Axar Patel: ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಷರ್ ಪಟೇಲ್ ಏನು ಓದಿದ್ದಾರೆ ಗೊತ್ತಾ…? ನಿಜಕ್ಕೂ ಗ್ರೇಟ್.

ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಷರ್ ಪಟೇಲ್ ಏನು ಓದಿದ್ದಾರೆ ಗೊತ್ತಾ...?

Axar Patel New Update: ಈ ಬಾರಿ T20 ವಿಶ್ವಕಪ್ ಅನ್ನು ಗೆಲ್ಲುವ ಮೂಲಕ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸದ್ಯ ಟೀಮ್ ಇಂಡಿಯಾ ಭಾರತಕ್ಕೆ ಮರಳಿದ್ದು, ಇಂದು ಬೆಳಿಗ್ಗೆ ಅದ್ದೂರಿಯಾಗಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ. ಗೆಲುವಿನ ಖುಷಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಹೆಜ್ಜೆ ಹಾಕಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

ಇನ್ನು T20 ಪಂದ್ಯದ ಗೆಲುವಿನ್ನ ಟೀಮ್ ಇನ್ದಿಯ್ದ ಪ್ರತಿ ಆಟಗಾರು ಪ್ರಮುಖ ಪತ್ರ ವಹಿಸಿದ್ದಾರೆ. ಅದರಲ್ಲಿ ಟೀಂ ಇಂಡಿಯಾದ ಪ್ರತಿಭಾನ್ವಿತ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಒಬ್ಬರು. ಸದ್ಯ ನಾವೀಗ ಈ ಲೇಖನದ್ಲಲಿ ಅಕ್ಷರ್ ಪಟೇಲ್ ಅವರ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ನೀಡಲಿದ್ದೇವೆ.

Axar Patel New Update
Image Credit: NDTV

ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಷರ್ ಪಟೇಲ್ ಏನು ಓದಿದ್ದಾರೆ ಗೊತ್ತಾ…?
ಅಕ್ಷರ್ ಪಟೇಲ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಜೊತೆಯಾಟ ನಡೆಸಿ 47 ರನ್ ಕೊಡುಗೆ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಕ್ಷರ್ ಪಟೇಲ್ ಮೂಲತಃ ಗುಜರಾತ್ ನವರು. 1994ರಲ್ಲಿ ಜನಿಸಿದ ಅವರಿಗೆ ಈಗ 30 ವರ್ಷ. ತಂದೆ ರಾಜೇಶ್ ಪಟೇಲ್ ಮತ್ತು ತಾಯಿ ಪ್ರೀತಿ ಬೆನ್ ಪಟೇಲ್. ಅಕ್ಷರ್ ಪಟೇಲ್ ಮೂವರು ಮಕ್ಕಳಲ್ಲಿ ಒಬ್ಬರು. ಮಧ್ಯಮ ವರ್ಗದ ಬದುಕಿನಲ್ಲಿ ಬೆಳೆದವರು. ಕಳೆದ ವರ್ಷ ಅವರು ತಮ್ಮ ಗೆಳತಿ ಮೇಹಾ ಪಟೇಲ್ ಅವರನ್ನು ವಿವಾಹವಾದರು.

ಅಕ್ಷರ್ ಪಟೇಲ್ ಬಾಲ್ಯದಿಂದಲೂ ಓದಿನಲ್ಲಿ ತುಂಬಾ ಚುರುಕಾಗಿದ್ದ. ಟಾಪರ್ ಆಗಿದ್ದ ಅವರು ಎಂಜಿನಿಯರಿಂಗ್ ಓದಿದ್ದರು. ಅವರ ತಂದೆಗೆ ಅವರು ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಆದರೆ ಕ್ರಿಕೆಟ್‌ ನಲ್ಲಿ ಅವರ ಆಸಕ್ತಿಯನ್ನು ಕಂಡು ಕ್ರಿಕೆಟ್ ತರಬೇತಿ ಪಡೆಯಲು ಅವಕಾಶ ನೀಡಲಾಯಿತು. ಅಕ್ಷರ್ 2014ರಲ್ಲಿ ಟೀಂ ಇಂಡಿಯಾ ಸೇರಿದ್ದರು.ಆದರೆ ಆರಂಭದಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ.

ಅವರು 2012 ರಲ್ಲಿ ಮುಂಬೈ ಇಂಡಿಯನ್ಸ್, 2014 ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಲ್ಲಿ ಆಡಿದರು. ಅವರು ಈಗಲೂ ಡೆಲ್ಲಿ ಕ್ಯಾಪಿಟಲ್ಸ್‌ ಗಾಗಿ ಆಡುತ್ತಾರೆ. ದುರದೃಷ್ಟವಶಾತ್, ಕಳೆದ ಏಕದಿನ ವಿಶ್ವಕಪ್‌ ನಲ್ಲಿ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದರು, ಗಾಯದ ಕಾರಣದಿಂದ ಹೊರಗುಳಿಯಬೇಕಾಯಿತು. ಆದರೆ ಇದೀಗ ಟಿ20 ವಿಶ್ವಕಪ್‌ ನಲ್ಲಿ ಅವಕಾಶವನ್ನು ಬಳಸಿಕೊಂಡು ಸ್ಪಿನ್ ಬೌಲಿಂಗ್‌ ನೊಂದಿಗೆ ಬ್ಯಾಟ್ಸ್‌ ಮನ್ ಆಗಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.

Join Nadunudi News WhatsApp Group

Axar Patel Latest News
Image Credit: Indianexpress

Join Nadunudi News WhatsApp Group