಹೇಗೆ ತಯಾರಾಗಿದ್ದೀರಿ ಕಿಚ್ಚ ಎಂದು ಕೇಳಿದ್ದಕ್ಕೆ ನಾನು ಯಾವತ್ತೂ ತಯಾರಾಗಿಲ್ಲ ನೇರವಾಗಿ ಬಂದಿದ್ದನ್ನು ಮಾತಾಡುತ್ತೇನೆ ಎಂದು ಹೇಳಿದ್ದಾಳೆ. ನಿಜಕ್ಕೂ ಬಿಗ್ ಬಾಸ್ ಮನೆಗೆ ಇದೀಗ ಸೋನು ಗೌಡ ಎಂಟ್ರಿ ಎಲ್ಲರ ತಲೆಕೆಡಿಸಿದೆ ಎಂದರೆ ತಪ್ಪಾಗಲಾರದು . ಇನ್ನುಇಡೀ ಸೀಸನ್ ಹೇಗಿರಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

Join Nadunudi News WhatsApp Group

Join Nadunudi News WhatsApp Group