ದೇಶದ ಖ್ಯಾತ ಕ್ರಿಕೆಟ್ ಆಟಗಾರ ಕರೋನ ಮಹಾಮಾರಿಗೆ ಬಲಿ, ಕಂಬನಿ ಮಿಡಿದ ಕ್ರಿಕೆಟ್ ಜಗತ್ತು.

ಯಾಕೋ ಚಿತ್ರರಂಗ ಮಾತ್ರವಲ್ಲದೆ ಕ್ರೀಡಾ ಜಗತ್ತಿನ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ. ಹೌದು ಕರೋನ ಮಹಾಮಾರಿ ಒಬ್ಬರನ್ನ ಆದಮೇಲೆ ಒಬ್ಬರನ್ನ ಬಲಿ ತೆಗೆದುಕೊಳ್ಳುತ್ತಿದ್ದು ಇದು ಜನರ ಆಘಾತಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಬಹಳ ವೇಗವಾಗಿ ಹರಡುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮವನ್ನ ಕೈಗೊಂಡರು ಕೂಡ ಕರೋನ ಮಹಾಮಾರಿಯ ಹರಡುವಿಕೆಯನ್ನ ತಡೆಗಟ್ಟಲು ಸಾಧ್ಯವಾಗದೆ ಇರುವುದು ಬಹಳ ಬೇಸರದ ಸಂಗತಿ ಕೂಡ ಕೂಡ ಆಗಿದೆ ಎಂದು ಹೇಳಬಹುದು.

ಈ ಹಿಂದೆ ಚಿತ್ರರಂಗದ ಹಲವು ಗಣ್ಯ ನಟ ನಟಿಯರು ಮತ್ತು ಕಲಾವಿದರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ ಈಗ ದೇಶದ ಹೆಮ್ಮೆಯ ಕ್ರಿಕೆಟ್ ಆಟಗಾರ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಅಭಿಮಾನಿಗಳ ಮುಖದಲ್ಲಿ ಬೇಸರದ ಛಾಯೆಯನ್ನ ಮೂಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆ ಕ್ರಿಕೆಟ್ ಆಟಗಾರ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ರಾಜಸ್ಥಾನದ ಪ್ರತಿಭಾವಂತ ಸ್ಪಿನ್ನರ್ ಎನಿಸಿಕೊಂಡಿದ್ದ ವಿವೇಕ್ ಯಾದವ್ ಅವರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಗೆ ಕ್ರಿಕೆಟ್ ಜಗತ್ತಿಗೆ ವಿದಾಯವನ್ನ ಹೇಳಿದ್ದ ವಿವೇಕ್ ಯಾದವ್ ಅವರ ವಯಸ್ಸು ಕೇವಲ 36 ವರ್ಷ.

Vivek yadav

ಇನ್ನು ವಿವೇಕ್ ಯಾದವ್ ಅವರು ಕೆಲವು ಸಮಯದಿಂದ ಪಿತ್ತ ಜನಕಾಂಗದ ಕ್ಯಾನ್ಸರ್ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು ಮತ್ತು ಈ ಸಮಸ್ಯೆಯ ನಡುವೆ ಕೆಲವು ದಿನಗಳ ಹಿಂದೆ ವಿವೇಕ್ ಯಾದವ್ ಅವರಿಗೆ ಕರೋನ ಮಹಾಮಾರಿ ಸೋಂಕು ತಗುಲಿರುವುದು ಕೂಡ ದೃಢಪಟ್ಟಿತ್ತು. ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದ ವಿವೇಕ್ ಯಾದವ್ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಭಾರತೀಯ ತಂಡದ ಮಾಜಿ ಕ್ರಿಕೆಟಿಗ ಮತ್ತು ಇತ್ತೀಚೆಗೆ ಐಪಿಎಲ್ 2021 ರಲ್ಲಿ ನಿರೂಪಕರಾಗಿರುವ ಆಕಾಶ್ ಚೋಪ್ರಾ ಅವರ ಹಠಾತ್ ನಿಧನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ನಲ್ಲಿ ಹಲವು ಸಾಧನೆಯನ್ನ ಮಾಡಿದ್ದ ವಿವೇಕ್ ಯಾದವ್ ಅವರು 2010–11ರ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖವಾದ ಪಾತ್ರವನ್ನ ಕೂಡ ವಹಿಸಿದ್ದರು. ಇನ್ನು ಐಪಿಎಲ್ ನಲ್ಲಿ ಡೆಲ್ಲಿ ತಂಡದಲ್ಲಿ ಸೇರಿಕೊಂಡರು, ಆದರೆ ಒಂದು ಪಂದ್ಯದಲ್ಲಿ ಆಡುವ ಭಾಗ್ಯ ವಿವೇಕ್ ಅವರಿಗೆ ಸಿಗಲಿಲ್ಲ. ವಿವೇಕ್ ಅವರ ಅಗಲಿಕೆಗೆ ಭಾರತ ಕ್ರಿಕೆಟ್ ತಂಡದ ಹಲವು ಆಟಗಾರರು ಕಂಬನಿಯನ್ನ ಮಿಡಿದಿದ್ದಾರೆ. ಏನೇ ಆಗಲಿ ಇದು ಕಲಿಯುವ ಅನ್ನುವುದು ಇನ್ನೊಮ್ಮೆ ಸಾಭೀತು ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಏನೇ ಆಗಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ವಿಧಿವಶರಾದ ವಿವೇಕ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Vivek yadav

Join Nadunudi News WhatsApp Group