49 ನೇ ವಯಸ್ಸಿನಲ್ಲಿ ನಟಿ ತಾರಾ ಗರ್ಭಿಣಿಯಾಗಿದ್ದು ನಿಜವೇ , ಇಲ್ಲಿದೆ ನೋಡಿ ಸಿಹಿಸುದ್ದಿ

ತಾರಾ ಗರ್ಭಿಣಿ ಸ್ಯಾಂಡಲ್‌ವುಡ್ ನಟಿ ತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ತಾರಾ ಮತ್ತೆ ಗರ್ಭಿಣಿಯಾಗಿದ್ದಾರೆ, ಅದಕ್ಕೆ ಪೂರಕವೆಂಬಂತೆ ತಾರಾ ಗರ್ಭ ಧರಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಾರಾ ಅವರು ಎರಡನೇ ತಾಯಿ ಆಗ್ತಿದ್ದಾರಾ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.ಕನ್ನಡ ಚಿತ್ರರಂಗ ಮತ್ತು ರಾಜಕೀಯದ ಜೊತೆ ಕಿರುತೆರೆಯಲ್ಲೂ ಬ್ಯುಸಿಯಿರುವ ನಟಿ ತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೆ ಗರ್ಭಿಣಿಯಾಗಿರುವ ಫೋಟೋಗಳ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ತಾರಾ,

ಗರ್ಭಿಣಿಯಾಗಿರುವ ನಿಜ ಆದರೆ ನಿಜ ಜೀವನದಲ್ಲಿ ಅಲ್ಲ, ಬದಲಿಗೆ ತಾರಾ ನಟಿಸುತ್ತಿರುವ ಮುಂದಿನ ಚಿತ್ರದಲ್ಲಿ ಗರ್ಭಿಣಿ ಪಾತ್ರಕ್ಕೆ ಜೀವತುಂಬಿದ್ದಾರೆ. ಹಳದಿ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಬೇಬಿ ಬಂಪ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಬಿಸ್ ಬಾಸ್ ಸೀಸನ್ 8ರ ಖ್ಯಾತಿಯ ರಾಜೀವ್ ನಟನೆಯ `ಉಸಿರೇ ಉಸಿರೇ’ ಚಿತ್ರದಲ್ಲಿ ತಾರಾ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ.

Tara Lovely Photos With Husband & Son | kannada Actress Tara | Tara Husband  - YouTube

ಈ ಚಿತ್ರದಲ್ಲಿನ ತಾರಾ ಅವರ ಬೇಬಿ ಬಂಪ್ ಫೋಟೋಗಳು ಈಗ ವೈರಲ್ ಆಗುತ್ತಿದೆ. ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಜಿ ಘೋಷ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.ಇನ್ನು ನಟಿ ತಾರಾ ಅವರ ಅಭಿನಯಿಸಿರುವ ಕಲಾತ್ಮಕ ಸಿನಿಮಾಗಳು ಹೆಚ್ಚು ಹೆಸರನ್ನು ತಂದು ಕೊಟ್ಟಿದ್ದು ಕಲಾತ್ಮಕ ಚಿತ್ರದಲ್ಲಿ ನಾಯಕಿ ಪ್ರಧಾನ ಪಾತ್ರಗಳನ್ನು ತುಂಬಾ ಮನೋಜ್ಞವಾಗಿ ಅಭಿನಯ ಮಾಡಿದ್ದಾರೆ.

1990 ರಲ್ಲಿ ಬಿಡುಗಡೆಯಾದ ಗಿರೀಶ್ ಕಾರ್ನಾಡ್ ರವರ ನಿರ್ದೇಶನದ ಕಾನೂರು ಹೆಗ್ಗಡತಿ ಸಿನಿಮಾ ಅವರಿಗೆ ಅತಿಹೆಚ್ಚಿನ ಹೆಸರು ತಂದುಕೊಟ್ಟಿದ್ದು ಈ ಚಿತ್ರದಲ್ಲಿನ ಇವರ ಉತ್ತಮ ನಟನೆಗೆ ಫಿಲಂ ಫೇರ್ ಅವಾರ್ಡ್ ಕೂಡ ದೊರತಿದೆ. ಈ ಚಿತ್ರಕ್ಕೆ ನ್ಯಾಷನಲ್ ಫಿಲಂ ಫೇರ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದೊದಗಿದ್ದು ನಂತರ ಮತದಾನ ಹಸೀನಾ ಚಿತ್ರಗಳಲ್ಲಿ ಇವರ ಅಭಿನಯಕ್ಕೆ ರಾಷ್ಟ್ರ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ದೊರತಿರುವುದು ವಿಶೇಷ.Actress-politician Tara harassed domestic help? | Kannada Movie News -  Times of India

Join Nadunudi News WhatsApp Group

ಹೀಗೆ ನಟಿ ತಾರಾ ಅವರು ತಮ್ಮ ಸಿನಿ ಜೀವನದಲ್ಲಿ ಹತ್ತು ಹಲವು ಪ್ರಶಸ್ತಿಗಳು ಹಾಗೂ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದು, ತಾರಾ ಅವರು 2012 – 13ರ ಸಮಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Join Nadunudi News WhatsApp Group