ಯಶ್ ರಾಧಿಕಾ ಮದುವೆ ಕಾರ್ಡಿನಲ್ಲಿ ಏನೆಂದು ಬರೆದಿದ್ದರು ಗೊತ್ತಾ, ಇಷ್ಟೊಂದು ಸಿಂಪಲ್ ನೋಡಿ

ಟಿವಿ ಕಿರುತೆರೆಗಳಲ್ಲಿ ನಟಿಸಿದ ರಾಧಿಕಾ ” ಮೊಗ್ಗಿನ ಮನಸ್ಸು” ಚಿತ್ರದ ಮೂಲಕ ಪ್ರಪ್ರಥಮವಾಗಿ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. ಈ ಚಿತ್ರಕ್ಕೆ ಇವರಿಗೆ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿ ನೀಡಲಾಯಿತು.2012 ರಲ್ಲಿ, ಬಿಡುಗಡೆಗೊಂಡ ಯೋಗರಾಜ್ ಭಟ್ ರ “ಡ್ರಾಮಾ” ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಯಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದರಿಂದ ರಾಧಿಕಾ ಅವರಿಗೂ ಸಹ ಒಳ್ಳೆ ಇಮೇಜ್ ಬಂತು. ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿಯಲ್ಲಿ ಪಂಡಿತ್ ಯಶ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲಿ ಈ ಜೊಡಿ ಮೋಡಿ ಮಾಡಿದೆ.ಕನ್ನಡದ ಅನೇಕ ನಟರೊಡನೆ ಅಭಿನಯಿಸಿರುವ ರಾಧಿಕಾ ಪಂಡಿತ್ ಈಗ ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ.

Yash, Radhika tie the knot in dream wedding | Deccan Heraldಚಂದನವನದ ಮೋಸ್ಟ್ ಲವ್ಲೀ ಜೋಡಿಗಳ ಪಟ್ಟಿಯಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರಹ ಹೆಸರು ಮೊದಲ ಸ್ಥಾನದಲ್ಲಿದೆ. ಹೌದು, ಜೊತೆಯಾಗಿ ಸಿನಿಮಾ ಪಯಣ ಶುರು ಮಾಡಿದ ಈ ಜೋಡಿಗಳು ಸಿನಿ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನಿಜ ಜೀವನದಲ್ಲಿ ರಿಯಲ್ ಜೋಡಿಗಳಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು. ಅಂದಹಾಗೆ, ಸಿನಿ ಬದುಕಿನಲ್ಲಿ ಶುರುವಾದ ಇವರ ಪರಿಚಯ ಸ್ನೇಹಕ್ಕೆ ತಿರುಗಿತು.

ಆದಾದ ಬಳಿಕ ಈ ಇಬ್ಬರೂ ಸೆಲೆಬ್ರಿಟಿಗಳನ್ನು ಪ್ರೀತಿಸಲು ಶುರುವಿಟ್ಟರು. ಕೊನೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ರೀವಿಲ್ ಮಾಡಿದ್ದರು. ಆದಾದ ಬಳಿಕ 2016 ರಲ್ಲಿ ಡಿಸೆಂಬರ್ 11 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯಕ್ಕೆ ಸ್ಟಾರ್ ದಂಪತಿಗೆ ಇಬ್ಬರೂ ಮಕ್ಕಳಿದ್ದು, ನಟ ಯಶ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ರಾಧಿಕಾ ಪಂಡಿತ್ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.Yash and Radhika Pandit wedding: Couple ties the knot in lavish ceremony,  capping six-year romance-Entertainment News , Firstpost

ಅಂದಹಾಗೆ, ಆಗಾಗ ತಮ್ಮ ಹಾಗೂ ಮಕ್ಕಳ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.ಅಂದಹಾಗೆ, ಯಶ್ ದಂಪತಿಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ವಿಶೇಷತೆಗಳಿತ್ತು ಗೊತ್ತಾ?. ಹೌದು, ರಾಧಿಕಾ ಪಂಡಿತ್ ಅವರ ಮದುವೆಯ ಆಹ್ವಾನ ಪತ್ರಿಕೆ ಅತ್ಯಂತ ಸರಳವಾಗಿತ್ತು. ಕೆಂಪು ಮತ್ತು ಬಿಳಿ ಬಣ್ಣದ ವಿನ್ಯಾಸವನ್ನು ಮಾಡಲಾಗಿತ್ತು. ಇನ್ನು, ಯಾವುದೇ ಆಡಂಬರ ಹಾಗೂ ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು ‘ಮದುವೆಗೆ ಬನ್ನಿ’ ಎಂದಿದ್ದರು ಯಶ್.

