ರಾಧಿಕಾಳನ್ನೇ ಮದುವೆಯಾಗುವೆ ಎಂದಾಗ ಯಶ್ ತಾಯಿಯ ಉತ್ತರ ಏನಾಗಿತ್ತು ಗೊತ್ತಾ, ಹೇಳಿದ್ದೆ ಬೇರೆ ನೋಡಿ

ಕನ್ನಡ ಚಿತ್ರರಂಗ ಕಂಡ ಓರ್ವ ಪ್ರತಿಭಾವಂತ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್ ಅವರು. ಜೀವನದುದ್ದಕ್ಕೂ ಅನೇಕ ಏಳು ಬೀಳುಗಳನ್ನು ಕಂಡು, ಚಿತ್ರರಂಗದಲ್ಲಿ ಯಾರ ಸಹಾಯವೂ ಕೂಡ ಪಡೆಯದೆ, ಇಡೀ ಭಾರತ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದ ‘ಅತ್ಯುತ್ತಮ ನಟ’. ಇನ್ನು ನಟ ಯಶ್ ಅವರ ಹುಟ್ಟಿದ ಹೆಸರು ನವೀನ್ ಕುಮಾರ್ ಗೌಡ ಎಂದು. ಹಾಸನ ಜಿಲ್ಲೆಯ, ಭುವನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು,ನಂತರ ವಿದ್ಯಾಭ್ಯಾಸ ಮಾಡಿದ್ದು ನೆಲೆಸಿದ್ದೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ .

ಪ್ರಾರಂಭಿಸಿದ ದಿನಗಳಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೊಂದು ಮೂರು ಬಾಗಿಲು, ಪ್ರೀತಿ ಇಲ್ಲದ ಮೇಲೆ, ಸಿಲ್ಲಿಲಲ್ಲಿ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ಯಶ್, ನಂತರ 2007 ರಲ್ಲಿ ಜಂಭದ ಹುಡುಗಿ ಎಂಬ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಾರೆ.Popular Kannada actors Radhika and Yash get married. See pics - Hindustan  Times

ತದನಂತರ 2008 ರಲ್ಲಿ ಮೊಗ್ಗಿನ ಮನಸ್ಸು ಎಂಬ ಚಿತ್ರದಲ್ಲಿ ತಮ್ಮ ಭಾವಿ ಪತ್ನಿಯಾಗಿದ್ದ ರಾಧಿಕಾ ಪಂಡಿತ್ ಅವರೊಂದಿಗೂ ಸಹ ಪೋಷಕ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಎಂಬ ಫಿಲಂಫೇರ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ.

ಇದಾದ ಬಳಿಕ ಅದೇ ವರ್ಷದಲ್ಲಿ ‘ರಾಕಿ’ ಎಂಬ ಸಿನಿಮಾ ಮೂಲಕ ಪರಿಪೂರ್ಣ ನಾಯಕ ನಟರಾಗಿ ಹೊರಹೊಮ್ಮಿದ ಅವರು ಕಳ್ಳರ ಸಂತೆ,ಗೋಕುಲ, ಮೊದಲಾಸಲ, ರಾಜಧಾನಿ ಎಂಬ ಸಾಲಿಸಾಲು ಚಿತ್ರಗಳಲ್ಲಿ ಅಭಿಮಯಿಸುತ್ತಾರೆ. ಆದರೆ ಈ ಸಿನಿಮಾಗಳು ಯಶ್ ಅವರಿಗೆ ದೊಡ್ಡ ಯಶಸ್ಸು ತಂದುಕೊಡಲಿಲ್ಲ. ನಂತರ ಅವರಿಗೆ ಅದೃಷ್ಟ ಖುಲಾಯಿಸಿದ್ದೆ 2010.. ಹೌದು ಆ ವರುಷ ತೆರೆಕಂಡಿದ್ದ ಕಿರಾತಕ ಎಂಬ ಹಾಸ್ಯ ಮಿಶ್ರಿತ ಚಿತ್ರ, ಇಲ್ಲಿಂದ ಯಶ್ ಹಿಂತಿರುಗಿ ನೋಡೇ ಇಲ್ಲ.

Yash-Radhika all set to get hitched
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರನ್ನು ಬಹುಕಾಲ ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ. ಇನ್ನು ಮೊದಲಬಾರಿ ಮಾಡುವೆ ವಿಚಾರವನ್ನು ಯಶ್ ತನ್ನ ತಾಯಿ ಬಳಿ ಹೇಳಿಕೊಂಡಾಗ ಅವರು ಹೇಳಿದ್ದು ಒಂದೇ ಮಾತು ಅದೇನೆಂದರೆ ನೋಡಪ್ಪ ಯಶ್ ಇದು ಬಣ್ಣದ ಬದುಕು, ನಾಳೆ ನೀನು ಇಡೀ ದಿನ ಸಿನಿಮಾದಲ್ಲಿ ಬ್ಯುಸಿ ಆಗಿರ್ತ್ಯಾ! ಆ ಸಮಯದಲ್ಲಿ ರಾಧಿಕಾ ಮನೆಯನ್ನು ನಡೆಸಬೇಕು”.

Join Nadunudi News WhatsApp Group

ಮಾತನ್ನು ಮುಂದುವರಿಸಿದ ಯಶ್ ತಾಯಿ ಹೇಳಿದ್ದು ಹೀಗೆ. “ರಾಧಿಕಾ ಒಳ್ಳೆಯ ಹುಡುಗಿ, ಬಹಳ ಸುಖವಾಗಿ ಬೆಳೆದು ಬಂದವಳು. ನೀನು ಬಹಳ ಕಷ್ಟ ಪಟ್ಟು ಸೊನ್ನೆಯಿಂದ ಬೆಳೆದು ಬಂದವನು. ಏನೇ ನಿರ್ಧಾರ ಮಾಡಿದ್ದರೂ ಸಾವಿರ ಸಲ ಯೋಚನೆ ಮಾಡು, ರಾಧಿಕಾ ಪಂಡಿತ್ ಅವರಿಗೆ ಯಾವುದೇ ಕಾರಣಕ್ಕೂ ಕಷ್ಟ ಆಗಬಾರದು, ತೊಂದರೆ ಆಗಬಾರದು” ಎಂದು ಯಶ್ ತಾಯಿ ಪುಷ್ಪ ಅವರು ಯಶ್ ಗೆ ಸಲಹೆ ನೀಡಿದ್ದರು.Yash's Mother Accused Of Not Paying Rent Worth Rs 23 Lakh | Yash Mother  Asked To Vacate House, But Approaches Supreme Court - Filmibeat

ನಿಜಕ್ಕೂ ರಾಧಿಕಾ ಇಂದು ಅದೇ ಕೆಲಸ ಮಾಡುತ್ತಿದ್ದಾರೆ, ಯಶ್ ಇತ್ತ ದೊಡ್ಡ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ ಆದರೆ ರಾಧಿಕಾ ದೊಡ್ಡ ನಟಿಯಾದರು ಸಹ ಮಕ್ಕಳ ಆರೈಕೆ ಮಾಡುತ್ತ ಕುಟುಂಬ ನಡೆಸುತ್ತ ಆದರ್ಶ ಹೆಂಡತಿ ಎನಿಸಿಕೊಂಡಿದ್ದಾರೆ

Join Nadunudi News WhatsApp Group