Tata Harrier EV: ಒಮ್ಮೆ ಚಾರ್ಜ್ ಮಾಡಿದರೆ 500 Km ಮೈಲೇಜ್, ಈ ಟಾಟಾ ಕಾರಿಣೇ ಮುಂದೆ ಸೋತ ಮಹಿಂದ್ರಾ

ಸಿಂಗಲ್ ಚಾರ್ಜ್ ನಲ್ಲಿ 500 Km ಮೈಲೇಜ್ ನೀಡಲಿದೆ ಈ EV

Tata Harrier EV Price And Feature: ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗಿವೆ. ಕಾರು ಖರೀದಿ ಮಾಡುವವರಿಗೆ ಕಾರಿನ ಆಯ್ಕೆಯಲ್ಲಿ ಯಾವುದೇ ಕೊರತೆ ಅಂತೂ ಆಗುವುದಿಲ್ಲ ಎನ್ನಬಹುದು. ಅದರಲ್ಲೂ ಇತ್ತೀಚಿಗೆ ಮಾರುಕಟ್ಟೆಯಲ್ಲಿ Electric ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ.

ಇದೀಗ ಮಾರುಕಟ್ಟೆಯಲ್ಲಿ ಹೊಸ ಕಾರು ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಟಾಟಾ (Tata) ಕಂಪನಿಯ ಈ ಎಲೆಕ್ಟ್ರಿಕ್ ಕಾರು ಅತ್ತ್ಯುತ್ತಮ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ಟಾಟಾ ಕಂಪನಿಯ ಈ ನೂತನ ಕಾರ್ ಕೂಡ ಇದೆ.

Tata Harrier EV Price And Features
Image Credit: CarWale

ಪೆಟ್ರೋಲ್ ಖರ್ಚನ್ನು ಉಳಿಸಲು ಲಾಂಚ್ ಆಗಿದೆ ಈ ಬೆಸ್ಟ್ ಕಾರ್
ಟಾಟಾ ಈಗಾಗಲೇ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಬರುವಿಕೆಯ ಬಗ್ಗೆ ಮಹತ್ವದ ವಿಷಯವನ್ನು ಪ್ರಸ್ತುತಪಡಿಸಿದೆ. ಮಾಹಿತಿಯ ಪ್ರಕಾರ, ಕಂಪನಿಯು ಈ ವರ್ಷ ಈ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟಾಟಾ ಮೋಟಾರ್ಸ್ ಈ ವಾಹನವನ್ನು ಮಾರ್ಚ್ 31, 2025 ರೊಳಗೆ ಬಿಡುಗಡೆ ಮಾಡಲು ಯೋಜಿಸಿದೆ. ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಅನ್ನು ಕಂಪನಿಯು ಕಳೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು. ಈ ಹಬ್ಬದ ಋತುವಿನಲ್ಲಿ ಕರ್ವ್ ಮಾರುಕಟ್ಟೆಗೆ ಬರಲಿದೆ. ಇದು ಕರ್ವ್ ನಂತೆ ಟಾಟಾದ ಮುಂದಿನ ಉಡಾವಣೆಯಾಗಬಹುದು ಎಂಬುದು ಎಲ್ಲರ ಅಭಿಪ್ರಾಯ.

Tata Harrier EV Price
Image Credit: CarWale

ಸಿಂಗಲ್ ಚಾರ್ಜ್ ನಲ್ಲಿ 500 Km ಮೈಲೇಜ್
ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ರೂ.30 ಲಕ್ಷದ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಪೂರ್ಣ ಚಾರ್ಜ್ ಮಾಡಿದರೆ 500 ಕಿಮೀ ಮೈಲೇಜ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 12.3-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಎಸಿ ಮತ್ತು ಹತ್ತಾರು ಇತರ ವೈಶಿಷ್ಟ್ಯಗಳು ಲಭ್ಯವಿದೆ ಎಂದು ಹೇಳಲಾಗುತ್ತದೆ.

ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಹೊಸ ಬ್ಲಾಂಕ್ಡ್-ಆಫ್ ಗ್ರಿಲ್, ಕೋನೀಯ ಕ್ರೀಸ್‌ ಗಳೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್, ಸ್ಪ್ಲಿಟ್ ಸೆಟಪ್ ಮತ್ತು ಕಪ್ಪು ಹೌಸಿಂಗ್‌ ನೊಂದಿಗೆ ಹೆಡ್‌ ಲ್ಯಾಂಪ್‌ ಗಳು ಮತ್ತು ಅದರ ಅಗಲದಲ್ಲಿ ಹೊಸ ಎಲ್ಇಡಿ ಲೈಟ್ ಬಾರ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಬ್ಲಾಂಕ್ಡ್-ಆಫ್ ಪ್ಯಾನೆಲ್‌ನೊಂದಿಗೆ ಮರುವಿನ್ಯಾಸಗೊಳಸಿದೆ.

Join Nadunudi News WhatsApp Group

Tata Harrier EV Mileage
Image Credit: CarWale

Join Nadunudi News WhatsApp Group