Join Nadunudi News WhatsApp Group

ಎಲ್ಲರಿಗೂ ತಿಳಿದಿರುವಂತೆ ಮದುವೆ ಪತ್ರಿಕೆ ಎಂದ ಕೂಡಲೇ ಆರತಕ್ಷತೆ, ಮುಹೂರ್ತ, ಶುಭಲಗ್ನ, ಸಮಯ, ತಂದೆ-ತಾಯಿ ಹೆಸರು, ವಿಳಾಸ ಕೊನೆಯಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಬರೆಸಲಾಗಿರುತ್ತದೆ. ಆದರೆ ಈ ದಂಪತಿಗಳ ಮದುವೆ ಪತ್ರಿಕೆ ಕೊಂಚ ವಿಭಿನ್ನವಾಗಿಯೇ ಇತ್ತು.

Yash And Radhika Pandit Complete Four Years Of Marital Bliss, The Latter  Shares Celebration Picturesನುಡಿ ಮುತ್ತುಗಳೊಂದಿಗೆ ಎಲ್ಲರನ್ನೂ ಮದುವೆ ಆಹ್ವಾನ ಮಾಡಿದ್ದರು. ನಮಸ್ತೆ, ”ಇಲ್ಲಿ ಎಲ್ಲರೂ ಸಂಬಂಧಿಕರೇ.. ಇಲ್ಲಿ ಎಲ್ಲವೂ ಅನುಬಂಧವೇ.. ಸಹನೆ ಮರವನು ತಬ್ಬಿದ ಜೀವಲತೆಯಲಿ. ನಲುಮೆ ಹೂ ಅರಳಿದೆ….! ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ…! ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೇ….ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!. ಸಂಬಂಧಕ್ಕಿಂತ ಕುಟುಂಕ್ಕಿಂತ ದೊಡ್ಡದು ಯಾವುದೂ ಇಲ್ಲ.

ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರಾವ ಹೆಮ್ಮೆ ಬೇಕಿಲ್ಲ. ನಿಮ್ಮ ಪ್ರೀತ್ಯಾದರಗಳಿಗಿಂತ ಮಿಗಿಲಾದದ್ದು ಬೇರಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಜಾಸ್ತಿ..! ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ….! ದಯಮಾಡಿ ಸಕಲರೂ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ.ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ? | Yash and Radhika  pandit marriage invitation Specilites - Kannada Filmibeat

”-ಯಶ್ ಹಾಗೂ ರಾಧಿಕಾ. ತಮ್ಮ ಕಲ್ಯಾಣ ಸಮಾರಂಭಕ್ಕೆ ಸರ್ವರಿಗೂ ಪ್ರೀತಿಯಿಂದ ಆಹ್ವಾನ ಮಾಡಿರುವ ಯಶ್ ಹಾಗೂ ರಾಧಿಕಾ, ‘ಆಹ್ವಾನ ಪತ್ರಿಕೆ’ ಕೊನೆಯಲ್ಲಿ, ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದರು. ಒಟ್ಟಿನಲ್ಲಿ ಕ್ಯೂಟ್ ಜೋಡಿಗಳಲ್ಲಿ ಒಂದಾದ ಯಶ್ ದಂಪತಿಗಳ ಲಗ್ನ ಪತ್ರಿಕೆ ವಿಭಿನ್ನ ಹಾಗೂ ಹೊಸತನದಿಂದ ಕೂಡಿತ್ತು.

Join Nadunudi News WhatsApp Group