ಹೊಸ ಉದ್ಯಮ ಆರಂಭಿಸಿದ ನಟ ಸ್ರಜನ್ ಲೋಕೇಶ್, ಯಾವ ಬ್ಯುಸಿನೆಸ್ ಗೊತ್ತಾ ನೋಡಿ

ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ. ಕಲಾವಿದರ ಕುಟುಂಬದಲ್ಲಿ ಜನಿಸಿದ ಸೃಜನ್ ಲೋಕೇಶ್, ಬಾಲ ನಟರಾಗಿ ಒಟ್ಟು 4 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ನಟರಾಗಿ ಒಟ್ಟು 15 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಕನ್ನಡ ಧಾರಾವಾಹಿ ಹಾಗೂ 2 ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ‘ಮಜಾ ವಿತ್ ಸೃಜ’ ಮತ್ತು ‘ಮಜಾ ಟಾಕೀಸ್’ ಕಾರ್ಯಕ್ರಮಗಳಿಂದ ಜನಪ್ರಿಯ. ಇದಲ್ಲದೆ ಇವರು ರೇಡಿಯೋ ಚಾನೆಲ್ ಗಳ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ.ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​  ಹೊಡೆದಿದ್ದೇನೆ'; ವೇದಿಕೆ ಮೇಲೆ ಅತ್ತ ಸೃಜನ್​ | Srujan lokesh cried after he  remembers his journey in raja rani ...

ಒಟ್ಟು 10 ಯಶಸ್ವಿ ಟಿವಿ ಶೋಗಳಲ್ಲಿ ಆಂಕರಿಂಗ್ ಮಾಡಿ, ಕರ್ನಾಟಕದ ಮನೆ ಮನಗಳಲ್ಲಿ ಸ್ಪೆಷಲ್ ವೆಲ್ ಕಮ್ ಗಿಟ್ಟಿಸಿಕೊಂಡಿರುವ ಸೃಜನ್ 2012-2013 ರಲ್ಲಿ ‘ಮಾಧ್ಯಮ ಅವಾರ್ಡ್’ ಹಾಗೂ 2012 ರಿಂದ ಇಲ್ಲಿಯವರೆಗೆ ಸತತವಾಗಿ ಎಲ್ಲಾ ವಾಹಿನಿಗಳಿಂದ ‘ಬೆಸ್ಟ್ ಆಂಕರ್ ಅವಾರ್ಡ್’ ಪಡೆದಿದ್ದಾರೆ.

ಸದ್ಯ ಈಗ ಸ್ರಜನ್ ಲೋಕೇಶ್ ನಟ ಸೃಜನ್ ಲೋಕೇಶ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಉದ್ಯಮ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಈಗಾಗಲೇ ಬೆಳ್ಳಂದೂರಿನಲ್ಲಿ ಅವರ ‘ಸೋಚಿ’ ಎಂಬ ರೆಸ್ಟೋರೆಂಟ್ ಇದ್ದು, ಈಗ ಕತ್ರಿಗುಪ್ಪೆ ಸರ್ಕಲ್ ಬಳಿ ‘ಕೋಕು’ ಕಿಚನ್ ಆರಂಭಿಸಿದ್ದಾರೆ.Srujan Lokesh ends 'Bhutharadhane' controversy with a sincere apology -  IBTimes India

ತಮ್ಮ ತಂದೆ ಲೋಕೇಶ್ ಅವರ ಹೆಸರಿನಲ್ಲಿ ಈ ರೆಸ್ಟೋರೆಂಟ್ ಅನ್ನು ಸೃಜನ್ ಲೋಕೇಶ್ ಆರಂಭಿಸಿದ್ದು, ಇದರ ಉದ್ಘಾಟನೆ ಸಂದರ್ಭದಲ್ಲಿ ಅವರ ತಾಯಿ ಗಿರಿಜಾ ಲೋಕೇಶ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಪೂಜಾ ಲೋಕೇಶ್, ಗ್ರೀಷ್ಮಾ ಮೊದಲಾದವರು ಹಾಜರಿದ್ದರು.

Join Nadunudi News WhatsApp Group

ಇಂಡಿಯನ್, ಕಾಂಟಿನೆಂಟಲ್ ಸೇರಿ ಆರೋಗ್ಯಕರ ಆಹಾರ ದೊರಕುವ ಈ ರೆಸ್ಟೋರೆಂಟ್ ನಲ್ಲಿ ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಎಲ್ಲ ಹಿರಿಯರ ಫೋಟೋಗಳು ಇವೆ. ನಮ್ಮ ತಂದೆಯವರನ್ನು ಎಲ್ಲರೂ ಲೋಕು ಎಂದು ಕರೆಯುತ್ತಿದ್ದರು. ಮೊಮ್ಮಕ್ಕಳು ಕೋಕು ಎನ್ನುತ್ತಿದ್ದರು. ಹೀಗಾಗಿ ಇದಕ್ಕೆ ‘ಕೋಕು ಕಿಚನ್’ ಎಂಬ ಹೆಸರಿಟ್ಟಿರುವುದಾಗಿ ಸೃಜನ್ ಲೋಕೇಶ್ ತಿಳಿಸಿದ್ದಾರೆ.Surjan Lokesh and wife Greeshma welcome their second child | Kannada Movie  News - Times of India

Join Nadunudi News WhatsApp Group